ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡಗಳು

Last Updated 23 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣ ವಲಯದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳಿವೆ. ನೀರು ಇದ್ದ ಕಡೆ ಶೌಚಾಲಯ ಇಲ್ಲ. ಶೌಚಾಲಯ ಇದ್ದ ಕಡೆ ನೀರಿಲ್ಲ. ಅಲ್ಲದೇ ಆವರಣ ಗೋಡೆ ಇಲ್ಲದೇ ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲದಂತೆ ಆಗಿದೆ.

ಬಿರುಕು ಬಿಟ್ಟ ಕೋಣೆಯ ಛತ್‌, ಬೀಗ ಹಾಕಿದ ಶಾಲೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಶೌಚಾಲಯ ಇಲ್ಲದಿರುವುದು ಸಮಸ್ಯೆಯಾಗಿದೆ. ಶೌಚಾಲಯವಿದ್ದರೂ ಸರಿಯಾದ ನೀರು ಮತ್ತು ಸ್ವಚ್ಛತೆ ಕೊರತೆ ಕಾಣುತ್ತಿದೆ. ಬಾಗಿಲು, ಕಿಟಕಿಗಳು ಮುರಿದಿದೆ. ಇವುಗಳನ್ನು ದುರಸ್ತಿ ಮಾಡುವ ಗೋಜಿಗೆ ಸಂಬಂಧಿಸಿದವರು ಮನಸ್ಸುಮಾಡಿಲ್ಲ. ವಿವಿಧ ಶಾಲೆಯಲ್ಲಿ ಆವರಣ ಗೋಡೆ ವ್ಯವಸ್ಥೆ ಇಲ್ಲ, ಇದ್ದರೂ ಅರ್ಧ ಇರುತ್ತದೆ. ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬಂದಿದೆ. ಶಿಕ್ಷಕರ ಕೊರತೆ ಇದ್ದು, ಪ್ರಸ್ತುತ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಶಾಲೆಗಳಲ್ಲಿ ಸಮಪರ್ಕವಾಗಿ ಶೌಚಾಲಯ ಇಲ್ಲದಿದ್ದರಿಂದ ಶೌಚಕ್ಕೆ ಮಕ್ಕಳು ಸಮೀಪದ ಹೊಲಗಳಿಗೆ ಹೋಗುತ್ತಾರೆ. ನೀರಿನ ಸಮಸ್ಯೆ ಇದೆ. ಅದನ್ನು ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಪಟ್ಟಣ ನಿವಾಸಿ ಸೋಮಣ್ಣ ಮಲಮುತ್ತಿ ಮನವಿ ಮಾಡಿದ್ದಾರೆ.

‘ಶೌಚಾಲಯ ಇದ್ದರೂ ಕೆಲ ಕಡೆ ಶಿಕ್ಷಕರು ಮಾತ್ರ ಬಳಕೆ ಮಾಡುತ್ತಿದ್ದಾರೆ. ಇದರಿಂದವಿದ್ಯಾರ್ಥಿಗಳುಕಡೆ ಬೇರೆ ಕಡೆ ತೆರಳುವ ಪರಿಸ್ಥಿತಿ ಇದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಶೌಚಾಲಯ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳು ಹೇಗೊಬಯಲಿಗೆ ತೆರಳುತ್ತಾರೆ. ಆದರೆ, ವಿದ್ಯಾರ್ಥಿನಿಯರು ಹೊರಗಡೆ ತೆರಳುವುದು ಹೇಗೆ’ಎಂದು ಪಾಲಕರೊಬ್ಬರು ಪ್ರಶ್ನಿಸುತ್ತಾರೆ.

ನೀಲಕಂಠರಾಯನಗಡ್ಡಿ ಹಾಗೂ ಹೊಳೆ ಜಂಪಾರದೊಡ್ಡಿ ಶಾಲೆಗಳು ಕುಸಿಯುವ ಹಂತದಲ್ಲಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಗೊಂಡು ನೂತನ ಕಟ್ಟಡ ನಿರ್ಮಿಸಬೇಕು. ಹಲವಾರು ವರ್ಷಗಳಿಂದ ಕಟ್ಟಡ ನಿರ್ಮಿಸಿದ್ದು, ಯಾವಾಗ ಕುಸಿದು ಬೀಳುತ್ತದೆ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಶಿಕ್ಷಣದಲ್ಲಿ ತೊಡಸಿಕೊಡಿದ್ದಾರೆ. ಶಿಕ್ಷಣ ಇಲಾಖೆ ಶೀಘ್ರವೇ ಎತ್ತೆತ್ತುಕೊಳ್ಳದಿದ್ದರೆ ಅಲ್ಲಿನ ನೂರಾರೂ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಪಟ್ಟಣದ ಸರ್ಕಾರಿ ಶಾಲೆಯಲ್ಲಿ 463 ವಿದ್ಯಾರ್ಥಿಗಳಿದ್ದು, ಅವರಿಗೆ ಸಮರ್ಪಕವಾದ ಶೌಚಾಲಯವಿಲ್ಲ. ಅಂಗವಿಕಲರ ಶೌಚಾಲಯವೇ ಸರ್ವರಿಗೂ ಅದೇ ಉಪಯೋಗವಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ನಿವಾಸಿ ಪರಮಣ್ಣ ವಡಿಕೇರಿ ಮನವಿ ಮಾಡಿದ್ದಾರೆ.

ಕಕ್ಕೇರಾ ವಲಯದ ಎಲ್ಲ ಶಾಲೆಗಳಲ್ಲಿ ಇದೇ ಸಮಸ್ಯೆ ಇದೆ. ಶೀಘ್ರವೇ ಅಧಿಕಾರಿಗಳು ಇತ್ತ ಗಮನಹರಿಸಿ ದುರಸ್ತಿ, ನಿರ್ವಹಣೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸುತ್ತಾರೆ.

ಪಟ್ಟಣದ ಶಾಲೆಯ ಶೌಚಾಲಯ ಸಮಸ್ಯೆ ಸ್ವಲ್ಪ ಬಗೆಹರಿಸಿದ್ದೇನೆ. ಆವರಣಗೋಡೆ, ಶುದ್ಧ ಕುಡಿಯುವ ನೀರು, ಹಳೆ ಶಾಲೆಗಳು ಕುಸಿಯುವ ಹಂತದಲ್ಲಿದ್ದು, ಅವುಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
– ಬಸವರಾಜ ಗುತ್ತೇದಾರ ಕಕ್ಕೇರಾ, ಮುಖ್ಯಶಿಕ್ಷಕ

ಕಕ್ಕೇರಾ ವಲಯದ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚದ್ದೇ ಶಾಲೆಯಲ್ಲಿ ಸಮಸ್ಯೆಯಾಗಿದ್ದು, ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕು.
– ರಾಘವೇಂದ್ರ ಪತ್ತಾರ, ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT