ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಈರುಳ್ಳಿ ಸಸಿ ನಾಟಿ ಮಾಡುವಾಗ ಸಿಡಿಲು ಬಡಿದು ನಾಲ್ವರ ಸಾವು

Published : 23 ಸೆಪ್ಟೆಂಬರ್ 2024, 12:48 IST
Last Updated : 23 ಸೆಪ್ಟೆಂಬರ್ 2024, 12:48 IST
ಫಾಲೋ ಮಾಡಿ
Comments

ಯಾದಗಿರಿ: ತಾಲ್ಲೂಕಿನ ಜಿನಕೇರಾ ತಾಂಡಾದಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಸೋಮವಾರ ನಡೆದಿದೆ.

ಕಿಶನ್‌ ನಾಮಣ್ಣ ಜಾಧವ (33), ಚನ್ನಪ್ಪ ನಾಮಣ್ಣ ಜಾಧವ (24), ಸುನಿಬಾಯಿ ರಾಠೋಡ (30), ನೇನು ನಿಂಗಪ‍್ಪ ಜಾಧವ (18) ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಂಡಾದ ಜಮೀನಿನಲ್ಲಿ ಈರುಳ್ಳಿ ಸಸಿ ನಾಟಿ ಮಾಡುತ್ತಿರುವ ವೇಳೆ ಮಳೆ ಬಂದಿದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ಜಮೀನಿನಲ್ಲಿರುವ ದುರುಗಮ್ಮ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ.

ಮೌನೇಶ ಉನ್ನಪ್ಪ, ಗಣೇಶ ಮೌನೇಶ, ದರ್ಶನ ಕಿಶನ್‌ ಸಿಡಿಲಿನಿಂದ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಯಾದಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಧಾರಾಕಾರ ಮಳೆ

ನಗರದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಧಾರಾಕಾರ ಮಳೆ ಸುರಿಯಿತು.

ನಗರದ ರೈಲ್ವೆ ಸ್ಟೇಷನ್‌ನಿಂದ ಹಳೆ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಇರುವ ಚರಂಡಿಯ ನೀರು ‌ಮನೆಗಳಲ್ಲಿ ನುಗ್ಗಿತು‌. ಇದರಿಂದ ನಿವಾಸಿಗಳು ಪರದಾಡಿದರು. ಇನ್ನೂ ಹತ್ತಿಕುಣಿ ಕ್ರಾಸ್‌ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT