ಬೆಂಗಳೂರು: ರಾಜ್ಯದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಸಾರ ಮತ್ತು ಉಳಿವಿಗೆ ಶ್ರಮಿಸಿದ ಶ್ರೀ ಸೋಮಾಶಿಯಾಂಡಾನ್ ಮಂದಿರವು ಮಂಡ್ಯ ಜಿಲ್ಲೆಯ ಪವಿತ್ರ ಕ್ಷೇತ್ರ ಮೇಲುಕೋಟೆಯಲ್ಲಿ ನಿರ್ಮಾಣಗೊಂಡಿದ್ದು ಉದ್ಘಾಟನೆಯು ಇದೇ ಭಾನುವಾರ ನೆರವೇರಲಿದೆ. ಅಂದು ಬೆಳಿಗ್ಗೆ 8ಕ್ಕೆ ವಾಸ್ತು ಹೋಮ ಧಾರ್ಮಿಕ ವಿಧಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.

ಮಂದಿರಕ್ಕೆ ನಿವೇಶನವನ್ನು ನೀಡಿದ ದಾನಿ ದಿವಂಗತ ನುಗ್ಗೇಹಳ್ಳಿ ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರವನ್ನು ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಆರ್.ಕಸ್ತೂರಿರಂಗನ್ ಅನಾವರಣ ಮಾಡುವರು. ಆನಂತರ ‘ಆಚಾರ್ಯರ ದಿವ್ಯ ಚರಿತ್ರೆ’ ಕೃತಿಯನ್ನು ವಿದ್ವಾನ್ ಜನಾರ್ದನಾಚಾರ್ ಬಿಡುಗಡೆ ಮಾಡುವರು. ಇದೇ ಸಂದರ್ಭದಲ್ಲಿ ‘ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಾತ್ಮದ ಅಗತ್ಯ’ ಮತ್ತು ‘ಆಚಾರ್ಯ ರಾಮಾನುಜರು’ ಮತ್ತಿತರ ವಿಷಯಗಳ ಕುರಿತು ಡಾ.ಎಂ.ಎ.ಲಕ್ಷ್ಮೀತಾತಾಚಾರ್, ಡಾ.ಎಂಬಾರ್ ರಂಗಾಚಾರ್, ಜಮುನಾ, ಸೀತಾಲಕ್ಷ್ಮಿ ಮತ್ತು ಎಂ.ಎಸ್.ಅಯ್ಯಂಗಾರ್ ಅವರು ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೆ ತೆರಳಲು ಪ್ರಯಾಣ ಸೌಕರ್ಯ ಇನ್ನಿತರ ಮಾಹಿತಿಗೆ ಶ್ರೀರಾಮಮಿಶ್ರ (ಸೋಮಾಶಿಯಾಂಡಾನ್) ಆಚಾರ್ಯರ ಸೇವಾ ಸಮಿತಿಗಳ ಒಕ್ಕೂಟದ ಸಂಚಾಲಕರನ್ನು 94882 18962ರಲ್ಲಿ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.