ಸೋಮವಾರ, ಸೆಪ್ಟೆಂಬರ್ 20, 2021
24 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

491. ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?

ಎ) ಕೊಯ್ನಾ

ಬಿ) ಹೇಮಾವತಿ

ಸಿ) ಕಬಿನಿ

ಡಿ) ಅರ್ಕಾವತಿ

 

492. ದೇವಿ ಪ್ರಸಾದ್ ಶೆಟ್ಟಿ ಇವರು ಪ್ರಸಿದ್ಧ

ಎ) ಹೃದ್ರೋಗತಜ್ಞ

ಬಿ) ನೇತ್ರಶಾಸ್ತ್ರಜ್ಞ

ಸಿ) ಮನೋವೈದ್ಯ

ಡಿ) ಎಲುವು-ಕೀಲು ತಜ್ಞ

 

493. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ?

ಎ) ಅಹ್ಮದಾಬಾದ್

ಬಿ) ರಾಜಕೋಟ್

ಸಿ) ಲಕ್ನೋ

ಡಿ) ವಾರಾಣಸಿ

 

494. ಟೋಕಿಯೋದಲ್ಲಿ ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದ ಭಾರ ಎತ್ತುವಿಕೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಕ್ರೀಡಾಪಟು ಯಾರು?

ಎ) ಮೀರಾಬಾಯಿ ಚಾನು

ಬಿ) ಪಿ.ವಿ.ಸಿಂಧು

ಸಿ) ಮೇರಿ ಕೋಮ್

ಡಿ) ಸಾನಿಯಾ ಮಿರ್ಜಾ

 

495. ಈಶಾನ್ಯ ಮಾನ್ಸೂನ್‌ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?

ಎ) ಜೂನ್-ಆಗಸ್ಟ್

ಬಿ) ಅಕ್ಟೋಬರ್-ಡಿಸೆಂಬರ್

ಸಿ) ಜನವರಿ-ಮಾರ್ಚ್

ಡಿ) ಯಾವುದೂ ಅಲ್ಲ

 

496. “ಗೋಲ್ ಗುಂಬಜ್” ಯಾರ ಸಮಾಧಿ?

ಎ) ಮಹಮ್ಮದ್ ಆದಿಲ್ ಷಾ

ಬಿ) ಯೂಸುಫ್ ಆದಿಲ್ ಷಾ

ಸಿ) ಮಮ್ತಾಜ್‌ ಬೇಗಂ

ಡಿ) ಸಿಕಂದರ್ ಆದಿಲ್ ಷಾ

 

497. ಸಿಂಡಿಕೇಟ್ ಬ್ಯಾಂಕ್‌ ಸ್ಥಾಪನೆಯಾದ ವರ್ಷ

ಎ) 1921

ಬಿ) 1922

ಸಿ) 1924

ಸಿ) 1925

 

498. ಪ್ರಶಸ್ತಿ ವಿಜೇತ ಚಿತ್ರಗಳಾದ “ತಬರನ ಕಥೆ”, “ದ್ವೀಪ” ಹಾಗೂ “ಗುಲಾಬಿ ಟಾಕೀಸ್” ಚಿತ್ರಗಳ ನಿರ್ದೇಶಕ ಯಾರು

ಎ) ನಾಗತಿಹಳ್ಳಿ ಚಂದ್ರಶೇಖರ್

ಬಿ) ಗಿರೀಶ್ ಕಾಸರವಳ್ಳಿ

ಸಿ) ಸುನಿಲ್ ಕುಮಾರ್ ದೇಸಾಯಿ

ಡಿ) ಪುಟ್ಟಣ್ಣ ಕಣಗಾಲ್

 

499. ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು?

ಎ) 26.385 ಕಿ.ಮೀ

ಬಿ) 42.195 ಕಿ.ಮೀ

ಸಿ) 15.600 ಕಿ.ಮೀ

ಡಿ) 30 ಕಿ.ಮೀ

 

500. ಮೂಲಭೂತ ಕರ್ತವ್ಯಗಳನ್ನು ಭಾರತ ಸಂವಿಧಾನಕ್ಕೆ ಸೇರ್ಪಡೆ ಮಾಡಿದ ವರ್ಷ

ಎ) 1976

ಬಿ) 1978

ಸಿ) 1980

ಡಿ) 1991

 

501. ಉಪವಿಭಾಗದ ಪೊಲೀಸ್ ಅಧಿಕಾರಿ ಯಾರಾಗಿರುತ್ತಾರೆ?

ಎ) ಪಿ.ಎಸ್.ಐ

ಬಿ) ಸಿ.ಪಿ.ಐ

ಸಿ) ಡಿ.ಎಸ್.ಪಿ

ಡಿ) ಎ.ಎಸ್.ಐ

 

502. ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕ ರಾಜ್ಯ ಪೊಲೀಸ್‌ ಘಟಕ ಅಲ್ಲ?

ಎ) ಸಿ.ಐ.ಡಿ

ಬಿ) ಎ.ಸಿ.ಬಿ

ಸಿ) ರಾಜ್ಯ ಗುಪ್ತಚರ ವಾರ್ತೆ

ಡಿ) ಸಿ.ಬಿ.ಐ

 

503. ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ವಾರದ ಕವಾಯತವನ್ನು ಯಾವ ದಿನದಂದು ನಡೆಸಲಾಗುತ್ತದೆ?

ಎ) ಮಂಗಳವಾರ

ಬಿ) ಭಾನುವಾರ

ಸಿ) ಶುಕ್ರವಾರ

ಡಿ) ಗುರುವಾರ

 

504. ಈಚೆಗೆ ವಿಶ್ವ ಪಾರಂಪರಿಕ ತಾಣಗಳಿಗೆ ಸೇರ್ಪಡೆಯಾದ ಪ್ರಾಚೀನ ಭಾರತದ ನಗರ ಯಾವುದು?

ಎ) ಧೋಲವೀರಾ

ಬಿ) ಹರಪ್ಪ

ಸಿ) ಮೆಹಂಜೋದಾರ

ಡಿ) ಕಾಲಿಂಗ್‌ಬಂಗನ್

 

505. ಚೋಳರ ರಾಜಧಾನಿ ಯಾವುದು?

ಎ) ವಂಜಿ

ಬಿ) ಉರೈಯೂರು

ಸಿ) ಕಂಚಿ

ಡಿ) ಮಧುರೈ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು