ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹೇಗೆ?

Last Updated 4 ಡಿಸೆಂಬರ್ 2022, 20:30 IST
ಅಕ್ಷರ ಗಾತ್ರ

1. ಬಿ.ಎಸ್ಸಿ ಓದಿ ಮುಗಿದಿದೆ. ಈಗ, ಎಂಸಿಎ ಮಾಡಬೇಕಾದರೆ ಹೇಗೆ ಸಿದ್ಧತೆ ಮಾಡಬೇಕು? ಓದಲು ಕಷ್ಟವಾಗಬಹುದೇ? ಇದರ ಬಗ್ಗೆ ಮಾಹಿತಿ ಕೊಡಿ.
ಹರಿಪ್ರಸಾದ್, ಹಾಸನ.
ನೀವು ಪಿಯುಸಿ/ಪದವಿಯಲ್ಲಿ ಗಣಿತವನ್ನು ಓದಿ, ಕನಿಷ್ಠ ಶೇ 50 ಅಂಕ ಗಳಿಸಿದ್ದರೆ, ಎಂಸಿಎ ಮಾಡಿ ಸಾಫ್ಟ್‌ವೇರ್‌ವೃತ್ತಿಯನ್ನು
ಅರಸಬಹುದು. ಈಗ, ಎಂಸಿಎ ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೊದಲಿಗೆ, ನೀವು ಯಾವ ವಿಶ್ವವಿದ್ಯಾಲಯದಲ್ಲಿ ಎಂಸಿಎ ಮಾಡಬೇಕೆಂದು ನಿರ್ಧರಿಸಿ, ಅದಕ್ಕೆ ಅನುಗುಣವಾಗುವ ಪ್ರವೇಶ ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಂಡು, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತ ಕಾರ್ಯತಂತ್ರವನ್ನು ರೂಪಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಗಣಿತ, ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸಿದ್ಧಾಂತಗಳ ಬಗ್ಗೆ ಪರಿಣತಿಯಿರಬೇಕು. ಅಗತ್ಯ ಪುಸ್ತಕಗಳನ್ನು ಖರೀದಿಸಿ, ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಆತ್ಮವಿಶ್ವಾಸ, ಪರಿಶ್ರಮ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ಯಾವುದೇ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಪರಿಣಾಮಕಾರಿ ಓದುವಿಕೆಯ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/watch?v=3PzmKRaJHmk

2. ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಯಾವುದು ಉತ್ತಮ? ಸಿಎಸ್‌ಇ ಅಥವಾ ಐಎಸ್‌ಇ?
ಹೆಸರು, ಊರು ತಿಳಿಸಿಲ್ಲ.
ಸಿಎಸ್‌ಇ (ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್) ಮತ್ತು ಐಎಸ್‌ಇ (ಇನ್‌ಫರ್ಮೇಷನ್ ಸೈನ್ಸ್ ಎಂಜಿನಿಯರಿಂಗ್) ಎರಡೂ ವಿಭಾಗಗಳಲ್ಲಿ ಸಾಫ್ಟ್‌ವೇರ್‌ ಕಲಿಕೆಯಾಗುತ್ತದೆ. ಹಾಗಾಗಿ, ಎರಡೂ ವಿಭಾಗಗಳು ಬೇಡಿಕೆಯಲ್ಲಿವೆ. ಸಿಎಸ್‌ಇ ವಿಭಾಗದಲ್ಲಿ ಸಾಫ್ಟ್‌ವೇರ್‌
ಜೊತೆಗೆ ಹಾರ್ಡ್‌ವೇರ್‌ ಕಲಿಕೆಯೂ ಆಗುವುದರಿಂದ, ಸಿಎಸ್‌ಇ ವಿಭಾಗಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.

3. ನಾನು ಪ್ರಥಮ ವರ್ಷದ ಬಿಸಿಎ ಕಲಿಯುತ್ತಿದ್ದು, ಕೆಲವೊಂದು ಸರ್ಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೇನೆ. ಹಾಗಾಗಿ, ಕಾಲೇಜಿನ ಕಲಿಕೆಯ ಜೊತೆ,ಸ್ಪರ್ಧಾತ್ಮಕಪರೀಕ್ಷೆಗಳಿಗೆ ಯಾವ ರೀತಿತಯಾರಿನಡೆಸಬೇಕೆಂದು ಮಾಹಿತಿ ನೀಡಿ, ಸರ್
ಅರುಣ್, ಮಂಗಳೂರು.
ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ನಿಮ್ಮನ್ನು ಯಾವುದೇಸ್ಪರ್ಧಾತ್ಮಕಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.
 ಪರೀಕ್ಷೆಯ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಗಮನಿಸಿ.
 ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
 ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
 ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಟಿಗಳೊಡನೆ ಅಭ್ಯಾಸ ಮಾಡಿ.
 ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
 ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
 ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
 ತಪ್ಪುದಾರಿಗೆಳೆಯಬಹುದಾದ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
 ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿಂದಿರುವುದರಿಂದ ಒತ್ತಡ ಕಡಿಮೆಯಾಗಿ, ಫಲಿತಾಂಶ ಉತ್ತಮವಾಗುತ್ತದೆ.
 ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿಉತ್ತರಿಸಿ.

 ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ, ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.
ಈಗ ಅನೇಕಸ್ಪರ್ಧಾತ್ಮಕಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದು. ಕಾರ್ಯತಂತ್ರಗಳನ್ನು ರೂಪಿಸುವ
ಮಾರ್ಗದರ್ಶನಕ್ಕಾಗಿ ಗಮನಿಸಿ:http://www.vpradeepkumar.com/how-to-succeed-in-
entrance-exams/

4. ಬಿಇ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಮುಗಿಸಿದ್ದೇನೆ. ಬಿ.ಇಡಿ ಮಾಡಿ ಶಿಕ್ಷಕ ವೃತ್ತಿಯನ್ನು ಅರಸಬೇಕೆಂದಿದ್ದೇನೆ. ಇದಕ್ಕೆ, ಮತ್ತೆ ಬಿಎ ಮಾಡುವ ಅಗತ್ಯವಿದೆಯೇ?
ಊರು, ಹೆಸರು ತಿಳಿಸಿಲ್ಲ.
ಎಂಜಿನಿಯರಿಂಗ್ ಪದವೀಧರರು ಬಿ.ಇಡಿ ಮಾಡುವ ಅಗತ್ಯವಿಲ್ಲದೆ ಕರ್ನಾಟಕ ಸರ್ಕಾರದ ಟಿಇಟಿ ಪರೀಕ್ಷೆಯ ಮುಖಾಂತರ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಭೋಧಿಸುವ ವ್ಯವಸ್ಥೆ ಈಗ ಜಾರಿಯಾಗುತ್ತಿದೆ. ಅನ್ಯ ವಿಷಯಗಳನ್ನು ಭೋಧಿಸುವ ಆಸಕ್ತಿಯಿದ್ದರೆ, ಆ ವಿಷಯಗಳನ್ನು ಪದವಿಯಲ್ಲಿ ಓದಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://www.schooleducation.kar.nic.in/index.html

5. ನಾನು ಪ್ರಸ್ತುತ ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಸಿವಿಲ್ ಸರ್ವಿಸ್ ಮಾಡುವ ಗುರಿಯಿದೆ. ಆದರೆ ನಾನು ಪ್ರೈಮರಿ ಶಾಲೆಯಿಂದ ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹಾಗಾಗಿ ಇಂಗ್ಲಿಷ್ ಭಾಷೆ ಕಷ್ಟವೆನಿಸುತ್ತದೆ. ಅಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಗಳಿಸುತ್ತಿರುವುದು ಕಡಿಮೆ ಅಂತಿದ್ದಾರೆ. ದಯವಿಟ್ಟು ಪರಿಹಾರ ಸೂಚಿಸಿ.
ಹೆಸರು, ಊರು ತಿಳಿಸಿಲ್ಲ.

ಕನ್ನಡ ಮಾಧ್ಯಮದಲ್ಲಿ ಕಲಿತ ಕಲಾ ವಿಭಾಗದ ಪದವೀಧರರು ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆದು ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ಯುಪಿಎಸ್‌ಸಿ ಆಯೋಜಿಸುವ ನಾಗರಿಕ ಸೇವಾ ಪರೀಕ್ಷೆಗೆ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರತಯಾರಿಮಾಡಬಹುದು. ಯೂಟ್ಯೂಬಿನಲ್ಲಿತಯಾರಿಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ
ಆಶಾಭಾವನೆ ಅತ್ಯಗತ್ಯ. ಇಂಗ್ಲಿಷ್ ಕಲಿಕೆ ಕುರಿತ ಮಾಹಿತಿಗಾಗಿ ಗಮನಿಸಿ:
https://www.prajavani.net/education-career/education/how-to-learn-english-v-pradeep-
kumar-column-896542.html

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT