ಗುರುವಾರ , ಸೆಪ್ಟೆಂಬರ್ 23, 2021
20 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಭಾಗ -56

756) ರಾಷ್ಟ್ರೀಯ ಕಂಪನಿ ನ್ಯಾಯಾಧೀಕರಣ ಟ್ರಿಬ್ಯೂನಲ್ ಈ ವಿಮಾನ ಸಂಸ್ಥೆ ಪುನರಚನೆಗೆ ಅನುಮತಿ ನೀಡಿದೆ?

ಎ) ಸ್ಪೈಸ್ ಜೆಟ್  ಬಿ) ಇಂಡಿಯನ್ ಏರ್‌ಲೈನ್ಸ್

ಸಿ) ಜೆಟ್ ಏರ್‌ವೇಸ್  ಡಿ) ಇಂಡಿಗೊ

757) ಹೊಸ ಜಾತಿಯ ಚಿಮ್ಮುವ ಕಪ್ಪೆ ತಟ್ಟಕಾಡು ಪಕ್ಷಿಧಾಮದ ಸಮೀಪದಲ್ಲಿ ಕಂಡು ಬಂದಿದೆ. ಇದು ಯಾವ ರಾಜ್ಯದಲ್ಲಿದೆ?

ಎ) ಕರ್ನಾಟಕ  ಬಿ) ತಮಿಳುನಾಡು

ಸಿ) ಕೇರಳ  ಡಿ) ತೆಲಂಗಾಣ

758) ಭಾರತ-ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಸಂಬಂಧಿಸಿ ತಪ್ಪಾದ ಹೇಳಿಕೆ ಗುರುತಿಸಿ.

ಎ) ಭಾರತ-ಅಮೆರಿಕ ಹಿಂದೂ ಮಹಾಸಾಗರದಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿವೆ.

ಬಿ) ಇಂಡೊಫೆಸಿಪಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಆರಂಭಿಸಲಾಗಿದೆ.

ಸಿ) ಯು.ಎನ್.ಎನ್. ರೊನಾಲ್ಡ್‌  ರೆಂಗನ್  ಹಡಗು ಪಾಲ್ಗೊಂಡಿದೆ.

ಡಿ) ಐಎನ್ಎಸ್ ವಿಕ್ರಮಾದಿತ್ಯ ನೌಕೆ ಇದರಲ್ಲಿ ಪಾಲ್ಗೊಂಡಿದೆ.

759) ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಶಿಪ್ ಜಯಿಸಿದ ತಂಡ ಯಾವುದು?

ಎ) ಭಾರತ ಬಿ) ನ್ಯೂಜಿಲೆಂಡ್ ಸಿ) ಇಂಗ್ಲೆಂಡ್ ಡಿ) ಆಸ್ಟ್ರೇಲಿಯಾ

760) ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ ಆಸ್ತಿಗಳನ್ನು ಬ್ಯಾಂಕುಗಳಿಗೆ ನೀಡಿದೆ. ಈ ಕೆಳಕಂಡ ಯಾವ ವ್ಯಕ್ತಿಗಳು ಅದರ ಭಾಗವಾಗಿರುವುದಿಲ್ಲ?

ಎ) ನೀರವ್‌ ಮೋದಿ  ಬಿ) ವಿಜಯ್‌ ಮಲ್ಯ

ಸಿ) ಮೆಹೂಲ್‌ ಚೊಕ್ಸಿ  ಡಿ) ಲಲಿತ್‌ ಮೋದಿ

761) ‘ಸೌರವ್ಯೂಹ ಕೇಂದ್ರ’ ವಾದವನ್ನು ಮಂಡಿಸಿದವರು ಯಾರು?

ಎ) ಕೊಪರ್ನಿಕಸ್‌  ಬಿ) ಟಾಲೆಮಿ

ಸಿ) ಕೆಪ್ಲರ್‌  ಡಿ) ಹೊಂಬಾಲ್ಟ್‌

762) ಹೊಂದಿಸಿ ಬರೆಯಿರಿ.

