ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ವೈದ್ಯರ ದಿನಾಚರಣೆ: ಆರೋಗ್ಯ ಜಾಗೃತಿ ಜಾಥಾ

Published 1 ಜುಲೈ 2024, 3:08 IST
Last Updated 1 ಜುಲೈ 2024, 3:08 IST
ಅಕ್ಷರ ಗಾತ್ರ

ಯಾದಗಿರಿ: ವೈದ್ಯರ ದಿನಾಚರಣೆ ಅಂಗವಾಗಿ ಸೋಮವಾರ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಜಾಥಾಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಚಾಲನೆ ನೀಡಿದರು.

ನಗರದ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣ ವರೆಗೆ ಜಾಥಾ ನಡೆಯಿತು.

ಜಾಥಾವು ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತ, ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಮೂಲಕ ಹೊಸ ಬಸ್ ನಿಲ್ದಾಣ ವರೆಗೆ ನಡೆಯಿತು.

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಹನಮಂತು ಪ್ರಸಾದ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಭಗವಂತ ಅನವಾರ, ಡಾ.ಸುಭಾಷ್ ಕರಣಗಿ, ಡಾ.ವಿರೇಶ ಜಾಕಾ, ಡಾ.ಪ್ರದೀಪ್ ರೆಡ್ಡಿ, ಡಾ.ವಿಜಯಕುಮಾರ್, ನಾಗನ ಗೌಡ ಮುದ್ನಾಳ, ಡಾ.ಪ್ರಸನ್ನ, ಡಾ.ಪ್ರಶಾಂತ ಬಾಸೂತ್ಕರ್, ಡಾ.ಹಣಮಂತ ರೆಡ್ಡಿ, ಡಾ.ವೈಜನಾಥ ಪಾಟೀಲ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT