ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಪ್ರವಾಹ ಎದುರಿಸಲು ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕೆಲ ದಿನಗಳಿಂದ ಭೀಮಾ ನದಿ ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಹೀಗಾಗಿ ಒಳಹರಿವು ಹೆಚ್ಚಾಗಿದೆ. ಕೆಳ ಭಾಗದ ನದಿಗೆ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಬತ್ತಿ ಹೋಗಿದ್ದ ಭೀಮಾ ನದಿಗೆ ಈಗ ಜೀವ ಕಳೆ ಬಂದಿದೆ. ಪ್ರವಾಹದ ನೀರು ದಡಮೀರಿ ಹರಿಯುತ್ತಿವೆ.

ಗುರಸಣಗಿ–ಯಾದಗಿರಿ ಬ್ರಿಡ್ಜ್ ಕಂ ಬ್ಯಾರೇಜ್ನಿಂದ ಭೀಮಾ ನದಿಗೆ 5 ಸಾವಿರ ಕ್ಯುಸೆಕ್ ಒಳಹರಿವು ಇದ್ದರೆ, ಅಷ್ಟೆ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ. ಚಿತ್ತಾಪುರ ತಾಲ್ಲೂಕಿನ ಸನ್ನತಿ ಬ್ರಿಜ್ ಕಂ ಬ್ಯಾರೇಜ್ನಿಂದ ಭೀಮಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಯೂ ಭೋರ್ಗೆಯುತ್ತಿದೆ.

ಪ್ರತಿ ವರ್ಷ ಆಗಸ್ಟ್, ಸೆಪ್ಟೆಂಬರ್ನಲ್ಲಿ ಕೃಷ್ಣಾ, ಭೀಮಾ ನದಿಗಳ ಪ್ರವಾಹ ಇರುತ್ತಿತ್ತು. ಆದರೆ, ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ನದಿಗೆ ನೀರು ಬರುತ್ತಿವೆ.

ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ಅಧಿಕ ನೀರು ಬಂದರೆ ವಡಗೇರಾ ತಾಲ್ಲೂಕಿನ ಜೋಳದಡಗಿ ಸೇತುವೆ ಮುಳಗಡೆಯಾಗುವ ಸಾಧ್ಯತೆ ಇರುತ್ತದೆ. 3 ಲಕ್ಷ ಕ್ಯೂಸೆಕ್ ನೀರು ಬಂದರೆ ವಡಗೇರಾ ತಾಲ್ಲೂಕಿನ ಕಂದಳ್ಳಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುತ್ತದೆ. 3.5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೆ ಯಾದಗಿರಿ ತಾಲ್ಲೂಕಿನ ಆನೂರ (ಬಿ) ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಭೀಮಾನದಿಗೆ 4 ರಿಂದ 5 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಾಗ ಯಾದಗಿರಿ ತಾಲ್ಲೂಕಿನ ಠಾಣಗುಂದಿ, ಅರಕೇರಾ ಬಿ, ಮುದ್ನಾಳ, ವರ್ಕನಳ್ಳಿ, ಮುಷ್ಟೂರು, ಕೌಳೂರು, ಲಿಂಗೇರಿ, ಮಲ್ಹಾರ, ಬೆಳಗುಂದಿ, ಆನೂರ (ಕೆ), ಗೊಂದಡಗಿ, ಗೂಡೂರು, ಬಾಡಿಯಾಳ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಶಹಾಪುರ ತಾಲ್ಲೂಕಿನ ಅಣಬಿ, ರೋಜಾ ಎಸ್ ಶಿರವಾಳ, ಶಿರವಾಳ, ಹುರಸಗುಂಡಗಿ, ಇಬ್ರಾಹಿಂಪುರ, ತಂಗಡಗಿ, ಚಟ್ನಳ್ಳಿ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಆದರೆ, 2020ರಲ್ಲಿ ಮಾತ್ರ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಂದಿದ್ದು, ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿತ್ತು.

2.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಂದರೆ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆಯು ಮುಳುಗಡೆಯಾಗಲಿದೆ. ಸೇತುವೆ ರಸ್ತೆ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆ ಇದೆ.

ಸತತ ಮೂರು ವರ್ಷ ಪ್ರವಾಹ: ಜಿಲ್ಲೆಯಲ್ಲಿ 2019, 2020, 2021ರಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿತ್ತು. ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಹರಿದು ಬೆಳೆಗಳು ನಾಶವಾಗಿದ್ದವು.

ತುರ್ತು ಸಂದರ್ಭದಲ್ಲಿ ನದಿ ಪಾತ್ರ ಮತ್ತು ಹಳ್ಳಗಳ ಕಡೆಗೆ ಜನ ಮತ್ತು ಜಾನುವಾರುಗಳು ಹಾಗೂ ಮೀನುಗಾರರು ನದಿ ತೀರಕ್ಕೆ ಹೋಗದಂತೆ ಎಚ್ಚರವಹಿಸಬೇಕು. ಮುಂಜಾಗ್ರತ ಕ್ರಮವಾಗಿ ಗ್ರಾಮ ಪಂಚಾಯಿತಿ ಮೂಲಕ ಹಳ್ಳಿಗಳಿಗೆ ಡಂಗೂರ ಸಾರಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ ಎಂದು ನೋಡಲ್ ಅಧಿಕಾರಿಗಳು ತಿಳಿಸುತ್ತಾರೆ.

ನದಿ ತೀರದಲ್ಲಿ ಬರುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾಂದರ್ಭಿಕ ಅನುಸಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ
ಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ

ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳು

ಕೃಷ್ಣಾ ಭೀಮಾ ನದಿ ವ್ಯಾಪ್ತಿಯಲ್ಲಿ 80 ಗ್ರಾಮಗಳನ್ನು ಪ್ರವಾಹ ಸಂಭವಿಸುವ ಗ್ರಾಮಗಳು ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಭೀಮಾ ನದಿ ಪಾತ್ರದ ಶಹಾಪುರ ತಾಲ್ಲೂಕಿನ 7 ಗ್ರಾಮಗಳು ಯಾದಗಿರಿ ತಾಲ್ಲೂಕಿನ 9 ವಡಗೇರಾ ತಾಲ್ಲೂಕಿನ 19 ಗ್ರಾಮಗಳು ಸೇರಿದಂತೆ ಭೀಮಾ ನದಿ ಪಾತ್ರದಲ್ಲಿ ಈ ಮೂರು ತಾಲ್ಲೂಕುಗಳ 35 ಗ್ರಾಮಗಳಿವೆ. ಕೃಷ್ಣಾ ನದಿ ಪಾತ್ರದಲ್ಲಿ ಹುಣಸಗಿ ಸುರಪುರ ಶಹಾಪುರವಡಗೇರಾ ತಾಲ್ಲೂಕಿನ 45 ಗ್ರಾಮಗಳಿವೆ. ಭೀಮಾ ನದಿ ವ್ಯಾಪ್ತಿಯ ಶಹಾಪುರ ತಾಲ್ಲೂಕಿನ 3 ಹೋಬಳಿಗಳು ಯಾದಗಿರಿ ತಾಲ್ಲೂಕಿನ ಎರಡು ಹೋಬಳಿಗಳು ವಡಗೇರಾ ತಾಲ್ಲೂಕಿನ ಎರಡು ಹೋಬಳಿಗಳು ನದಿ ಪಾತ್ರದಲ್ಲಿದ್ದು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕೃಷ್ಣಾ ನದಿ ವ್ಯಾಪ್ತಿಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ಹೋಬಳಿ ಸುರಪುರ ತಾಲ್ಲೂಕಿನ ಸುರಪುರ ಕಕ್ಕೇರಾ ಹೋಬಳಿಗಳು ವಡಗೇರಾ ತಾಲ್ಲೂಕಿನ ಹೈಯ್ಯಾಳ ಬಿ ಹೋಬಳಿಯ ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲಿವೆ.

ಈಡೇರದ ಭರವಸೆ

ಜಿಲ್ಲೆಯಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಕನಸಾಗಿಯೇ ಉಳಿದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕೊಳ್ಳೂರು (ಎಂ) ಗ್ರಾಮದ ಬಳಿ ಸೇತುವೆಗೆ ಬ್ರೀಜ್ ಕಂ ಬ್ಯಾರೇಜ್ ಭೀಮಾ ನದಿಗೆ ಅಡ್ಡಲಾಗಿ ಠಾಣಗುಂದಿ ಚನ್ನೂರ ಜೆ ಬಳಿ ಬ್ಯಾರೇಜ್ ನಿರ್ಮಿಸುವ ಮಾತು ಜನಪಪ್ರತಿನಿಧಿಗಳು ಕೊಟ್ಟಿದ್ದರು. ಆದರೆ ಭರವಸೆಯಾಗಿ ಉಳಿದಿದೆ. ಇದರಿಂದ ನದಿ ಪಾತ್ರದ ಜನರ ಗೋಳು ಮಾತ್ರ ತಪ್ಪಿಲ್ಲ. ಪ್ರತಿ ವರ್ಷ ಸ್ಥಳಾಂತರ ಮಾಡುವುದು ತಪ್ಪಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.