ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕರಿಸದ ‘ಅಧಿಕಾರಿ ಸಂಪರ್ಕ ಕೋಶ’

ವೆಬ್‌ಸೈಟ್‌ನಲ್ಲಿ ಇಲಾಖೆಯ ಅಧಿಕಾರಿಗಳ ಮಾಹಿತಿ ತಪ್ಪಾಗಿ ನಮೂದು: ಗೊಂದಲ
Last Updated 11 ನವೆಂಬರ್ 2020, 7:36 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಅಧಿಕಾರಿಗಳ ಸಂಪರ್ಕ ಕೋಶ ಜಾಲತಾಣ ಅಪ್ಡೇಟ್‌ ಆಗದ ಕಾರಣ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಹಲವಾರು ಹೆಸರುಗಳು ತಪ್ಪಾಗಿ ಪ್ರಕಟವಾಗಿವೆ. ಇದರಿಂದ ಯಾವುದು ಸರಿ, ತಪ್ಪು ಎನ್ನುವ ಸಂದಿಗ್ಧ ಸ್ಥಿತಿ ಜಿಲ್ಲೆಯವರದ್ದು.

ಉಪವಿಭಾಗಾಧಿಕಾರಿ ಹೆಸರು ಶಂಕರಗೌಡ ಸೋಮನಾಳ. ಆದರೆ, ಅಲ್ಲಿ ಪ್ರಕಟವಾಗಿರುವುದು ಶಂಕರಗೌಡ ಸೋಮನಾಲ್. ಪದವಿ ಪೂರ್ವ ಉಪನಿರ್ದೇಶಕರ ಹೆಸರನ್ನು ಚಂದ್ರಕಾಂತ ಹಿಳ್ಳಿ ಬದಲಾಗಿ ‘ಹಳ್ಳಿ’ ಎಂದು ಬರೆಯಲಾಗಿದೆ. ಇನ್ನೊಂದು ಕಡೆಚಂದ್ರಕಾಂತ್ ಹಲ್ಲಿ ಎಂದು ಬರೆಯಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೆಸರು ಸೋನಾವಾಣೆ ರಿಷಿಕೇಶ್ ಭಗವಾನ್ ಎಂದು ತಪ್ಪಾಗಿ ಕಾಣಿಸುತ್ತಿದೆ. ಜಿಲ್ಲಾ ಸಾಮಾಜಿಕ ಕಲ್ಯಾಣ ಅಧಿಕಾರಿ ಅಲ್ಲಾಬಕ್ಷ ಅವರು ವರ್ಗಾವಣೆಯಾಗಿ ವರ್ಷವಾಗುತ್ತಿದ್ದರೂ ಇನ್ನೂ ಹೆಸರು ಬದಲಾವಣೆ ಆಗಿಲ್ಲ.

ಜಿಲ್ಲಾ ಮಲೇರಿಯಾ ಅಧಿಕಾರಿಡಾ ಸೂರ್ಯಪ್ರಕಾಶ ಕಂಡಕೂರ್ (ಪ್ರಭಾರಿ) ಎಂದಿದೆ. ಆದರೆ, ಕಂದಕೂರ ಊರಿನ ಹೆಸರೆ ಇಲ್ಲಿ ತಪ್ಪಾಗಿದೆ.

ಪ್ರವಾಸೋದ್ಯಮದ ಸಹಾಯ ನಿರ್ದೇಶಕ ರಜನಿಕಾಂತ ಹೆಸರು ಬದಲಾಗಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹೆಸರು ಇನ್ನೂ ಬದಲಾವಣೆ ಆಗಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್, ಎನ್‌ಈಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಎಂಜಿನಿಯರ್, ಡಾ. ಅಂಬೇಡ್ಕರ್ ಕೋ-ಆಪರೇಟಿವ್ ಲಿಮಿಟೆಡ್ ಜಿಲ್ಲಾ ವ್ಯವಸ್ಥಾಪಕ, ಯಾದಗಿರಿ ನಗರಸಭೆ ಪೌರಾಯುಕ್ತ, ಯಾದಗಿರಿ ಎಪಿಎಂಸಿ ಕಾರ್ಯದರ್ಶಿ, ಮಾಹಿತಿ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆ ಹಿರಿಯ
ಸಹಾಯಕ ನಿರ್ದೇಶಕ ಹೆಸರು ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳ ಹೆಸರು ಅವರು ಜಿಲ್ಲೆಯಿಂದ ವರ್ಗಾವಣೆಯಾಗಿ ಹಲವಾರು ತಿಂಗಳು ಕಳೆದರೂ ಅಪ್ಡೇಡ್‌ ಆಗಿಲ್ಲ.

ತಾಲ್ಲೂಕು ಹೆಸರುಗಳು ತಪ್ಪು: ಜಾಲತಾಣದಲ್ಲಿ ಕೇವಲ ಅಧಿಕಾರಿಗಳ ಹೆಸರು ಮಾತ್ರವಲ್ಲದೆ ತಾಲ್ಲೂಕುಗಳ ಹೆಸರುಗಳು ತಪ್ಪಾಗಿವೆ. ‌ಶಾಹಪುರ್, ಹುಣಸಿಗಿ,ಶೊರಾಪುರ್, ಗುರು ಮಿಟ್ಕಲ್ ಈ ರೀತಿ ವೆಬ್‌ಸೈಟ್‌ನಲ್ಲಿ ಕಾಣಿಸುತ್ತವೆ.2020ರ ಅಕ್ಟೋಬರ್ 7ರಂದು ಕೊನೆಯದಾಗಿ ನವೀಕರಿಸಲಾಗಿದೆ ಎಂದು ವೈಬ್‌ಸೈಟ್‌ ಪುಟದ ಕೆಳಭಾಗದಲ್ಲಿದೆ. ಆದರೆ, ಜಾಲತಾಣ ಮಾತ್ರ ಬದಲಾಗಿಲ್ಲ.

***

ಬದಲಾಗದ ತಹಶೀಲ್ದಾರ್‌ ಹೆಸರುಗಳು!
ಗುರುಮಠಕಲ್ ಹಿಂದಿನ ತಹಶೀಲ್ದಾರ್‌ ಶ್ರೀಧರಾಚಾರ್ಯ, ಪ್ರಸ್ತುತ ಸಂಗಮೇಶ ಜಿಡಗೆ ತಹಶೀಲ್ದಾರ್‌ ಆಗಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಹಿಂದಿನ ತಹಶೀಲ್ದಾರ್ ಅವರ ಹೆಸರೆ ಕಾಣಿಸುತ್ತಿದೆ.

ಶಹಾಪುರ ಹಿಂದಿನ ತಹಶೀಲ್ದಾರ್‌ ಸಂಗಮೇಶ ಜಿಡಗೆ, ಈಗಿನ ತಹಶೀಲ್ದಾರ ಜಗನ್ನಾಥರಡ್ಡಿ ಅವರಿದ್ದಾರೆ.ವಡಗೇರಾ ಹಿಂದಿನ ತಹಶೀಲ್ದಾರ ಸಂತೋಷಿರಾಣಿ, ಈಗಿನ ತಹಶೀಲ್ದಾರ ಸುರೇಶ ಅಂಕಲಗಿ ಅವರಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಇನ್ನೂ ಆಪ್ಡೇಡ್‌ ಆಗಿಲ್ಲ.

ಸುರಪುರ ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಅವರ ಹೆಸರು ಮಾತ್ರ ಅಪ್ಡೇಡ್‌ ಆಗಿದೆ. ಹಿಂದಿನ ತಹಶೀಲ್ದಾರ್‌ ಸುರೇಶ ಅಂಕಲಗಿ ಇದ್ದರು. ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೆಸರು ಸರಿಯಾಗಿದೆ.

ಹುಣಸಗಿ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಶ್ರೀಧರ ಮುಂದಲಮನಿ ಇದ್ದರು. ಈಗ ವಿನಯಕುಮಾರ ಪಾಟೀಲ ಅವರು ತಹಶೀಲ್ದಾರ್‌ ಆಗಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಪ್ರಭಾರಿಯಾಗಿದ್ದ‌ ಗ್ರೇಡ್‌ 2 ತಹಶೀಲ್ದಾರ್ ಸುರೇಶ ಚವಲ್ಕರ್‌ ಹೆಸರಿದೆ. ಇದರಿಂದ ಹೊಸದಾಗಿ ಜಾಲತಾಣಕ್ಕೆ ಭೇಟಿ ನೀಡುವವರಿಗೆ ತೀವ್ರ ಗೊಂದಲ ಉಂಟಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

***

ಯಾದಗಿರಿ ಜಾಲತಾಣದಲ್ಲಿ ಅಧಿಕಾರಿ, ಸ್ಥಳದ ಹೆಸರು ತಪ್ಪಾಗಿ ಪ್ರಕಟವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಶೀಘ್ರವೇ ಇದನ್ನು ಸರಿಪಡಿಸಲಾಗುವುದು
ಡಾ.ರಾಗಪ್ರಿಯಾ ಆರ್‌. ಜಿಲ್ಲಾಧಿಕಾರಿ

***

ಅಧಿಕಾರಿಗಳ ಸಂಪರ್ಕ ಕೋಶ ನಿರ್ವಹಣೆ ಮಾಡುವವರು ತಪ್ಪು ತಪ್ಪಾಗಿ ಪ್ರಕಟಸಿ ಜಿಲ್ಲೆಯ ಮಾನ ಹರಾಜು ಹಾಕಿದ್ದಾರೆ ಅವಿನಾಶ ಜಗನ್ನಾಥ, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT