ಬುಧವಾರ, ಜನವರಿ 20, 2021
16 °C
ಹೂಕೋಸು, ಎಲೆಕೋಸು, ಚವಳೆಕಾಯಿ, ಬೀಟ್‌ರೂಟ್‌ ಬೆಲೆ ಏರಿಕೆ

ಯಾದಗಿರಿ: ವಾರದ ಮಾರುಕಟ್ಟೆ ನೋಟ – ಸೊಪ್ಪು, ತರಕಾರಿ ಬೆಲೆ ಸ್ಥಿರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ, ಗೋಬಿ, ಕ್ಯಾಬೇಜ್, ಚವಳೆಕಾಯಿ ಬೆಲೆ ಏರಿಕೆಯಾಗಿದ್ದು, ಇನ್ನುಳಿದ ತರಕಾರಿ, ಸೊಪ್ಪುಗಳ ಬೆಲೆ ಯಥಾಸ್ಥಿತಿಯಲ್ಲಿದೆ.

ಕಳೆದ ವಾರ ತರಕಾರಿ ದರದಲ್ಲಿ ಭಾರಿ ಇಳಿಕೆಯಾಗಿತ್ತು. ಈ ಬಾರಿ ಅದೇ ದರ ಸ್ಥಿರವಾಗಿದ್ದು, ಗ್ರಾಹಕರು ಖುಷಿ ಆಗುವಂತೆ ಆಗಿದೆ. ದಸರಾದಿಂದ ದೀಪಾವಳಿ ಹಬ್ಬ ಮುಗಿಯುವವರೆಗೂ ತರಕಾರಿ ಬೆಲೆ ಏರಿಕೆಯಾಗುತ್ತಲೇ ಇತ್ತು. ಕಳೆದ ಎರಡು ವಾರದಿಂದ ತರಕಾರಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಹೊರೆ ಕಡಿಮೆಯಾದಂತೆ ಆಗಿದೆ.

ಕೆಲ ತರಕಾರಿ ದರ ಏರಿಕೆ: ಟೊಮೆಟೊ, ಹೂಕೋಸು, ಎಲೆಕೋಸು, ಚವಳೆಕಾಯಿ, ಬೀಟ್‌ರೂಟ್‌, ಬೆಂಡೆಕಾಯಿ ಬೆಲೆ ಕಳೆದ ವಾರಕ್ಕಿಂತ ಹೆಚ್ಚಳವಾಗಿದೆ. ಟೊಮೆಟೊ ಕಳೆದ ವಾರಕ್ಕಿಂತ ₹10 ಹೆಚ್ಚಳವಾಗಿದೆ. ಬೆಂಡೆಕಾಯಿ ₹20 ಹೆಚ್ಚಳವಾಗಿ ₹60ಕ್ಕೆ ಕೆ.ಜಿ ಮಾರಾಟವಾಗುತ್ತಿದೆ.

ಗೋಬಿ ಕಳೆದ ವಾರ ₹60 ಇತ್ತು. ಈ ವಾರ ₹80 ಕೆ.ಜಿ ಆಗಿದೆ. ಬೀಟ್ ರೂಟ್ ಕೂಡ ಕೆ.ಜಿಗೆ ₹ 80 ಆಗಿದೆ. ಚವಳೆಕಾಯಿ ₹80ಗೆ ಕೆ.ಜಿ ಇದೆ.

ಯಥಾಸ್ಥಿತಿ ದರ: ಬದನೆಕಾಯಿ, ಆಲೂಗಡ್ಡೆ, ಬೀನ್ಸ್, ಗಜ್ಜರಿ, ಸವತೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೋರೆಕಾಯಿ, ಹೀರೆಕಾಯಿ, ಹಾಗಲಕಾಯಿ ಕಳೆದ ವಾರದಂತೆ ಈ ವಾರ ದರದಲ್ಲಿ ಸ್ಥಿರವಾಗಿದೆ. ದೊಣ್ಣೆಮೆಣಸಿನಕಾಯಿ, ಈರುಳ್ಳಿ ದರ ಕಳೆದ ವಾರಕ್ಕಿಂತ ಇಳಿಕೆಯಾಗಿದೆ.

ಸೊಪ್ಪುಗಳು ಅಗ್ಗ: ಸೊಪ್ಪುಗಳ ದರ ಇಳಿಕೆಯಾಗಿದ್ದು, ಅಗ್ಗವಾಗಿದೆ. ಕೊತ್ತಂಬರಿ ಸೊಪ್ಪು ₹20–25 ಒಂದು ಕಟ್ಟು, ‌ಪುದಿನಾ ₹20–25, ಮೆಂತ್ಯೆ ಸೊಪ್ಪು ಚಿಕ್ಕ ಗಾತ್ರದ ₹10ಗೆ ಮೂರು, ರಾಜಗಿರಿ, ಪುಂಡಿಪಲ್ಯೆ, ಸಬ್ಬಸಿಗಿ ಸೊಪ್ಪುಗಳು ಅಗ್ಗವಾಗಿದೆ.

***

ಕೆಲ ತರಕಾರಿಗಳ ದರ ಹೆಚ್ಚು –ಕಡಿಮೆ ಇದೆ. ಬೇರೆ ಜಿಲ್ಲೆಯಿಂದ ಬಂದ ತರಕಾರಿಗಳು ಬೆಲೆ ಏರಿಕೆಗೆ ಕಾರಣವಾಗಿವೆ ಮಹಮ್ಮದ್‌ ಜಲಾಲ್‌ದ್ದೀನ್, ತರಕಾರಿ ವ್ಯಾಪಾರಿ

***

ತರಕಾರಿ, ಸೊಪ್ಪುಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಮೆಂತ್ಯೆ, ಪಾಲಕ್‌ ಸೊಪ್ಪು ತೀರಾ ಅಗ್ಗವಾಗಿದ್ದು, ಗ್ರಾಹಕರು ಖುಷಿಯಿಂದ ಖರೀದಿಸುವಂತಾಗಿದೆ
ಶರಣು, ಗ್ರಾಹಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು