ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಕೌಶಲ್ಯ ಹೊಂದಿರುವವರಿಗೆ ಐಟಿಬಿಪಿಯಲ್ಲಿ 287 ಟ್ರೇಡ್ಸ್‌ಮೆನ್ ಹುದ್ದೆಗಳು

ಅಕ್ಷರ ಗಾತ್ರ

ಕೇಂದ್ರ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಅರೆಸೇನಾಪಡೆಯಾದ 'ಇಂಡೋ ಟಿಬೇಟಿಯನ್ ಗಡಿ ಭದ್ರತಾ ಪಡೆ'ಯ‌ಲ್ಲಿ (ITBPF) 287 'ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್' ಹುದ್ದೆಗಳಿಗೆ ಆನ್‌ಲೈನ್ ಅರ್ಜಿಆಹ್ವಾನಿಸಲಾಗಿದೆ. ವಿಶೇಷ ಕೌಶಲ್ಯಗಳಿರುವ ಯುವಕ–ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು ಯಾವವು? ಎಷ್ಟು?

ಟೈಲರ್–18

ಗಾರ್ಡನರ್– 16

ಕಾಬ್ಲರ್ (ಚಮ್ಮಾರ)– 31

ಸಫಾಯಿ ಕರ್ಮಚಾರಿ– 78

ವಾಶರ್‌ಮ್ಯಾನ್– 89

ಬಾರ್ಬರ್ (ಕ್ಷೌರಿಕ)–55

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಐಟಿಬಿಪಿಯ ಅಧಿಕೃತ recruitment.itbpolice.nic.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಕೆ ನವೆಂಬರ್ 23ರಿಂದ ಆರಂಭವಾಗಿದ್ದು, ಡಿಸೆಂಬರ್ 22ಕ್ಕೆ ಅಂತ್ಯವಾಗಲಿದೆ. ಅಭ್ಯರ್ಥಿಗಳು ಕೊನೆ ದಿನಾಂಕದವರೆಗೆ ಕಾಯದೆ ಸೂಕ್ತ ದಾಖಲಾತಿಗಳೊಡನೆ ಬೇಗ ಅರ್ಜಿ ಸಲ್ಲಿಸಬೇಕು.

ವೇತನ ಶ್ರೇಣಿ

ಐಟಿಬಿಪಿಯಲ್ಲಿ ‘ಸಿ’ ಗ್ರುಪ್‌ನ ಟ್ರೇಡ್ಸ್‌ಮನ್ ಹುದ್ದೆಗಳಿಗೆ ₹21,700 ರಿಂದ ₹69,100 ವರೆಗಿನ ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಹತೆ ಏನು?

ಮೇಲೆ ಸೂಚಿಸಿದ ಹುದ್ದೆಗಳಿಗೆ ಕನಿಷ್ಠ 10 ನೇ ತರಗತಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಜೊತೆಗೆ ಸಂಬಂಧಿಸಿದ ಹುದ್ದೆಗಳ ಕ್ಷೇತ್ರಗಳಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು.ಟೈಲರ್,ಗಾರ್ಡನರ್,ಕಾಬ್ಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 18–23ರ ವಯೋಮಾನದವರಾಗಿರಬೇಕು.ಸಫಾಯಿ ಕರ್ಮಚಾರಿ,ವಾಶರ್‌ಮ್ಯಾನ್,ಬಾರ್ಬರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು 18–25ರ ವಯೋಮಾನದವರಾಗಿರಬೇಕು. ಎಸ್‌.ಸಿ/ಎಸ್‌ಟಿ, ಒಬಿಸಿ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಟ್ರೇಡ್ಸ್‌ಮನ್ ಹುದ್ದೆಗಳಿಗೆ 3 ಹಂತದ ಆಯ್ಕೆ ಪ್ರಕ್ರಿಯೆ ಇರುತ್ತದೆ. ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಅರ್ಹತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ಇರುತ್ತದೆ. ಇದರಲ್ಲಿ ಅರ್ಹತೆ ಪಡೆಯುವವರು ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆ ಬರೆಯಬೇಕು. ಅದರಲ್ಲಿ ಅರ್ಹತೆ ಪಡೆಯುವವರು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿದರೆ ಐಟಿಬಿಪಿಯಲ್ಲಿಟ್ರೇಡ್ಸ್‌ಮನ್ ಆಗಿ ಆಯ್ಕೆಯಾಗುತ್ತಾರೆ. ದೈಹಿಕ ಪರೀಕ್ಷೆ ಮಾನದಂಡಗಳಿಗಾಗಿ, ಪರೀಕ್ಷಾ ದಿನಾಂಕ ಹಾಗೂ ಇತರ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ವೈಬ್‌ಸೈಟ್‌ನಲ್ಲಿ ಲಭ್ಯವಿರುವ ನೇಮಕಾತಿ ಅಧಿಸೂಚನೆ ಪರಿಶೀಲಿಸಬೇಕು.

***

ಬಾಕ್ಸ್

ಪರೀಕ್ಷೆ ಹೇಗಿರುತ್ತದೆ?

ಐಟಿಬಿಪಿ ಟ್ರೇಡ್ಸ್‌ಮನ್ ಹುದ್ದೆಗಳಿಗೆ ದೈಹಿಕ ಪರೀಕ್ಷೆ ನಂತರ 100 ಅಂಕಗಳ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆ ಇರುತ್ತದೆ. 50 ಅಂಕಗಳು 10 ನೇ ತರಗತಿ ಮಟ್ಟದ ಸಾಮಾನ್ಯ ಜ್ಞಾನದ 50 ಪ್ರಶ್ನೆಗಳಿರುತ್ತವೆ. ನಂತರ ಸಂಬಂಧಿಸಿದ ಟ್ರೇಡ್‌ಗಳಲ್ಲಿ 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ಇರುತ್ತದೆ. ಇಲ್ಲಿ ಅಭ್ಯರ್ಥಿಗಳು ತಮ್ಮ ಕೌಶಲ್ಯ ತೋರಿಸಿ ಅಂಕಗಳನ್ನು ಪಡೆಯಬೇಕು.

ಐಟಿಬಿಪಿ ಬಗ್ಗೆ

ಕೇಂದ್ರ ಅರೆ ಸೇನಾಪಡೆಯಾಗಿರುವ ಐಟಿಬಿಪಿ ಪಡೆಯು, 1962ರ ಭಾರತ–ಚೀನಾ ಯುದ್ಧದ ನಂತರ ಜನ್ಮ ತಳೆಯಿತು. ಐಟಿಬಿಪಿ ಮುಖ್ಯ ಉದ್ದೇಶ ಟಿಬೆಟ್ ಸನಿಹದ ಗಡಿ ಮೂಲಕ ಚೀನಾದ ಭೂ ಆಕ್ರಮಣವನ್ನು ತಡೆಯುವುದು ಹಾಗೂ ಆ ಭಾಗದ ಭಾರತೀಯರಿಗೆ ರಕ್ಷಣೆ ನೀಡುವ ಉದ್ದೇಶ ಹೊಂದಿದೆ. ಪ್ರಸ್ತುತ ಹಿರಿಯ ಐಪಿಎಸ್ ಅಧಿಕಾರಿ ಅನಿಶ್ ದಯಾಳ್ ಸಿಂಗ್ ಅವರು ಈ ಪಡೆಯ ಮಹಾ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT