ಯಾದಗಿರಿ: ನೆರೆಯ ವಿಜಯಪುರ ಜಿಲ್ಲೆಯ ಒಂದು ಗ್ರಾಮ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 45 ಗ್ರಾಮಗಳು ಸೇರಿ 46 ಗ್ರಾಮಗಳು ಸೂಕ್ತ ರಸ್ತೆ ಇಲ್ಲದೆ ಇಂದಿಗೂ ಬಸ್ಗಳ ಸೌಲಭ್ಯದಿಂದ ವಂಚಿತವಾಗಿವೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಕೆಕೆಆರ್ಟಿಸಿ) ವಿಜಯಪುರ, ‘ಕಲ್ಯಾಣ’ದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆ ಸೇವೆಯನ್ನು ನೀಡುತ್ತಿದೆ. 5,283 ಜನವಸತಿ ಗ್ರಾಮಗಳು ಒಳಗೊಂಡಿವೆ.

ವಿಧಾನಸಭೆಯಲ್ಲಿ ಶಾಸಕ ಯು.ಬಿ. ಬಣಕಾರ್ ಅವರಿಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೀಡದ ಲಿಖಿತ ಮಾಹಿತಿ ಅನ್ವಯ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ವ್ಯಾಪ್ತಿಯಲ್ಲಿ ಒಟ್ಟು 5,283 ಜನವಸತಿ ಗ್ರಾಮಗಳು ಬರುತ್ತವೆ. ಅದರಲ್ಲಿ 5,237 ಗ್ರಾಮಗಳಿಗೆ ಬಸ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 46 ಗ್ರಾಮಗಳು ರಸ್ತೆಗಳು ಬಸ್ ಸಂಚಾರಿಸಲು ಯೋಗ್ಯವಾಗಿಲ್ಲ. ಹೀಗಾಗಿ, ಆ ಗ್ರಾಮಗಳು ಬಸ್ಗಳ ಸೇವೆಯಿಂದ ವಂಚಿತವಾಗಿವೆ ಎಂಬುದು ತಿಳಿದುಬಂದಿದೆ.

ಬಸ್ ಸಂಪರ್ಕ ಇಲ್ಲದ ಗ್ರಾಮಗಳಿಗೆ ಕೆಕೆಆರ್ಟಿಸಿಯ ಬಸ್ಗಳು ಆ ಗ್ರಾಮಗಳ ಸಮೀಪದ 2 ಕಿ.ಮೀ. ಹತ್ತಿರದ ರಸ್ತೆಯವರೆಗೂ ಸಾರಿಗೆ ಸಾಲಭ್ಯವನ್ನು ಒದಗಿಸುತ್ತವೆ. ಉಳಿದ 2 ಕಿ.ಮೀ. ಅಂತರದಲ್ಲಿ ಆ ಹಳ್ಳಿಗಳ ಜನರು ದ್ವಿಚಕ್ರವಾಹನ, ಆಟೊ, ಟೆಂಪೊ, ಸರಕು ಸಾಗಣೆ ವಾಹನ, ಟ್ರ್ಯಾಕ್ಟರ್ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಸೂಕ್ತ ಸಾರಿಗೆ ಇಲ್ಲದ ಕಾರಣ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ನಿತ್ಯ ಓಡಾಡುವ ಉದ್ಯೋಗಿಗಳು, ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ರಸ್ತೆಗಳನ್ನು ಸರಿಪಡಿಸಿ ಬಸ್ಗಳನ್ನು ಗ್ರಾಮಗಳವರೆಗೆ ಓಡಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಿಕೊಂಡು ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನರು ಆರೋಪವಾಗಿದೆ.

ಕಲ್ಯಾಣ ಕರ್ನಾಟಕದ ಬಹುತೇಕ ರಸ್ತೆಗಳು ಕಳಪೆ ಕಾಮಗಾರಿ, ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಬದಿಯಲ್ಲಿ ನಿಲ್ಲುವುದು, ನಿಗದಿಗಿಂತ ಹೆಚ್ಚಿನ ಸರಕು ತುಂಬಿಕೊಂಡು ಓಡಾಡುವ ದೊಡ್ಡ ದೊಡ್ಡ ಟ್ರಕ್ಗಳಿಂದಾಗಿಯೂ ರಸ್ತೆಗಳು ಹಾನಿಯಾಗಿದೆ. ಅದರ ಪರಿಣಾಮವೂ ಬಸ್ ಸೇವೆಯ ಮೇಲೆ ಬೀರಿದೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮಗಳವರೆಗೆ ಬಸ್ಗಳ ಸೇವೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು, ಅವರ ಪೋಷಕರು, ಗ್ರಾಮಸ್ಥರು ರಸ್ತೆಗಳನ್ನು ತಡೆದು ಪ್ರತಿಭಟನೆ ಮಾಡುತ್ತಾರೆ. ಜನರ ಆಕ್ರೋಶಕ್ಕೆ ಮಣಿದು ಕೆಲವು ದಿನಗಳ ಮಟ್ಟಿಗೆ ಬಸ್ಗಳು ಸಹ ಓಡಾಡುತ್ತವೆ. ಮತ್ತೆ ಏನಾದರೂ ನೆಪ ಹೇಳಿ ಸಂಚಾರ ಸ್ಥಗಿತವಾಗುತ್ತದೆ ಎಂಬುದು ಸಾರ್ವಜನಿಕರ ಆರೋಪ.

ಸಂಪರ್ಕ ವಂಚಿತ ಗ್ರಾಮಗಳು

ಕಲಬುರಗಿ ಜಿಲ್ಲೆ: ಕುಲಕುಂದಾ ಬೀದರಚೇಡ್ ಬೂತನಾಳ ಹೆಗ್ಗನಾಳ ಅಕಂಡಹಳ್ಳಿ

ಯಾದಗಿರಿ ಜಿಲ್ಲೆ: ಸಮಣಾಪುರ ಹಾಲಬಾವಿ ನೀಲಕಂಠರಾಯನದೊಡ್ಡಿ ಉಪ್ಪಲದಿನ್ನಿ ಹಂದ್ರಾಳ (ಜೆ)

ಬೀದರ್ ಜಿಲ್ಲೆ: ಮುತಖೇಡ ಮುರ್ಗಾ ಬಾಳೂರು

ರಾಯಚೂರು ಜಿಲ್ಲೆ: ಕರ್ವಕುಲಂ ಕುರ್ವಕುರ್ದಾ ಅಗ್ರಹಾರ ಹರಳಪ್ಪನಹುಡಾ ಸಿದ್ದಮಬಾವಿ ಕ್ಯಾಂಪ್ ಗಾದಗಿ ಗಣೇಶನಗರ ಯರಮಲದೊಡ್ಡಿ ಬೇಳವಾಟ ಬುಳ್ಳಾಪುರ ಶಿವನಗೆರದೊಡ್ಡ ವೆಂಗಳಪುರ ಕೋಳೂರು ಕರಡಿಗುಡ್ಡ (ಡಿ) ಯದ್ದಲದಿನ್ನಿ ಕ್ಯಾಂಪ್ ಹಿರೇಕಡಬೂರ ಹೀಲಾಲಪುರ ಪರಾಪುರ

ಕೊಪ್ಪಳ ಜಿಲ್ಲೆ: ಅಚಲಪುರ ಅಮರಾಪುರ ಸಿಂಗನಗೊಂಡ ರಂಗಾಪುರ– ಜಂಗ್ಲಿ ಯತ್ನಟ್ಟಿ

ವಿಜಯನಗರ ಜಿಲ್ಲೆ: ಕನಾಯಕನಹಳ್ಳಿ ಹೊನ್ನಾಪುರ ಶ್ರೀಕಂಠಪುರ ಅರೇಬಸಾಪುರ ಕೋಣನಕಟ್ಟೆ ತಿಪ್ಪನಾಯಕನಹಳ್ಳಿ ನಾಗಲಾಪುರ ಅಣಿಮೇಗಳಗೆರೆ

ಬಳ್ಳಾರಿ ಜಿಲ್ಲೆ: ರಾಮಘಡ ಮತ್ತು ವಿಜಯಪುರ ಜಿಲ್ಲೆಯ ಬಿಸನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.