ಯಾದಗಿರಿ: ನಕಲಿ ಅಂಕಪಟ್ಟಿ ನೀಡಿದ ಆರೋಪದಡಿ ತಾಲ್ಲೂಕಿನ ಬಾಚವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹುಸೇನ್ ಪಟೇಲ್ ಅವರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನ್ ಅವರು ಆಶನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿದ್ದಾಗ ಹಣಮಂತರಾಯ ಅವರಿಗೆ 7ನೇ ತರಗತಿಯಲ್ಲಿ ಶೇ 85 ಅಂಕ ಪಡೆದ ಅಂಕಪಟ್ಟಿ ನೀಡಿದ್ದರು. ಇದರಿಂದಾಗಿ ಹಣಮಂತರಾಯ ಅವರು ಅಬಕಾರಿ ಇಲಾಖೆಯಲ್ಲಿ ತಾತ್ಕಾಲಿಕ ಪಟ್ಟಿಯಲ್ಲಿ ವಾಹನ ಚಾಲಕರಾಗಿ ಆಯ್ಕೆಯಾದರು. ಈ ಬಗ್ಗೆ ಮತ್ತೊಬ್ಬ ಆಕಾಂಕ್ಷಿ ಆಕ್ಷೇಪ ಸಲ್ಲಿಸಿದ್ದರು. ಅಧಿಕಾರಿಗಳು ಅಂಕಪಟ್ಟಿ ಪರಿಶೀಲಿಸಿದಾಗ ಅವರದ್ದು ನಕಲಿ ಅಂಕಪಟ್ಟಿ ಎಂಬುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಅಂಕಪಟ್ಟಿ ಬಗ್ಗೆ ಹಣಮಂತರಾಯ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು. ಅಧಿಕಾರಿಗಳ ತಂಡ ಪರಿಶೀಲಿಸಿದಾಗ ಶಾಲೆಯ ದಾಖಲೆಗಳಲ್ಲಿ ಹಣಮಂತರಾಯ ಅವರ ಕ್ರೋಡೀಕೃತ ಅಂಕಪಟ್ಟಿ ಹರಿದಿತ್ತು. ಇದು ಹುಸೇನ್ ಪಟೇಲ್ ಅವರ ಅವಧಿಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.