ಯಾದಗಿರಿ: ಜಿಲ್ಲೆಯ ವಿವಿಧೆಡೆ ಮೂರೂವರೆ ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 587 ಮಂದಿ ಜೀವ ಕಳೆದುಕೊಂಡಿದ್ದಾರೆ. 2,632 ಮಂದಿ ಗಾಯಗೊಂಡಿದ್ದು, ಕೆಲವರು ಅಂಗಾಂಗಗಳನ್ನು ಕಳೆದುಕೊಂಡು ಯಾತನಮಯ ಜೀವನ ಸಾಗಿಸುತ್ತಿದ್ದಾರೆ.

ಯಾದಗಿರಿ ಜಿಲ್ಲೆಯು ಕಲಬುರಗಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳು ಹಾಗೂ ನೆರೆಯ ತೆಲಂಗಾಣ ರಾಜ್ಯ, ಗಡಿ ಹಂಚಿಕೊಂಡಿದೆ. ಗ್ರಾಮೀಣ ರಸ್ತೆಗಳು, ಜಿಲ್ಲಾಮುಖ್ಯ ರಸ್ತೆಗಳು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಪ್ರತಿ ವರ್ಷ ನೂರಾರು ಅಪಘಾತಗಳು ಸಂಭವಿಸಿ ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಕೈ, ಕಾಲುಗಳನ್ನು ಕಳೆದುಕೊಂಡು ಅಂಗವಿಕಲರೂ ಆಗುತ್ತಿದ್ದಾರೆ.

2022ರಿಂದ 2025ರ ಜುಲೈ ತಿಂಗಳ ನಡುವೆ ಜಿಲ್ಲೆಯ ರಸ್ತೆಗಳಲ್ಲಿ ಒಟ್ಟು 1,463 ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ 587 ಮಂದಿ ಪ್ರಾಣ ಕಳೆದುಕೊಂಡಿದ್ದರೆ 1,299 ಮಂದಿಗೆ ಗಂಭೀರ ಗಾಯ ಹಾಗೂ 1,333 ಮಂದಿಗೆ ಸಾಧಾರಣ ಗಾಯಗಳಾಗಿವೆ.

2022ರಲ್ಲಿನ 393 ಅಪಘಾತಗಳ ಪ್ರಕರಣಗಳಿಂದ 184 ಮೃತಪಟ್ಟಿದ್ದಾರೆ. 367 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 495 ಮಂದಿಗೆ ಸಾಧಾರಣ ಗಾಯಗಳಾಗಿವೆ. 2023ರಲ್ಲಿ 375 ಅಪಘಾತ ಪ್ರಕರಣಗಳಾಗಿ 136 ಮಂದಿ ಅಸುನೀಗಿದ್ದು, ಈ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದವು. ಅದರ ಮರು ವರ್ಷವೇ ಅಪಘಾತಗಳ ಸಂಖ್ಯೆ 450ಕ್ಕೆ ಏರಿಕೆಯಾಗಿ 159 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2025ರ ಜನವರಿ ತಿಂಗಳಿಂದ ಜುಲೈ ನಡುವಿನ ಆರು ತಿಂಗಳಲ್ಲಿ 245 ಅಪಘಾತ ಪ್ರಕರಣಗಳು ದಾಖಲಾಗಿವೆ. ಅವುಗಳಿಂದ 108 ಮಂದಿ ಜೀವ ಕಳೆದುಕೊಂಡಿದ್ದು, ಗಂಭೀರ ಹಾಗೂ ಸಾಧಾರಣ ಗಾಯಗಳಿಂದ 362 ಮಂದಿ ಸಂಕಷ್ಟ ಅನುಭವಿಸಿದ್ದಾರೆ ಎಂಬುದು ಅಂಕಿಅಂಶಗಳಿಂದ ಗೊತ್ತಾಗಿದೆ.

ಸಂಚಾರ ನಿಯಮಗಳನ್ನು ಪಾಲನೆ ಮಾಡದೆ ವಾಹನಗಳ ಚಾಲನೆ, ಮದ್ಯಪಾನ ಮಾಡಿ ನಿರ್ಲಕ್ಷ್ಯದ ಚಾಲನೆ, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆ, ರಸ್ತೆ, ಹೆದ್ದಾರಿಗಳಲ್ಲಿ ಸೂಕ್ತ ಸರ್ವೀಸ್ ರಸ್ತೆಗಳು ಇಲ್ಲದಿರುವುದು, ಅಲ್ಲಲ್ಲಿ ಸೂಚನಾ ಫಲಕಗಳು ಇಲ್ಲದಿರುವುದು, ಗುಂಡಿ ಬಿದ್ದ ರಸ್ತೆಗಳು... ಹೀಗೆ ನಾನಾ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪ್ರಯಾಣಿಕರು ಸಹ ಉಸಿರು ಚೆಲ್ಲುತ್ತಿದ್ದಾರೆ.

ರಸ್ತೆಯ ಬದಿಯಲ್ಲಿ ತಮ್ಮಪಾಡಿಗೆ ತಾವು ನಡೆದುಕೊಂಡು ಹೋಗುವ ಪಾದಚಾರಿಗಳು ಸಹ ವಾಹನಗಳಿಗೆ ಸಿಲುಕಿ ಸಾಯುವ ಪ್ರಕರಣಗಳು, ಜಾನುವಾರು, ನಾಯಿಗಳು ಅಡ್ಡ ಬಂದು ಬಿದ್ದು ಬೈಕ್ ಸವಾರರು ಮೃತರಾಗುವ ಪ್ರಕರಣಗಳು ಸಹ ನಿಲ್ಲುತ್ತಿಲ್ಲ. ರಸ್ತೆಯ ನಿಯಮಗಳ ಪಾಲನೆಯೂ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಬೇಸರ.

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಆನ್ಲೈನ್ ಮೂಲಕ ದಂಡ ಹಾಕಲಾಗುತ್ತಿದೆ. ಹೆಲ್ಮೆಟ್ ಧರಿಸಿಕೊಂಡು ಬೈಕ್ ಓಡಿಸುವುದಕ್ಕೆ ಸವಾರರು ಮುಂದಾಗಬೇಕು
ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಚಾಲಕರ ಸ್ವಯಂಕೃತ ಅಪರಾಧ ಅಮಾಯಕರೂ ಸಾವು!

ವಾಹನ ಚಾಲಕರ ಸ್ವಯಂಕೃತ ತಪ್ಪಿನಿಂದಾಗಿ ತಮ್ಮ ಜೀವ ಕಳೆದುಕೊಳ್ಳುವುದು ಮಾತ್ರವಲ್ಲ ರಸ್ತೆ ಬದಿಯ ಅಮಾಯಕರ ಪ್ರಾಣಕ್ಕೂ ಎರವಾಗುತ್ತಿರುವ ಅಪಘಾತಗಳೂ ಪದೇ ಪದೇ ಸಂಭವಿಸುತ್ತಿವೆ. ಅಬ್ಬೆತುಮಕೂರ ಕ್ರಾಸ್ ಸಮೀಪ ಯಾದಗಿರಿ– ವಾಡಿ ರಸ್ತೆ ಬದಿಯಲ್ಲಿ ನಿಂತಿದ್ದ ಬಸಯ್ಯಸ್ವಾಮಿ ಮಸೂತಿಮಠ; ಸುರಪುರ ತಾಲ್ಲೂಕಿನ ಬಿಜಾಸಪುರ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಲಕಣ್ಣ ಕಕ್ಕೇರಿ ಅವರಂತೆ ಹಲವರು ಚಾಲಕರ ತಪ್ಪಿನಿಂದಾಗಿ ವಾಹನಗಳ ಡಿಕ್ಕಿಗಳಿಂದ ಅಸುನೀಗಿದ್ದಾರೆ. ಕೆಲವರು ನಾಯಿ ಅಡ್ಡ ಬಂದು ಬಿದ್ದು ರಸ್ತೆ ಕ್ರಾಸ್ ಮಾಡುವಾಗ ದೊಡ್ಡ ವಾಹನಗಳು ವೇಗವಾಗಿ ಬಂದು ಗುದ್ದಿದ್ದರಿಂದಲೂ ಸಾವನ್ನಪ್ಪಿರುವ ಪ್ರಕರಣಗಳಿವೆ. ಬೈಕ್ ಅಪಘಾತಗಳಲ್ಲಿನ ಬಹುತೇಕ ಪ್ರಕರಣಗಳಲ್ಲಿ ತಲೆಗೆ ಪೆಟ್ಟು ಮಾಡಿಕೊಂಡು ಸಾವನ್ನಪ್ಪಿದ್ದವರೇ ಹೆಚ್ಚಿದ್ದಾರೆ. ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದೆ ಇರುವುದು ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.