ಯಾದಗಿರಿ: ಮೇ 12ರಂದು ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಜನಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಭದ್ರತಾ ಸಿಬ್ಬಂದಿ ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.

ನಗರದ ಠಾಣೆ ಕಚೇರಿಂದ ಆರಂಭಗೊಂಡ ಪಥ ಸಂಚಲನ ಹತ್ತಿಕುಣಿ ಕ್ರಾಸ್ ಮಾರ್ಗವಾಗಿ, ವೀರಶೈವ ಕಲ್ಯಾಣ ಪಂಟಪ, ಗಾಂಧಿವೃತ್ತ, ಚಕ್ಕರಕಟ್ಟಾ, ಗಂಜ್, ಹೊಸಳ್ಳಿ ಕ್ರಾಸ್, ಶಾಸ್ತ್ರಿವೃತ್ತ, ಸ್ಟೇಷನ್ ಏರಿಯಾ, ಸುಭಾಶ್ಚಚಂದ್ರ ಬೋಸ್ ಮಾರ್ಗವಾಗಿ ಸರ್ಕಾರಿ ಪದವಿ ಮಹಾವಿದ್ಯಾಲಯದವರೆಗೆ ಸಾಗಿತು.

ನಂತರ ಮಾತನಾಡಿದ ಎಸ್.ಪಿ.ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ‘ಜಿಲ್ಲೆಗೆ ಸದ್ಯ ಎರಡು ಭದ್ರತಾ ಪಡೆ ತುಕಡಿಗಳು ಬಂದಿವೆ. ಅಧಿಸೂಚನೆಯ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಪಥ ಸಂಚಲನದಲ್ಲಿ ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ಮೌನೇಶ್ವರ ಪಾಟೀಲ್, ನಗರಠಾಣೆ ಪಿಎಸ್‌ಐ ಮಹಾಂತೇಶ ಸಜ್ಜನ್ ಪಾಲ್ಗೊಂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.