ಯರಗೋಳ (ಯಾದಗಿರಿ): ಸುತ್ತಲಿನ ಗ್ರಾಮದಲ್ಲಿ ಸುರಿದ ಜೋರು ಮಳೆಗೆ, ಗ್ರಾಮದ ವಾರ್ಡ್ ಸಂಖ್ಯೆ 4ರಲ್ಲಿ ಚಂದ್ರು ಜನಬೋ ಎನ್ನುವವರ ಮನೆಗೆ ನೀರು ಹೊಕ್ಕಿದೆ.

ಹಳ್ಳದ ಮೂಲಕ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, 202 ಹೆಕ್ಟೇರ್ ವ್ಯಾಪ್ತಿಯ ದೊಡ್ಡ ಕೆರೆ ಭರ್ತಿಯಾಗಲು ಕ್ಷಣ ಗಣನೆ ಆರಂಭವಾಗಿದೆ. ಥಾನು ನಾಯಕ ತಾಂಡಾ ರಸ್ತೆ ಮೇಲೆ 'ಬಿದರಳ್ಳ' ತುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತ ಗೊಂಡಿದೆ.

ಮಲಕಪ್ಪನಳ್ಳಿ ಗ್ರಾಮದಲ್ಲಿ ಸನ್ನತಿ ಏತ ನೀರಾವರಿ ಯೋಜನೆ ನಾಲೆಯಿಂದ ನೀರು ಸೋರಿಕೆಯಾದ ಪರಿಣಾಮ ಹೊಲಗಳಲ್ಲಿ ನೀರು ಹೊಕ್ಕು ಹತ್ತಿ, ತೊಗರಿ, ಹೆಸರು ಬೆಳೆಗಳು ಸಂಪೂರ್ಣ ನಾಶವಾಗಿವೆ.

ಗ್ರಾಮಕ್ಕೆ ಸಂಪರ್ಕಿಸುವ ರೈಲ್ವೆ ಬ್ರಿಡ್ಜ್ ಲ್ಲಿ ನೀರು ತುಂಬಿದೆ. ಯರಗೋಳ- ಮಲಕಪ್ಪನಳ್ಳಿ, ನಾಲವಾರ -ಮಲಕಪ್ಪನಳ್ಳಿ ಸಂಪರ್ಕ ರಸ್ತೆಗಳು, ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿವೆ.

ಕಲ್ಲನ ಬೆಳಗೇರಾ ಗ್ರಾಮದ ಕೆರೆ ತುಂಬಿ ಹರಿಯುತ್ತಿದೆ. ಯುವಕರು ಮೊಬೈಲ್ ಗಳಲ್ಲಿ ಚಿತ್ರಿಸಿ ಸಂಭ್ರಮಿಸುತ್ತಿದ್ದರೆ.

ಮುದ್ನಾಳ, ಠಾಣಗುಂದಿ, ಬೊಮ್ಮಚಟ್ನಳ್ಳಿ, ಮಲಕಪ್ಪನಳ್ಳಿ, ವಡ್ನಳ್ಳಿ, ಎಸ್. ಹೊಸಳ್ಳಿ, ಮೋಟ್ನಳ್ಳಿ, ಕೋಟಗೇರಾ, ಚಿಂತಕುಂಟ, ಹೆಡಗಿಮದ್ರ, ಹತ್ತಿ ಕುಣಿ, ಸಮಣಪುರ, ಬಂದಳ್ಳಿ, ಯಡ್ಡಳ್ಳಿ, ಬೆಳಗೇರಾ, ಖಾನಳ್ಳಿ, ಅರಿಕೇರಾ .ಬಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಂಚ, ಅಚ್ಚೋಲ, ಗುಲಗುಂದಿ, ಕಂಚಗಾರ ಹಳ್ಳಿ, ಬಾಚವಾರ, ಹೊನಗೇರಾ, ಅಲ್ಲಿಪುರ, ಅಬ್ಬೆತುಮಕೂರು, ಕಟ್ಟಿಗೆ ಶಹಾಪುರ ಗ್ರಾಮಗಳಲ್ಲಿ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.