ಯಾದಗಿರಿ: ಇಲ್ಲಿನ ಯಾದಗಿರಿ ನಗರಸಭೆಯ ಕಚೇರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಗುರುವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ಯೋಜನಾ ನಿರ್ದೇಶಕರಾದ ಲಕ್ಷ್ಮಿಕಾಂತ ಅವರು ಬೆಳಿಗ್ಗೆ 10.30ರ ಸುಮಾರಿಗೆ ನಗರಸಭೆಗೆ ಭೇಟಿ ನೀಡಿ, ಸುಮಾರು ಎರಡು ಗಂಟೆಗಳ ಕಾಲ ಕಡತಗಳ ಪರಿಶೀಲನೆ ಮಾಡಿದರು. ತಿಂಗಳುಗಳಿಂದ ವಿಲೇವಾರಿಯಾಗದೆ ಬಿದ್ದಿರುವ ಕಡತಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ನಿರ್ಮಾಣ, ಮುಟೇಷನ್, ಇ–ಖಾತೆ, ಬಿ– ಖಾತೆ, ಖಾತೆಗಳ ನವೀಕರಣ, ಖಾತೆ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿ ತಿಂಗಳುಗಳೇ ಕಳೆದರೂ ವಿಲೇವಾರಿ ಆಗುತ್ತಿಲ್ಲ. ಈ ಬಗ್ಗೆ ಅರ್ಜಿದಾರರು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿ ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದರು. ಕೆಲವರು ಪತ್ರಗಳನ್ನು ಸಹ ಬರೆದಿದ್ದರು.

ಯೋಜನಾ ನಿರ್ದೇಶಕರು ಏಕಾಏಕಿ ಭೇಟಿ ನೀಡಿ, ಕಚೇರಿಯ ಆಡಳಿತ ವೈಖರಿಯನ್ನು ಖುದ್ದಾಗಿ ಅವಲೋಕಿಸಿದರು. ಗಂಟೆಗಳ ಕಾಲ ಕಡತಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಿದರು. ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಇರುವುದನ್ನು ಕಂಡು ಸಿಬ್ಬಂದಿ ಮೇಲೆ ಕೋಪಗೊಂಡರು.

‘ಸಾರ್ಜನಿಕರಿಂದ ಸಲ್ಲಿಕೆಯಾಗಿದ್ದ ಅರ್ಜಿಗಳ ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಎಲ್ಲೆಂದರಲ್ಲಿ ಇರಿಸಿ, ಕಡತಗಳು ಸಿಗುತ್ತಿಲ್ಲ ಎಂಬ ನೆಪ ಹೇಳಿದ್ದು ಕಂಡುಬಂದಿದೆ. ಅರ್ಜಿದಾರರಿಗೆ ತೊಂದರೆ ಆಗದಂತೆ ಸಕಾಲದಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು’ ಎಂದು ಲಕ್ಷ್ಮಿಕಾಂತ ಅವರು ಸೂಚಿಸಿದರು.

‘ಸಾಮಾನ್ಯವಾಗಿ ಮುಟೇಷನ್ಗಾಗಿ ಸಲ್ಲಿಕೆಯಾದ ಅರ್ಜಿಗಳನ್ನು 45 ದಿನಗಳಲ್ಲಿ, ಖಾತಾ ಅರ್ಜಿಗಳನ್ನು 7 ದಿನಗಳಲ್ಲಿ ಅವುಗಳನ್ನು ಪರಿಶೀಲನೆ ಮಾಡಿ ಇತ್ಯರ್ಥ ಮಾಡಬೇಕು. ಆದರೆ, ತಿಂಗಳುಗಳು ಕಳೆದರೂ ಹಾಗೆಯೇ ಇರಿಸಿಕೊಂಡಿದ್ದು ಕಂಡುಬಂದಿದೆ. ಕಚೇರಿಯಲ್ಲಿ ಸಿಬ್ಬಂದಿ ಇಲ್ಲ, ಜಾತಿ ಗಣತಿ ಸಮೀಕ್ಷೆಯಲ್ಲಿ ತೊಡಗಿದ್ದೆವು, ಅಧಿಕಾರಿಗಳು ಬೇರೆ ಕೆಲಸಗಳಿಗೆ ಹಚ್ಚಿದ್ದರು, ಸರ್ವೆಗೆ ಹೋಗಿದ್ದೆ ಎಂದು ನೆಪ ಹೇಳುವುದು ಸರಿಯಲ್ಲ. ಇರುವ ಸಿಬ್ಬಂದಿಯಲ್ಲಿ ಸಾರ್ವಜನಿಕರ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

‘ಅರ್ಜಿಗಳನ್ನು ಬಂದ ತಕ್ಷಣವೇ ಅವುಗಳ ಪರಿಶೀಲನೆ ಮಾಡಬೇಕು. ಖಾತೆಗಳಿಗೆ ಸಂಬಂಧಿಸಿದ್ದು ಇದ್ದರೆ ಪೂರಕವಾದ ದಾಖಲೆಗಳನ್ನು ಕಲೆಹಾಕಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಎಲ್ಲವೂ ಸರಿಯಾಗಿ ಇದ್ದರೆ ಖಾತೆಗಳನ್ನು ನೀಡಲು ಅನುಮೋದನೆ ಕೊಟ್ಟು ತೆರಿಗೆ ವಿಧಿಸಿ, ಅದನ್ನು ವಸೂಲಿಯೂ ಮಾಡಬೇಕು. ವಿಳಂಬ ಮಾಡಿದರೆ ನಗರಸಭೆಗೆ ಬರುವ ತೆರಿಗೆ ತಪ್ಪುತ್ತದೆ. ಈ ಹಿಂದೆ ಮಾಡಿರುವ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಅಕ್ರಮಗಳಿಗೆ ಅವಕಾಶ ಮಾಡಿಕೊಡದೆ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ನಾನೂ ಕೂಡ ವಾರಕ್ಕೆ ಒಮ್ಮೆ ಭೇಟಿ ನೀಡಿ, ಕಡತಗಳ ಹಂತವನ್ನು ಪರಿಶೀಲನೆ ಮಾಡುತ್ತೇನೆ. ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು.

ಸಭೆಯಲ್ಲಿ ಪೌರಾಯುಕ್ತ ಉಮೇಶ ಚವ್ಹಾಣ್ ಸೇರಿದಂತೆ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ನಿಯಮಬಾಹಿರ ಕಟ್ಟಡ: ಮಾಲೀಕರಿಗೆ ನೋಟಿಸ್

ನಗರದ ಆಶ್ರಯ ಕಾಲೊನಿಯಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರಿಗೆ ನಗರಸಭೆಯು ನೋಟಿಸ್ ನೀಡಿದೆ. ಪರವಾನಗಿಯ ನಿಯಮ ಉಲ್ಲಂಘಿಸಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ನಿರ್ಮಿಸಿರುವ ಕಟ್ಟಡದ ಭಾಗವನ್ನು 7 ದಿನಗಳ ಒಳಗಾಗಿ ತೆರವು ಮಾಡುವಂತೆ ಪೌರಾಯುಕ್ತರು ನೋಟಿಸ್ನಲ್ಲಿ ಸೂಚಿಸಿದ್ದಾರೆ. ‘ನಗರದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಮುಖಂಡ ಅಜಯಕುಮಾರ ಮಾಸನ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.