ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ: ನಡುಗಡ್ಡಿಗೆ ಎಸಿ ಭೇಟಿ, ಪರಿಶೀಲನೆ

Published 2 ಆಗಸ್ಟ್ 2024, 14:41 IST
Last Updated 2 ಆಗಸ್ಟ್ 2024, 14:41 IST
ಅಕ್ಷರ ಗಾತ್ರ

ಕಕ್ಕೇರಾ: ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಅವರು ಗುರುವಾರ ಪುರಸಭೆ ಕಚೇರಿ, ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ್‌ ಕಚೇರಿ, ಕಸ ವಿಲೇವಾಗಿ ಘಟಕ ಹಾಗೂ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುವಾರ ಪುರಸಭೆಗೆ ಭೇಟಿ ನೀಡಿ ಕೆಲವೊಂದು ಕಡತಗಳನ್ನು ಪರಿಶೀಲಿಸಿ ಕಚೇರಿಯ ಪ್ರತಿಯೊಬ್ಬ ನೌಕರರು ಸರಿಯಾಗಿ ವೇಳೆಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸ್ಪಂದಿಸಬೇಕು ಎಂದು ಸೂಚಿಸಿದರು.

ನಂತರ ಹೊಸದಾಗಿ ಸಂತೆ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಹಾಗೂ ಉದ್ಘಾಟನೆಯಾಗದ ನೂತನ ಉಪ ತಹಶೀಲ್ದಾರ ಕಚೇರಿ ಪರಿಶೀಲಿಸಿ ನೂತನ ಕಟ್ಟಡದ ಪಕ್ಕ ಚರಂಡಿಯ ನಿಂತ ನೀರು, ಹೊಲಸು ಇತ್ಯಾದಿಗಳನ್ನು ಪರಿಶೀಲಿಸಿದರು. ನಂತರ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಕಸ ವಿಲೇವಾರಿ ಘಟಕದ ಕಾಮಗಾರಿ ವೀಕ್ಷಿಸಿದರು.

ಆನಂತರ ಪ್ರವಾಹ ಪೀಡಿತ ನೀಲಕಂಠರಾಯನಗಡ್ಡಿ ತೀರಕ್ಕೆ ಆಗಮಿಸಿ ಕೃಷ್ಣಾನದಿಯ ಪ್ರವಾಹವನ್ನು ಗಮನಿಸಿ ನದಿಗೆ ಎಷ್ಟು ಪ್ರಮಾಣದ ನೀರು ಬಂದರೆ ನಡುಗಡ್ಡಿಯ ಕಿರು ಸೇತುವೆ ಮುಳುಗಡೆಯಾಗಲಿದೆ ಎಂದು ಮಾಹಿತಿ ಪಡೆದರು.

’ನಡುಗಡ್ಡಿ ಜನರ ಸುರಕ್ಷತೆ ಹಾಗೂ ಪ್ರವಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಸ್ಥಳದಲ್ಲಿದ್ದ ಪುರಸಭೆ ಮುಖ್ಯಧಿಕಾರಿ ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಉಪ ತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಕಂದಾಯ ನಿರೀಕ್ಷಕ ಮಲಕಾಜಪ್ಪ , ಅಲ್ಲಾಭಕ್ಷ ಶ್ಯಾನಿ, ಮದನಸಾಬ, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT