ಚಿತ್ರದುರ್ಗ: ಪ್ರವಾದಿ ಮಹಮದ್‌ರ ಪರೋಪಕಾರ ಮಾರ್ಗಗಳನ್ನು ಎಲ್ಲರೂ ಅನುಸರಿಸಬೇಕಿದೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ನುಡಿದರು.ನಗರದ ಸಂತೆಹೊಂಡ ಪಕ್ಕದ ಜಟಕಾ ಗಾಡಿ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ್ದ ಈದ್-ಮಿಲಾದ್ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರವಾದಿ ಮಹಮದ್ ಕೇವಲ ಒಂದೇ ಕೋಮಿಗೆ ಸಿಮೀತರಾಗದೇ ಎಲ್ಲ ವರ್ಗದವರ ಏಳಿಗೆಗೆ ಶ್ರಮಿಸಿದ್ದರು.ಜನರಲ್ಲಿದ್ದ ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ದೂರ ಮಾಡಲು ಪ್ರಯತ್ನಿಸಿದ್ದರು ಎಂದರು.ಮಾದಾರ ಗುರುಪೀಠದಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮಗಳಲ್ಲಿ ಒಂದು ರೀತಿಯ ಬೇಕು-ಬೇಡ ಎನ್ನುವ ಗೊಂದಲವಿದ್ದು, ಇದರ ನಿವಾರಣೆಗೆ ಎಲ್ಲ ದಾರ್ಶನಿಕರ ತತ್ವಗಳನ್ನು ಅಳವಡಿಸಿಕೊಂಡು ಶಾಂತಿ ವಾತಾವರಣ ನಿರ್ಮಿಸಬೇಕಿದೆ ಎಂದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಮನೆಗಳಿಲ್ಲದ ಮುಸ್ಲಿಂ ಸಮುದಾಯದವರಿಗೆ ಮುಂದಿನ ದಿನಗಳಲ್ಲಿ ಸ್ವತಃ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಮನೆಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.ವಕೀಲ ಮಹಮದ್ ಸಾದಿಕ್‌ವುಲ್ಲ ಅಧ್ಯಕ್ಷತೆ ವಹಿಸಿದ್ದರು.

ಜೆಡಿಎಸ್ ಮುಖಂಡ ಎಂ.ಕೆ. ತಾಜ್‌ಪೀರ್, ನಗರಸಭೆ ಉಪಾಧ್ಯಕ್ಷ ಸೈಯ್ಯದ್ ಅಲ್ಲಭಕ್ಷ, ಸದಸ್ಯರಾದ ಮಹಮ್ಮದ್ ಅಹಮದ್ ಪಾಷ, ಅಬ್ದುಲ್ ಜಬ್ಬಾರ್, ಟಿಪ್ಪುಸುಲ್ತಾನ್ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ. ಖಾಸಿಂ ಅಲಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.