ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು: ಮಾದರಿ ಪ್ರಶ್ನೋತ್ತರಗಳು

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ, ಕೆಎಸ್‌ಐಎಸ್‌ಎಫ್, ಸಹ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
Last Updated 27 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೆಪಿಎಸ್‌ಸಿ ‘ಗ್ರೂಪ್-ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ‘ಕರ್ನಾಟಕ ದತ್ತಾಂಶ ಕೇಂದ್ರ ನೀತಿ- 2022’ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1) 2025ರ ಹೊತ್ತಿಗೆ ಡೇಟಾ ಸೆಂಟರ್ ಉದ್ಯಮದಲ್ಲಿ ₹ 10,000 ಕೋಟಿ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸುವುದು.

2) 2025ರ ವೇಳೆಗೆ ನಮ್ಮ ರಾಜ್ಯದಲ್ಲಿ 250 ಮೆಗಾವ್ಯಾಟ್‌ ಸಾಮರ್ಥ್ಯದ ದತ್ತಾಂಶ ಕೇಂದ್ರಗಳ ಉದ್ಯಮ ಸ್ಥಾಪಿಸುವ ಗುರಿ ಹೊಂದಲಾಗಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ‌

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ.

2) ಭಾರತ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರದ ಪ್ರಕಾರ ರಾಷ್ಟ್ರೀಯ ಸುರಕ್ಷಾ ಗುಣಮಟ್ಟವನ್ನು ಕಾಯ್ದುಕೊಂಡು ಅತ್ಯುತ್ತಮ ಆಹಾರವನ್ನು ಪ್ರಸಾದ ರೂಪದಲ್ಲಿ ವಿತರಿಸುತ್ತಿದೆ ಎಂಬ ಹೆಗ್ಗಳಿಕೆಗೆ ಈ ಕೆಳಗಿನ ಯಾವ ದೇವಸ್ಥಾನ ಪಾತ್ರವಾಗಿದೆ?

ಎ) ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲ

ಬಿ) ಕೊಲ್ಲೂರು ಮೂಕಾಂಬಿಕಾ ದೇಗುಲ

ಸಿ) ನಂಜನಗೂಡು ನಂಜುಂಡೇಶ್ವರ ದೇವಾಲಯ

ಡಿ) ಮುರುಡೇಶ್ವರ ದೇವಸ್ಥಾನ

ಉತ್ತರ: ಬಿ.

3) ನಮ್ಮ ದೇಶದ ಮೊದಲ ಇಂಗಾಲ ತಟಸ್ಥ ಪಂಚಾಯ್ತಿ ಎಂದು ಯಾವ ಪಂಚಾಯ್ತಿಯನ್ನು ಪ್ರಧಾನಿಗಳು ಘೋಷಿಸಿದ್ದಾರೆ?

ಎ) ಜಮ್ಮು ಮತ್ತು ಕಾಶ್ಮೀರದ ಪಲ್ಲಿ ಗ್ರಾಮ ಪಂಚಾಯ್ತಿ

ಬಿ) ಬಿಹಾರದ ಫುಲ್‌ಗಾಂವ್ ಗ್ರಾಮ ಪಂಚಾಯ್ತಿ

ಸಿ) ಉತ್ತರ ಪ್ರದೇಶದ ಕುಶಿನಗರ ಗ್ರಾಮ ಪಂಚಾಯ್ತಿ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ.

4) ನಮ್ಮ ದೇಶದ ನೀತಿ ಆಯೋಗದ ಉಪಾಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

ಎ) ರಾಜೀವ್ ಕುಮಾರ

ಬಿ) ರಘುನಾಥ ರಘುರಾಮನ್

ಸಿ) ಸುಮನ್ ಕೆ ಬೆರಿ

ಡಿ) ಜಯಕುಮಾರ ಜಯರಾಮ್

ಉತ್ತರ: ಸಿ.

5) ಸೋಲೊಮನ್ ದ್ವೀಪದಲ್ಲಿ ಚೀನಾ ತನ್ನ ರಕ್ಷಣಾ ಮಿಲಿಟರಿ ಚಟುವಟಿಕೆ ಆರಂಭಿಸಲು ಆ ದ್ವೀಪರಾಷ್ಟ್ರದೊಡನೆ ಸಹಿ ಹಾಕಿರುವುದಾಗಿ ಘೋಷಿಸಿದೆ. ಹಾಗಾದರೆ ಇದಕ್ಕೆ ಹತ್ತಿರದಲ್ಲಿ ಈ ಕೆಳಗಿನ ಯಾವ ರಾಷ್ಟ್ರವಿದೆ?

ಎ) ಅಮೆರಿಕ

ಬಿ) ಜಪಾನ್

ಸಿ) ಭಾರತ

ಡಿ) ಆಸ್ಟ್ರೇಲಿಯಾ

ಉತ್ತರ: ಡಿ.

6) ಜಗತ್ತಿನಲ್ಲಿ ಭಾರತವು ವಾರ್ಷಿಕವಾಗಿ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದೆ. ಹಾಗಾದರೆ ಭಾರತ ಎಷ್ಟು ಮೌಲ್ಯದ ಹಾಲನ್ನು ಉತ್ಪಾದಿಸುತ್ತಿದೆ?

ಎ) ₹ 8.5 ಲಕ್ಷ ಕೋಟಿ

ಬಿ) ₹ 10 ಲಕ್ಷ ಕೋಟಿ

ಸಿ) ₹ 4.5 ಲಕ್ಷ ಕೋಟಿ

ಡಿ) ₹ 6.5 ಲಕ್ಷ ಕೋಟಿ

ಉತ್ತರ: ಎ.

7) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1) ಗೋವಾ ರಾಜ್ಯದಲ್ಲಿ ಸಮಾನ ನಾಗರಿಕ ಕಾನೂನುಗಳು ಜಾರಿಯಲ್ಲಿವೆ. ಉತ್ತರಾಖಂಡ ರಾಜ್ಯವು ಸಮಾನ ನಾಗರಿಕ ಕಾನೂನು ಜಾರಿಗೆ ತರಲು ತಜ್ಞರ ಸಮಿತಿಯನ್ನು ರಚಿಸಿದೆ.

2) ಭಾರತದ ಸಂವಿಧಾನದ 44ನೇ ವಿಧಿಯು ಸಮಾನ ನಾಗರಿಕ ಕಾನೂನು ಜಾರಿಗೆ ತರಲು ಸರ್ಕಾರಗಳಿಗೆ ನಿರ್ದೇಶನ ನೀಡುತ್ತದೆ. ಸರಳಾ ಮುದ್ಗಲ್ ಪ್ರಕರಣದಲ್ಲಿಯೂ(1995ರಲ್ಲಿ) ಸುಪ್ರೀಂ ಕೋರ್ಟ್ ಕೂಡಾ ಸಮಾನ ನಾಗರಿಕ ಕಾನೂನು ತರಲು ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ.

8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಜಗತ್ತಿನಲ್ಲಿ ಶೇ 17ರಷ್ಟು ಪೊಟ್ಯಾಶ್ ರಸಗೊಬ್ಬರ ವ್ಯಾಪಾರದ ಪಾಲನ್ನು ರಷ್ಯಾ ಹೊಂದಿದೆ

2) ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತ ಕೃಷಿಯ ಮೇಲೆ ಬೀಳುತ್ತದೆ

ಉತ್ತರ ಸಂಕೇತಗಳು

ಎ) 1 ಮತ್ತು 2 ಹೇಳಿಕೆಗಳು ಸರಿಯಾಗಿವೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿವೆ

ಸಿ) 1 ಮತ್ತು 2ನೇ ಹೇಳಿಕೆಗಳು ಪರಸ್ಪರ ಸಂಬಂಧ ಹೊಂದಿಲ್ಲ

ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಎ.

