ಭಾನುವಾರ, ಮೇ 22, 2022
25 °C
940ಕ್ಕೆ ಏರಿಕೆಯಾದ ಸಕ್ರಿಯ ಪ್ರಕರಣಗಳ ಸಂಖ್ಯೆ, 4 ಜನ ಗುಣಮುಖ

ಯಾದಗಿರಿ; 130 ಜನರಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ 130 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 940ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 39, ಗುರುಮಠಕಲ್‌ ತಾಲ್ಲೂಕಿನಲ್ಲಿ 7, ಶಹಾಪುರ ತಾಲ್ಲೂಕಿನಲ್ಲಿ 43, ವಡಗೇರಾ ತಾಲ್ಲೂಕಿನಲ್ಲಿ 4, ಸುರಪುರ ತಾಲ್ಲೂಕಿನಲ್ಲಿ 22, ಹುಣಸಗಿ ತಾಲ್ಲೂಕಿನಲ್ಲಿ 15 ಸೇರಿದಂತೆ ಒಟ್ಟಾರೆ 130 ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ.

0 ಯಿಂದ 5 ವರ್ಷದೊಳಗಿನ ಇಬ್ಬರು ಮಕ್ಕಳು, 6ರಿಂದ 10 ವರ್ಷದೊಳಗಿನ 3, 11ರಿಂದ 18 ವರ್ಷದೊಳಗಿನ 41, 19ರಿಂದ 35 ರೊಳಗಿನ 55, 36ರಿಂದ 55 ವರ್ಷದೊಳಗಿನ 18, 55 ವರ್ಷ ಮೇಲ್ಪಟ್ಟ 11 ಜನ ಸೇರಿ 130 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ಪ್ರಾಥಮಿಕ ಸಂಪರ್ಕದಲ್ಲಿದ್ದ 1,300, ದ್ವಿತೀಯ ಸಂಪರ್ಕದಲ್ಲಿದ್ದ 1,300 ಜನರನ್ನು ಗುರುತಿಸಲಾಗಿದೆ. 124 ಜನ ಮನೆಯಲ್ಲಿ ಪ್ರತ್ಯಕವಾಗಿದ್ದರೆ 6 ಜನರು ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 2, ಸುರಪುರ ತಾಲ್ಲೂಕು ಆಸ್ಪತ್ರೆಯಲ್ಲಿ 8 ಸೇರಿ 10 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೋಂ ಐಸೊಲೇಷನ್‌ಲ್ಲಿದ್ದ ಯಾದಗಿರಿ ತಾಲ್ಲೂಕಿನಲ್ಲಿ 3, ಸುರಪುರ ತಾಲ್ಲೂಕಿನಲ್ಲಿ ಒಬ್ಬರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು