ಸೋಮವಾರ, ಆಗಸ್ಟ್ 15, 2022
26 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ–23

306. ಯಾವ ಜಲಪಾತವನ್ನು ‘ಕರ್ನಾಟಕದ ನಯಾಗರ’ ಎಂದು ಕರೆಯುತ್ತಾರೆ?

ಎ) ಗಗನಚುಕ್ಕಿ-ಭರಚುಕ್ಕಿ

ಬಿ) ಜೋಗ ಜಲಪಾತ

ಸಿ) ಅಬ್ಬೆ ಜಲಪಾತ

ಡಿ) ಗೋಕಾಕ್ ಜಲಪಾತ

307. ‘ಆನಂದ ಕಂದ’ ಇದು ಯಾರ ಕಾವ್ಯ ನಾಮ?

ಎ) ಲಕ್ಷ್ಮೀನಾರಾಯಣಸ್ವಾಮಿ

ಬಿ) ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಿ) ಬೆಟಗೇರಿ ಕೃಷ್ಣಶರ್ಮ

ಡಿ) ವಿನಾಯಕ ಕೃಷ್ಣ ಗೋಕಾಕ

308. ‘ಅಂಶಿ’ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ?

ಎ) ಉತ್ತರಕನ್ನಡ ಬಿ) ಮಂಡ್ಯ

ಸಿ) ಶಿವಮೊಗ್ಗ ಡಿ) ಬೆಳಗಾವಿ

309. ‘ನ್ಯಾಟೋ’ ಪ್ರಧಾನ ಕಚೇರಿ ಎಲ್ಲಿದೆ?

ಎ) ಬ್ಯೂನಸ್ ಐರಿಸ್ ಬಿ) ಬೋಗೋಟಾ

ಸಿ) ನ್ಯೂಯಾರ್ಕ್ ಡಿ) ಬ್ರುಸೆಲ್ಸ್

310. ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯೋಮಿತಿ

ಎ) 35 ವರ್ಷಗಳು ಬಿ) 40 ವರ್ಷಗಳು

ಸಿ) 60 ವರ್ಷಗಳು ಡಿ) 50 ವರ್ಷಗಳು

311. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಯಾರು?

ಎ) ಜಕಣಾಚಾರಿ

ಬಿ) ಚಾವುಂಡರಾಯ

ಸಿ) ಡಕಣಾಚಾರಿ

ಡಿ) ಅರಿಷ್ಟನೇಮಿ

312. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಭಾರತ _____ ಸ್ಥಾನವನ್ನು ಹೊಂದಿದೆ.

ಎ) ಮೊದಲನೆಯ ಬಿ) ಎರಡನೆಯ

ಸಿ) ಮೂರನೆಯ ಡಿ) ಐದನೆಯ

313. ಇವುಗಳಲ್ಲಿ ಯಾವುದು ಕಡಲ ಕೊರೆತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲದು?

ಎ) ಸಮುದ್ರ ತೀರದಲ್ಲಿ ಕಟ್ಟಡಗಳನ್ನು ನಿರ್ಮಿಸುವುದು

ಬಿ) ಸಮುದ್ರ ತೀರದಲ್ಲಿ ಮರಳು ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು

ಸಿ) ಸಮುದ್ರ ತೀರದಲ್ಲಿ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸುವುದು

ಡಿ) ಕರಾವಳಿಯಲ್ಲಿ ಮಾನವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು

314. ಕನ್ನಡ ನಾಡಿನ ಪ್ರಥಮ ಶಾಸನ (ಹಲ್ಮಿಡಿ ಶಾಸನ) ಈ ವಂಶದ ಕೊಡುಗೆಯಾಗಿದೆ

ಎ) ಕದಂಬರು

ಬಿ) ಬಾದಾಮಿ ಚಾಲುಕ್ಯರು

ಸಿ) ಹೊಯ್ಸಳರು

ಡಿ) ರಾಷ್ಟ್ರಕೂಟರು

315. ಬುದ್ಧನು ತನ್ನ ಮೊದಲನೆಯ ಬೋಧನೆಯನ್ನು _______ ದಲ್ಲಿ ಮಾಡಿದನು.

ಎ) ಸಾರನಾಥ ಬಿ) ತಕ್ಷಶಿಲಾ

ಸಿ) ಪಾಟಲೀಪುತ್ರ ಡಿ) ಗಯಾ

316. ಕನ್ನಡದ ಮೊದಲನೆಯ ‘ಟಾಕಿ’ ಚಿತ್ರ ಯಾವುದು?

ಎ) ಸತಿ ಸುಲೋಚನಾ ಬಿ) ಮೃಚ್ಛಕಟಿಕಾ

ಸಿ) ಉತ್ಸವ ಡಿ) ಅಮರಶಿಲ್ಪಿ ಜಕಣಾಚಾರಿ

317. ಕರ್ನಾಟಕ ರಾಜ್ಯ ಮೀಸಲು ಪಡೆ ಮುಖ್ಯಸ್ಥರು ಈ ಹುದ್ದೆಯವರು ಆಗಿರುತ್ತಾರೆ

ಎ) ಡಿ.ಜಿ.ಪಿ. ಬಿ) ಎ.ಡಿ.ಜಿ.ಪಿ.

ಸಿ) ಕಮಾಂಡೆಂಟ್ ಡಿ) ಡಿ.ಐ.ಜಿ.ಪಿ

318. 1 ರಿಂದ 500 ರ ಒಳಗಿನ ಪೂರ್ಣ ವರ್ಗಗಳ ಸಂಖ್ಯೆ ಎಷ್ಟು?

ಎ) 1 ಬಿ) 16
ಸಿ) 22 ಡಿ) 26

319.ಆಹಾರದೊಳಗಿನ ಅಯೋಡಿನ್ ಕೊರತೆಯಿಂದಾಗಿ ಮನುಷ್ಯನಿಗೆ ಈ ಕಾಯಿಲೆ ಬರುತ್ತದೆ

ಎ) ಸರಳ ಗಳಗಂಡ

ಬಿ) ರಕ್ತಹೀನತೆ

ಸಿ) ಇರುಳುಗಣ್ಣು

ಡಿ) ಫ್ರೈನೋಡರ್ಮಾ

320. ನೀರಿನ ಸಾಂದ್ರತೆ ಗರಿಷ್ಠವಾಗಿ ಇರುವುದು ಯಾವ ಉಷ್ಣಾಂಶದಲ್ಲಿ?

ಎ) 400 C ಬಿ) 40 C
ಸಿ) 00 C ಡಿ) 1000 C

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು