ಶುಕ್ರವಾರ, ಅಕ್ಟೋಬರ್ 7, 2022
28 °C

ಕೆನಡಾ | 10 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಭಾರತೀಯರತ್ತ ಮುಖ ಮಾಡಿದ ಸರ್ಕಾರ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಒಟ್ಟಾವ: ಕೆನಾಡದಲ್ಲಿ ಪ್ರಸಕ್ತ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಸ್ಥಳೀಯ ಲೇಬರ್‌ ಫೋರ್ಸ್‌ ಸರ್ವೆ ಸಮೀಕ್ಷೆ ಮಾಡಿದೆ ಎಂದು ಕೆನಾಡ ಮಾಧ್ಯಮಗಳು ಹೇಳಿವೆ.

ರಿಯಲ್‌ ಎಸ್ಟೇಟ್‌ ವಲಯ ಸೇರಿದಂತೆ ಕೈಗಾರಿಕೆ, ಸೇವಾ ವಲಯ, ವೈಜ್ಞಾನಿಕ ಮತ್ತು ತಾಂತ್ರಿಕ ಸೇವೆಗಳು, ಸಾರಿಗೆ ಮತ್ತು ಉಗ್ರಾಣ, ಹಣಕಾಸು ಮತ್ತು ವಿಮೆ, ಮನೋರಂಜನೆ ಕ್ಷೇತ್ರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು 2024ರ ವೇಳೆ 4.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಯೋಜಿಸಿದೆ ಎಂದು ಲೇಬರ್‌ ಫೋರ್ಸ್‌ ಸರ್ವೆ ತನ್ನ ವರದಿಯಲ್ಲಿ ಹೇಳಿದೆ.

ಈ ದಶಕದಲ್ಲಿ ಸುಮಾರು 90 ಲಕ್ಷ ಉದ್ಯೋಗಿಗಳು ನಿವೃತ್ತರಾಗಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದೆ. ಇತ್ತ ಕೆನಾಡ ಸರ್ಕಾರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ವಿದೇಶಿಯರ ಕಡೆ ನೋಡುತ್ತಿದೆ. ಖಾಲಿ ಹುದ್ದೆಗಳಿಗೆ ಭಾರತೀಯರನ್ನು ಭರ್ತಿ ಮಾಡಲು ಕೆನಾಡ ಸರ್ಕಾರ ಉತ್ಸುಕವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು