ಶುಕ್ರವಾರ, ಜನವರಿ 24, 2020
20 °C
ಯರಗೋಳ:ವಿವಿಧೆಡೆ ಸಾವಿತ್ರಿಬಾಯಿಫುಲೆ ಜನ್ಮದಿನ

ವಿವಿಧೆಡೆ ಸಾವಿತ್ರಿಬಾಯಿ ಜನ್ಮದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ದೇಶದಲ್ಲಿ ಮೊದಲ ಬಾರಿಗೆ ಬಾಲಕಿಯರ ಶಾಲೆ ಆರಂಭಿಸಿದ ಕೀರ್ತಿ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಗೆ ಸಲ್ಲುತ್ತದೆ ಎಂದು ಹತ್ತಿಕುಣಿ ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ್ವರ ಮೇಲಿನಮಠ ಹೇಳಿದರು.

ಸಾವಿತ್ರಿಬಾಯಿ  ಫುಲೆ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ  ಪೂಜೆ ನೆರವೇರಿಸಿ ಮಾತನಾಡಿದರು. ಮಲ್ಲಿಕಾರ್ಜುನ ಮಠ, ವಿದ್ಯಾರ್ಥಿಗಳು ಇದ್ದರು.

ಥಾವರು ನಾಯಕತಾಂಡ

ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ  ಸಾವಿತ್ರಿ ಬಾಯಿ ಫುಲೆ ರವರ 192ನೇಯ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರಾದ ಸಿದ್ದಲಿಂಗಪ್ಪ ಪಾಟೀಲ್, ರಾಕೇಶ್ ಇದ್ದರು.

ಅರಕೇರಾ

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರ ಬಾಯಿ  ಫುಲೆ ಜನ್ಮದಿನ  ಆಚರಿಸಲಾಯಿತು. ಮುಖ್ಯ ಶಿಕ್ಷಕ ವಿಶ್ವನಾಥರೆಡ್ಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಶಿಕ್ಷಕರಾದ ಚನ್ನಬಸಪ್ಪ, ಭೀಮರಾಜ, ಶಿವಶರಣಪ್ಪ, ಗಾಯಿತ್ರಿ, ಲಕ್ಷ್ಮಿ, ಆಶಲತ ಇದ್ದರು.

ಮಲ್ಕಪ್ಪನಹಳ್ಳಿ 

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿಫುಲೆ ರವರ  ಜನ್ಮದಿನೋತ್ಸವ ಆಚರಿಸಲಾಯಿತು. ಸಹ ಶಿಕ್ಷಕ ಗುರಪ್ಪ, ಸಹ ಶಿಕ್ಷಕ ಮಧು ಕುಲಕರ್ಣಿ,  ಮುಖ್ಯ ಶಿಕ್ಷಕ ಈರಣ್ಣ, ಯರಗೋಳ ಸಿಆರ್‌ಪಿ ಶರಣಪ್ಪ ಮತ್ತು ಲಕ್ಷಣ್ ಇದ್ದರು.

ಯರಗೋಳ

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಮುಖ್ಯಗುರು ಚಂದ್ರಪ್ಪ ಗುಂಜನೂರು ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು. ಗ್ರಾಮದ ಭೀಮಾಶಂಕರ ಎಂ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚನ್ನಬಸಪ್ಪ ಜೋಗಿ, ಶಿಕ್ಷಕರಾದ ಗೀತಾ, ನಾಜೀಯ, ಉಮೇಶ ನರಗುಂದ, ಮರೆಪ್ಪ ಇದ್ದರು.

ನಾಲವಾರ

ಗ್ರಾಮದ ಸಮಾಜ ಕಲ್ಯಾಣ ವಸತಿನಿಲಯದಲ್ಲಿ ಮಾತೆ ಸಾವಿತ್ರಿಭಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು. ಮೇಲ್ವಿಚಾರಕ ಸಿದ್ರಾಮಪ್ಪ ಸಿ ದಿಬ್ಬಾ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪೂಜೆ ನೆರವೇರಿಸಿದರು. ಸಿಬ್ಬಂದಿ ಸರೋಜ, ಸೂರಜ್ ಇದ್ದರು.

ನಾಗಾರಬಂಡ 

ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ರವರ ಜಯಂತಿ ಆಚರಿಸಲಾಯಿತು .ಮುಖ್ಯ ಶಿಕ್ಷಕ ಅಲ್ಲಾವುದ್ದಿನ್ ಕಂದಕೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುಂದ್ರ ಉಪಸ್ಥಿತರಿದ್ದರು.

ಅಲ್ಲಿಪೂರ ತಾಂಡ

ಧಾಮಸಾಧಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಜನ್ಮದಿನ ಆಚರಿಸಿದರು. ಮುಖ್ಯ ಶಿಕ್ಷಕ ಗೋವಿಂದ ರಾಠೋಡ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶಿಕ್ಷಕ ಸಾಬಣ್ಣ ಬಾನರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು