ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಯಾದಗಿರಿ: ಕೋವಿಡ್‌ ಲಸಿಕೆ ನೀಡಲು ಹೋದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕೋವಿಡ್‌ ಲಸಿಕೆ ನೀಡಲು ತೆರಳಿದ ಆರೋಗ್ಯ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿರುವುದು– ವಿಡಿಯೊ ಸ್ಕ್ರೀನ್‌ ಶಾಟ್‌

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಕೋವಿಡ್‌ ಲಸಿಕೆ ನೀಡಲು ತೆರಳಿದ ಆರೋಗ್ಯ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆಗೆ ಯತ್ನಿಸಿರುವ ಘಟನೆಯ ವಿಡಿಯೊ ವೈರಲ್ ಆಗಿದೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಬಡಿಗೆ ಹಿಡಿದುಕೊಂಡು ಹೊಡೆಯಲು ಮುಂದು ಓಡಿ ಹೋಗಿದ್ದಾನೆ. ಕುಡುಕನ ಕಾಟದಿಂದ ಬೇಸತ್ತು ಸ್ಥಳದಿಂದ ಸಿಬ್ಬಂದಿ ಬೇರೆ ಕಡೆ ತೆರಳಿದ್ದಾರೆ. ಕೋವಿಡ್ ಲಸಿಕೆ ನೀಡಲು ಹೋದವರಿಗೆ ಜೀವ ಬೆದರಿಕೆ ಹಾಕಿ ಕುಡಿದ ಮತ್ತಿ‌ನಲ್ಲಿ ರಾದ್ದಾಂತ ಮಾಡಿದ್ದಾನೆ. 

ನಮ್ಮ ಹತ್ತಿರ ಬರಬೇಡಿ. ನಮ್ಮ ಏರಿಯಾಕ್ಕೆ ಬಂದರೆ ಬಡಿಗೆಯಿಂದ ಹೊಡೆಯುತ್ತೇನೆ. ವಿಡಿಯೊ ಜಿಲ್ಲಾಧಿಕಾರಿಗೆ ಕಳುಹಿಸಿ. ಡಿಸಿ ಬರಲಿ ನಾನು ಭಯಪಡಲ್ಲ ಎಂದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾನೆ.

ಈ ಕುರಿತು ಆರ್ ಸಿಎಚ್ ಒ ಡಾ.ಲಕ್ಷ್ಮಿಕಾಂತ ಪ್ರತಿಕ್ರಿಯಿಸಿ, 'ಈಗ ವೈರಲ್ ಆಗಿರುವ ವಿಡಿಯೊ ಎರಡು ತಿಂಗಳ ಹಿಂದಿನದು. ಈಗ ಯಾಕೊ ಹರಿಬಿಟ್ಟಿದ್ದಾರೊ ಗೊತ್ತಿಲ್ಲ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು