ರಾಯಚೂರು: ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಧ್ವಂಸಕ ಕೃತ್ಯ ನಡೆಸುವವರು ಸೈಬರ್ ಕೆಫೆಗಳನ್ನು ವ್ಯಾಪಕ ರೀತಿ ಬಳಸಿಕೊಳ್ಳುತ್ತಿದ್ದಾರೆ. ಇಂಥ ಕೃತ್ಯ ನಡೆಸುವವರ ಶೀಘ್ರ ಪತ್ತೆ ಮಾಡಲು, ಸೈಬರ್ ಅಪರಾಧ ಪ್ರಕರಣ ತಗ್ಗಿಸುವ ನಿಟ್ಟಿನಲ್ಲಿ `ಕ್ಲಿಂಕ್ ಸೈಬರ್ ಕೆಫೆ ನಿರ್ವಹಣಾ ಸಾಫ್ಟ್ವೇರ್~ ಮಹತ್ವದ ಪಾತ್ರ ವಹಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಹೇಳಿದರು.

ಬುಧವಾರ `ಕ್ಲಿಂಕ್ ಸೈಬರ್ ಕೆಫೆ ನಿರ್ವಹಣಾ ಸಾಫ್ಟ್ವೇರ್ ಅಳವಡಿಕೆ~ ಕುರಿತು ರಾಯಚೂರಿನಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಏರ್ಪಡಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಡಿಯಾಕ್ಟ್ಸ್ ಇನ್ನೋವೇಶನ್ಸ್ ಸಂಸ್ಥೆಯ ಈ ಸಾಫ್ಟ್ವೇರ್ ಸೈಬರ್ ಕೆಫೆಗಳಿಗೆ ಉಪಯುಕ್ತವಾದುದು. ಸೈಬರ್ ಕೆಫೆಯವರು ಇದರ ಅಳವಡಿಕೆಗೆ ಯಾವುದೇ ರೀತಿ ಹಣ ಕೊಡಬೇಕಾಗಿಲ್ಲ. ಸಂಪೂರ್ಣ ಉಚಿತವಾಗಿ ಇದನ್ನು ಸಂಸ್ಥೆ ಅಳವಡಿಸಲಿದೆ. ಜಿಲ್ಲೆಯಲ್ಲಿನ ಎಲ್ಲ ಸೈಬರ್ ಕೆಫೆಗಳು ಈ ಸಾಫ್ಟ್ವೇರ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿದರು.

ಇಲಾಖೆಗೆ ಇರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 75 ಸೈಬರ್ ಕೆಫೆ ಇವೆ. ಅನಧಿಕೃತವಾಗಿ ಇಂಥ ಕೆಫೆ ನಡೆಸುತ್ತಿದ್ದರೆ ಒಂದು ವಾರದಲ್ಲಿ ಸರಿಪಡಿಸಿಕೊಳ್ಳಬೇಕು. ಬೆದರಿಕೆ, ಸಮಾಜದ ಶಾಂತಿ ನಾಶ ಮಾಡುವ, ಆತಂಕಕಾರಿ ವಾತಾವರಣಕ್ಕೆ ಕಾರಣವಾಗುವ ಸಂದೇಶಗಳನ್ನು ಸೈಬರ್ ಕೆಫೆ ಮೂಲಕ ರವಾನಿಸುವಂಥ ಬೆಳವಣಿಗೆ ತಡೆಗೆ ಕ್ಲಿಂಕ್ ಸಾಫ್ಟ್ವೇರ್ ಅಳವಡಿಸುವ ಮೂಲಕ ಆರೋಪಿಗಳು ಕೆಲ ಕ್ಷಣದಲ್ಲಿ ಪತ್ತೆ ಮಾಡಬಹುದು. ಹೀಗಾಗಿ ಈ ವಿಷಯದಲ್ಲಿ ಸೈಬರ್ ಕೆಫೆಯವರು ಸಹಕರಿಸಬೇಕು ಎಂದರು.

ಸಂಸ್ಥೆಯ ವ್ಯವಸ್ಥಾಪಕ ಎಂ.ಖಾನ್, ಸೈಬರ್ ಕೆಫೆಗಳನ್ನು ದೂರವಾಣಿ ಕ್ವಾಯಿನ್ ಬಾಕ್ಸ್ ರೀತಿ ಸಾರ್ವಜನಿಕರು ಬಳಸುತ್ತಾರೆ. ಸೈಬರ್ ಕೆಫೆಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಈ ಸಾಫ್ಟ್ವೇರ್ ಅಳವಡಿಕೆಯು ಎಲ್ಲ ರೀತಿಯ ಆತಂಕದಿಂದ ದೂರ ಮಾಡುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.