ಶುಕ್ರವಾರ, ಸೆಪ್ಟೆಂಬರ್ 30, 2022
26 °C

ವಿವಾಹಿತೆ ಜತೆ ಮರು ಮದುವೆ ಶಂಕೆ: ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೇಚೂರು (ಸೈದಾಪುರ): ಯಾದಗಿರಿ ತಾಲ್ಲೂಕಿನ ಕಡೇಚೂರು ಹೊರ ವಲಯದಲ್ಲಿ ಯುವಕನ ಕೊಲೆ ಮಾಡಿದ ಘಟನೆ ಸೋಮವಾರ
ನಡೆದಿದೆ.

ಯಲಸತ್ತಿ ಗ್ರಾಮದ ನಿವಾಸಿ ಸಿದ್ಧಾರ್ಥ ಗೌಡ(28) ಕೊಲೆಯಾದ ಯುವಕ.

ಬೆಂಗಳೂರಿನಲ್ಲಿ ಪರಿಚಯ ಆಗಿದ್ದ ವಿವಾಹಿತ ಮಹಿಳೆಯೊಬ್ಬರನ್ನು ಮಾತನಾಡಿಸಲು ಕಡೇಚೂರಿಗೆ ತೆರಳಿದ್ದ. ಇದನ್ನು ಸಹಿಸದ ಆಕೆಯ ಸಹೋದರರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಯುವಕನ ತಂದೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದ ಸಿದ್ಧಾರ್ಥ, ಅಲ್ಲಿಯೇ ಪತಿಯಿಂದ ದೂರವಾಗಿದ್ದ ಮಹಿಳೆಯ ಪರಿಚಯವಾಗಿತ್ತು. ಆ ಬಳಿಕ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ಸಹ ಆಗಿದ್ದ. ಇದನ್ನು ಅರಿತ ಮಹಿಳೆಯ ಸಂಬಂಧಿಕರು ಆಕೆಯನ್ನು ಗ್ರಾಮಕ್ಕೆ ಕರೆತಂದರು. ಮಹಿಳೆಯನ್ನು ಮಾತ ನಾಡಿಸಲು ಕಡೇಚೂರಿಗೆ ಹೋಗಿ ದ್ದಾಗ ಆಕೆಯ ಪತಿ ಹಾಗೂ ಸಹೋದರರು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಪ್ರಕರಣ ಸಂಬಂಧ ಒಬ್ಬ ಕೊಲೆಯ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.