ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jobs: ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳು

ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದು ಕರಾವಳಿ ಕಾವಲು ಪೊಲೀಸ್ ಪಡೆಯ ಉಡುಪಿ ಘಟಕದಲ್ಲಿನ 5 ವರ್ಷದ ಮಟ್ಟಿಗೆ ಚಾಲ್ತಿಯಲ್ಲಿರುವ ಗುತ್ತಿಗೆ ಆಧಾರಿತ ಕೆಲಸವಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ಅಧೀಕ್ಷಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಸಮಿತಿಯ ಸದಸ್ಯರ ಸಮಕ್ಷಮದಲ್ಲಿ ಈ ನೇಮಕಾತಿ ನಡೆಯಲಿದೆ.

ಬೋಟ್ ಕ್ಯಾಪ್ಟನ್ 6 ಹುದ್ದೆಗಳು (ಪಿಎಸ್‌ಐ ಶ್ರೇಣಿ), ಸಹಾಯಕ ಬೋಟ್ ಕ್ಯಾಪ್ಟನ್ 7 ಹುದ್ದೆಗಳು (ಎಎಸ್‌ಐ ಶ್ರೇಣಿ), ಮೋಟಾರ್ ಲಾಂಚ್ ಮೆಕಾನಿಕ್ 2 ಹುದ್ದೆಗಳು (ಎಎಸ್‌ಐ ಶ್ರೇಣಿ) ಮತ್ತು ಇಂಜಿನ್ ಡ್ರೈವರ್ 10 ಹುದ್ದೆಗಳಿಗೆ (ಹೆಡ್‌ ಕಾನ್‌ಸ್ಟೇಬಲ್ ಶ್ರೇಣಿ) ಅರ್ಜಿ ಆಹ್ವಾನಿಸಲಾಗಿದೆ.

ನೇವಿ, ಕೋಸ್ಟ್‌ಗಾರ್ಡ್ ಮತ್ತು ಬಿಎಸ್‌ಎಫ್ ವಾಟರ್ ವಿಂಗ್‌ನಿಂದ ನಿವೃತ್ತಗೊಂಡವರು ಈ ಹುದ್ದೆಗಳಿಗೆ ಮಾರ್ಚ್ 8ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಕರಾವಳಿ ಕಾವಲು ಪೊಲೀಸ್ ಪಡೆಯ ಉಡುಪಿ ಕಚೇರಿಯಲ್ಲಿ ಕೆಲಸದ ವೇಳೆ ಪಡೆಯಬಹುದು. ವಿದ್ಯಾರ್ಹತೆ, ವೇತನ ಶ್ರೇಣಿ ಇತರೆ ಮಾಹಿತಿಗಳಿಗೆ ಆಸಕ್ತರು ksp.gov.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT