ರಾಯಚೂರು: ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಭರವಸೆಯನ್ನು ನಗರಸಭೆ ಹುಸಿಗೊಳಿಸಿದೆ ಎಂದು ಆಪಾದಿಸಿ ಮಂಗಳವಾರ ‘ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.ಸ್ವಾತಂತ್ರ್ಯ ಹೋರಾಟಗಾರರು, ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಹದಗೆಟ್ಟ ರಸ್ತೆ ದುರಸ್ತಿಪಡಿಸಬೇಕು, ತರಕಾರಿ ಮಾರುಕಟ್ಟೆ ನವೀಕರಣ ಮಾಡಬೇಕು, ಮೂತ್ರಾಲಯ ನಿರ್ಮಿಸಬೇಕು, ಚರಂಡಿ ಸ್ವಚ್ಛಗೊಳಿಸುವ ಕಾರ್ಯವನ್ನು ನಗರಸಭೆ ತುರ್ತಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಧರಣಿ ನಿರತರಿಂದ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಎಂಜಿನಿಯರ್ ಮಲ್ಲಿಕಾರ್ಜುನ ಮನವಿ ಸ್ವೀಕರಿಸಿದರು. ಪ್ರಮುಖ ರಸ್ತೆ ಅಭಿವೃದ್ಧಿಗೆ ರೂ 5 ಕೋಟಿ ಹಾಗೂ ತರಕಾರಿ ಮಾರುಕಟ್ಟೆ ನವೀಕರಣಕ್ಕೆ ರೂ 2.5 ಕೋಟಿ ಮಂಜೂರಾಗಿದೆ. ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

ಹೋರಾಟ ಸಮಿತಿ ಸಂಚಾಲಕಿ ಅಪರ್ಣಾ ಬಿ.ಆರ್, ಶಿವರಾಜ ಪಾಟೀಲ್, ಎನ್ ಮಹಾವೀರ, ಸಹನಾ ಹಿರೇಮಠ, ಚಂದ್ರಗಿರೀಶ್, ಸಲಹೆಗಾರರಾದ ಡಾ ವಿಠಲ ಉದಗಟ್ಟಿ, ಡಾ ಶ್ರೀಧರರಡ್ಡಿ, ಸ್ವಾತಂತ್ರ್ಯ ಹೋರಾಟಗಾರರಾದ ಕಾಶಿರಾವ್ ಪಾಟೀಲ್, ಮಹದೇವಪ್ಪ ಹಂಚಿನಾಳ, ಕೆ.ಕೆ ದುರ್ಗಾಪ್ರಸಾದ್, ಕೃಷ್ಣಪ್ಪ ರೋಡಲಬಂಡ, ಕೆ.ಸಂತೋಷಕುಮಾರ, ಫ್ರಾಂಕ್ಲಿನ್ ರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ, ಚನ್ನಬಸವ ಜಾನೇಕಲ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.