ಫೂಲ್ಸ್ ಗೋಲ್ಡ್

ನಿಸರ್ಗದಲ್ಲಿ ದೊರೆಯುವ ಐರನ್ ಡೈ ಸಲ್ಫೈಡ್ (Iron Disulphide) ಎಂಬ ಖನಿಜಕ್ಕೆ ಫೂಲ್ಸ್ ಗೋಲ್ಡ್ (Fool’s Gold) ಎಂದು ಹೇಳುತ್ತಾರೆ. ಈ ಖನಿಜಕ್ಕೆ ಐರನ್ ಪೈರೈಟ್ಸ್ (Iron Pyrites) ಎಂಬ ಹೆಸರೂ ಸಹ ಇದೆ. ಈ ಖನಿಜದ ಬಣ್ಣವು ಹಿತ್ತಾಳೆಯನ್ನು ಹೋಲುವ ಹಳದಿಯಾಗಿದೆ. ಇದು ತುಂಬ ಕಾಂತಿಯುತವಾಗಿರುತ್ತದೆ. ಆದ್ದರಿಂದ ಅದನ್ನು ಚಿನ್ನವೆಂದು ಭ್ರಮಿಸುವುದುಂಟು. ಈ ಕಾರಣದಿಂದ ಈ ಖನಿಜಕ್ಕೆ ‘ಫೂಲ್ಸ್ ಗೋಲ್ಡ್’ ಎಂಬ ಅಡ್ಡ ಹೆಸರಿದೆ. ಇದು ಚಿನ್ನಕ್ಕಿಂತ ಹೆಚ್ಚು ಕಠಿಣವಾಗಿಯೂ, ಗಡುಸಾಗಿಯೂ ಇರುತ್ತದೆ.

ಇದರ ಖನಿಜವನ್ನು ಉಕ್ಕಿನಿಂದ ಹೊಡೆದರೆ ಅದು ಬೆಂಕಿಯ ಕಿಡಿಕಾರುತ್ತದೆ. ಆದ್ದರಿಂದ ಅದಕ್ಕೆ ಪೈರೈಟ್ಸ್ ಎಂಬ ಹೆಸರು ಬಂದಿದೆ. ಇತಿಹಾಸ ಪೂರ್ವ ಕಾಲದ ಹೂಳು ಭೂಮಿಯಲ್ಲಿ ಪೈರೈಟ್ಸ್‌ನ ಗುರುತುಗಳು ಪತ್ತೆಯಾಗಿವೆ. ಆದ್ದರಿಂದ ಪ್ರಾಚೀನ ಮಾನವರು ಇದನ್ನು ಬೆಂಕಿ ಹೊತ್ತಿಸುವುದಕ್ಕಾಗಿ ಬಳಸುತ್ತಿದ್ದರೆಂದು ಕಾಣುತ್ತದೆ.

ಶುದ್ಧ ಪೈರೈಟ್ಸ್ (Pure pyroite)

ಶೇ 46.67 ರಷ್ಟು ಕಬ್ಬಿಣ ಮತ್ತು ಶೇ 53.33 ರಷ್ಟು ಗಂಧಕವನ್ನು ಒಳಗೊಂಡಿರುತ್ತದೆ. ಇಟಲಿ, ನಾರ್ವೆ, ಜಪಾನ್, ಕೆನಡಾ, ಪೋರ್ಚುಗಲ್ ಮತ್ತು ಜೆಕೊಸ್ಲೊವಾಕಿಯಾ ಈ ದೇಶಗಳಲ್ಲಿ ಈ ಖನಿಜದ ನಿಕ್ಷೇಪಗಳು ಅಧಿಕ ಪ್ರಮಾಣದಲ್ಲಿ ಲಭ್ಯವಿದೆ.

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT