ನವದೆಹಲಿ: ಹೆಚ್ಚುತ್ತಿರುವ ವ್ಯವಹಾರದ ಅಗತ್ಯತೆ ಪೂರೈಸಲು ಮತ್ತು ವಹಿವಾಟು ವಿಸ್ತರಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರಿ ವಲಯದ ಬ್ಯಾಂಕ್ಗಳು 50 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿವೆ.

ಈ ಪೈಕಿ 21 ಸಾವಿರ ಹುದ್ದೆಗಳು ಅಧಿಕಾರಿ ಹಂತದವು. ಇನ್ನುಳಿದವು ಗುಮಾಸ್ತ ಹಾಗೂ ಇತರ ಹುದ್ದೆಗಳು. ವಿವಿಧ ಬ್ಯಾಂಕ್ಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ದೇಶದ ಸರ್ಕಾರಿ ಬ್ಯಾಂಕ್ಗಳ ಪೈಕಿ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) 20 ಸಾವಿರ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಿದೆ. ಈ ಪೈಕಿ 505 ಪ್ರೊಬೇಷನರಿ ಅಧಿಕಾರಿಗಳು ಮತ್ತು 13,455 ಕಿರಿಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬ್ಯಾಂಕ್ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ.

2025ರ ಮಾರ್ಚ್ ಅಂತ್ಯದ ವೇಳೆಗೆ ಎಸ್ಬಿಐನಲ್ಲಿ ಒಟ್ಟು 2,36,226 ಸಿಬ್ಬಂದಿ ಇದ್ದಾರೆ. ಎಸ್ಬಿಐನಲ್ಲಿ ಪ್ರತಿ ವರ್ಷ ಕೆಲಸ ತೊರೆಯುವವರ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) 5,500 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ 1,02,746 ಸಿಬ್ಬಂದಿಯನ್ನು ಹೊಂದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4 ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸಿದೆ.

ಸರ್ಕಾರಿ ವಲಯದ ಬ್ಯಾಂಕ್ಗಳು ತಮ್ಮ ಅಧೀನ ಸಂಸ್ಥೆಗಳನ್ನು ಷೇರುಪೇಟೆಯಲ್ಲಿ ನೋಂದಾಯಿಸಿ, ಅವುಗಳಲ್ಲಿ ಹೂಡಿಕೆಯ ನಗದೀಕರಣದ ಬಗ್ಗೆ ಪರಿಶೀಲನೆ ನಡೆಸುವಂತೆ ಹಣಕಾಸು ಸಚಿವಾಲಯವು ಸೂಚಿಸಿದೆ.

ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಅಥವಾ ಷೇರು ವಿಕ್ರಯಕ್ಕಾಗಿ ಸುಮಾರು 15 ಅಧೀನ ಸಂಸ್ಥೆಗಳು ಅಥವಾ ಸರ್ಕಾರಿ ವಲಯದ ಬ್ಯಾಂಕ್ಗಳ ಜಂಟಿ ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.