ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

BEMLನಲ್ಲಿ ಐಟಿಐ, ಡಿಪ್ಲೋಮಾ ಪಾಸಾದವರಿಗೆ 100 ಹುದ್ದೆಗಳು

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ
Published 26 ಆಗಸ್ಟ್ 2024, 11:10 IST
Last Updated 26 ಆಗಸ್ಟ್ 2024, 11:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಯಲ್ಲಿ ಐಟಿಐ ಟ್ರೈನಿ ಹಾಗೂ ಆಫೀಸ್ ಅಸಿಸ್ಟಂಟ್ ಟ್ರೈನಿ ಎಂಬ ಒಟ್ಟು 100 ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ. ಅರ್ಹ ಪುರುಷ, ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಗರಿಷ್ಠ 32. ಒಬಿಸಿ 35, ಎಸ್‌ಸಿ, ಎಸ್‌ಟಿ 37. ಅರ್ಜಿ ಶುಲ್ಕ ₹ 200

ಐಟಿಐ ಟ್ರೈನಿ ಫಿಟ್ಟರ್ 7

ಐಟಿಐ ಟ್ರೈನಿ ಟರ್ನರ್ 11

ಐಟಿಐ ಟ್ರೈನಿ ಮೆಕಾನಿಸ್ಟ್ 11

ಐಟಿಐ ಟ್ರೈನಿ ಎಲೆಕ್ಟ್ರಿಷಿಯನ್ 8

ಐಟಿಐ ಟ್ರೈನಿ ವೆಲ್ಡರ್ 18

ಆಫೀಸ್ ಅಸಿಸ್ಟಂಟ್ ಟ್ರೈನಿ 46

ಆಫೀಸ್ ಅಸಿಸ್ಟಂಟ್ ಟ್ರೈನಿ ಹುದ್ದೆಗಳಿಗೆ ಡಿಪ್ಲೋಮಾ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಉಳಿದ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಪಾಸಾಗಿರಬೇಕು.

ಬಿಇಎಂಎಲ್‌ನ ಭಾರತದಾದ್ಯಂತ ಇರುವ ಯಾವುದೇ ಕಚೇರಿಯಲ್ಲಿ ಈ ಕೆಲಸ ಮಾಡಲು ಸಿದ್ದರಿರಬೇಕು.

ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ, ಮೆಡಿಕಲ್, ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ನಡೆಯಲಿದೆ.

ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ತರಬೇತಿ ಅವಧಿ ಹಾಗೂ ಮತ್ತೊಂದು ವರ್ಷ ಒಪ್ಪಂದ ಅವಧಿಯನ್ನು ಯಶಸ್ವಿಯಾಗಿ ಪೂರೈಸಬೇಕು. ಈ ಅವಧಿಯಲ್ಲಿ ಮಾಸಿಕ ₹15,500 ವೇತನ ಇರಲಿದೆ. ಎರಡು ವರ್ಷಗಳ ಬಳಿಕ ನಿಯಮಾನುಸಾರ ಬಿಇಎಂಎಲ್ ಉದ್ಯೋಗಿಗಳಾಗುತ್ತಾರೆ.

ಅಭ್ಯರ್ಥಿಗಳು https://kps14.exmegov.com/#/index ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT