ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಗೆ ಸಚಿವ ಸ್ಥಾನ ನೀಡಲುವೀರ ಬಸವಂತರೆಡ್ಡಿ ಒತ್ತಾಯ

ಭಾರತೀಯ ಜನತಾ ಪಕ್ಷದ ಮಂಡಲ ಅಧ್ಯಕ್ಷರ ಆಯ್ಕೆ: ವೀರಬಸವಂತರಡ್ಡಿ
Last Updated 20 ಡಿಸೆಂಬರ್ 2019, 9:10 IST
ಅಕ್ಷರ ಗಾತ್ರ

ಯಾದಗಿರಿ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿ ಯಾದಗಿರಿ, ಕಲಬುರ್ಗಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿಯಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಭಾಗದವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು. ಆದರೆ, ಯಾರಿಗೆ ಕೊಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಕಾಂಗ್ರೆಸ್‌ನವರ ಕೈವಾಡ ಇದೆ. ಇಲ್ಲದಿದ್ದರೆ ವಿರೋಧ ವ್ಯಕ್ತವಾಗುತ್ತಿರಲಿಲ್ಲ.ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಭಯ ಬೇಡ. ಭಾರತೀಯ ಮುಸ್ಲಿಮರಿಗೆ ಯಾವ ತೊಂದರೆಯೂ ಇಲ್ಲ ಎಂದು ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಕಾರಿ ಅವರೇ ಹೇಳಿದ್ದಾರೆ. ಹೀಗಾಗಿ ಸುಮ್ಮನೆ ಪ್ರತಿಭಟನೆ ಮಾಡುವುದು ಅವಶ್ಯವಿಲ್ಲ ಎಂದರು.

ಪದಾಧಿಕಾರಿಗಳ ಘೋಷಣೆ:

ಜಿಲ್ಲಾ ಬಿಜೆಪಿಯಲ್ಲಿ 6 ಮಂಡಲ ಇದ್ದು ಅದರಲ್ಲಿ 4 ಮಂಡಲ ಅಧ್ಯಕ್ಷರ ಹೆಸರು ಘೋಷಣೆ ಮಾಡಿದರು. ಶಹಾಪುರ ನಗರ ಮಂಡಲ ದೇವೇಂದ್ರ ಕೊನೇರಾ, ಸುರಪುರ ಮೆಲಪ್ಪ ಗುಳಗಿ ಹುನಸಿಗಿ, ಯಾದಗಿರಿ ಗ್ರಾಮೀಣ ರಾಜಶೇಖರ ಕಾಡಮನೊರ, ಯಾದಗಿರಿ ನಗರ ಸುರೇಶ ಅಂಬಿಗೇರ ಅವರನ್ನು ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣಗೌಡ ಕಾಡಂನೋರ, ಮಾರುತಿ ಕಲಾಲ್‌, ಹಣಮಂತ ಇಟಗಿ, ಮಾಧ್ಯಮ ಪ್ರಮುಖ ಎಸ್‌.ಪಿ.ನಾಡೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT