ಮದ್ದೂರು: ಮಕ್ಕಳಲ್ಲಿನ ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುವ ನಿಟ್ಟಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75ಸಾವಿರ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಲಾಗುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಲ್.ಗುರುಲಿಂಗಸ್ವಾಮಿ ಬುಧವಾರ ತಿಳಿಸಿದರು.

ಸಮೀಪದ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಇಂಗ್ಲಿಷ್-ಕನ್ನಡ ನಿಘಂಟು ವಿತರಿಸಿದ ಅವರು, `ಶಬ್ಧಕೋಶವು ಜ್ಞಾನ ಭಂಡಾಡವಿದ್ದಂತೆ. ಶಬ್ದಸಂಪತ್ತು ಎಂದಿಗೂ ಮುಗಿಯಲಾರದ ಜ್ಞಾನ ಸಂಪತ್ತು ಆಗಿದ್ದು, ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಬಗೆಗಿನ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಶಿಕ್ಷಕ ಕೆ.ಪಿ.ಜಯಮುದ್ದು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಎಂ.ಎನ್.ಶಿವಣ್ಣ ಮಾತನಾಡಿದರು. ಸದಸ್ಯರಾದ ಜಿತೇಂದ್ರಸಿಂಗ್, ಬಿ.ಎನ್.ಕೇಶವ, ಶಿಕ್ಷಕರಾದ ಜಿ.ಜೆ.ಸುರೇಶ್, ಬಿ.ಎಸ್.ಮಹದೇವಸ್ವಾಮಿ, ಬಿ.ಎಲ್.ಮಧುಸೂದನ, ಜಿ.ಕೆ.ಮಾಲತಿ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.