ಗ್ರಹ  ಪರ್ಯಾಯ ಹೆಸರು

ಅ. ಬುಧ 1. ರೋಮನ್ನರ ಯುದ್ಧ ದೇವತೆ

ಆ. ಶುಕ್ರ 2. ರೋಮನ್ನರ ಕೃಷಿ ದೇವತೆ

ಇ. ಮಂಗಳ 3. ರೋಮನ್ನರ ವಾಣಿಜ್ಯ ದೇವತೆ

ಈ. ಶನಿ 4. ರೋಮನ್ನರ ಪ್ರೇಮ ದೇವತೆ

 ಅ ಆ  ಇ ಈ

ಎ) 1 2 3 4

ಬಿ) 1 2 4 3

ಸಿ) 3 4 1 2

ಡಿ) 3 4 2 1

763)  ಭಾರತದ ಈಶಾನ್ಯ ರಾಜ್ಯಗಳು ಯಾವ ಭೂಕಂಪದ ವಲಯದಲ್ಲಿ ಬರುತ್ತವೆ?

ಎ) 2  ಬಿ) 3  ಸಿ) 4  ಡಿ) 5

764) ಪುರಾತನ ಮಡಿಕೆ ಪರ್ವತಕ್ಕೆ (Old Fold Mountain) ಉದಾಹರಣೆ

ಎ) ಹಿಮಾಲಯ  ಬಿ) ಯುರಾಲ್ಸ್‌

ಸಿ) ರಾಕಿ  ಡಿ) ಆಂಡೀಸ್‌

765) ಈ ಕೆಳಗಿನ ಯಾವ ವಲಯಗಳಲ್ಲಿ ಓಜೋನ್‌ ಪದರ ಹರಡಿದೆ?

ಎ) ಪರಿವರ್ತನಾ ಮಂಡಲ ಮತ್ತು ಸಮೋಷ್ಣ ಮಂಡಲ

ಬಿ) ಸಮೋಷ್ಣಮಂಡಲ ಮತ್ತು ಮಧ್ಯಂತರ ಮಂಡಲ

ಸಿ) ಮಧ್ಯಂತರ ಮಂಡಲ ಮತ್ತು ಅಯಾನು ಮಂಡಲ

ಡಿ) ಅಯಾನು ಮಂಡಲ ಮತ್ತು ಬಾಹ್ಯ ಮಂಡಲ

766) ಹೊಂದಿಸಿ ಬರೆಯಿರಿ.

ನಗ್ನೀಕರಣದ ಕರ್ತೃ          ಭೂಸ್ವರೂಪ

ಅ. ನದಿ 1. ಯುವಾಲಾ

ಆ. ಹಿಮನದಿ 2. ಡೆಲ್ಟಾ

ಇ. ಗಾಳಿ 3. ಸರ್ಕ್‌

ಈ. ಅಂತರ್ಜಲ  4. ಬಾರ್ ಚ್‌ನ್ಸ್‌

 ಅ ಆ ಇ ಈ

ಎ) 2 3 4 1

ಬಿ) 2 3 1 4

ಸಿ) 3 4 1 2

ಡಿ) 3 4 2 1

767) ಬಾರೋಮೀಟರ್‌

ಎ) ತೇವಾಂಶ ಅಳೆಯುವ ಮಾಪಕ

ಬಿ) ಸಾಗರ ಪ್ರವಾಹಗಳ ವೇಗವನ್ನು ಅಳೆಯುವ ಮಾಪಕ

ಸಿ) ಗಾಳಿಯ ಒತ್ತಡವನ್ನು ಅಳೆಯುವ ಮಾಪಕ

ಡಿ) ಮಳೆಯ ಪ್ರಮಾಣವನ್ನು ಅಳೆಯುವ ಮಾಪಕ

768) ಈ ಕೆಳಗಿನ ಯಾವ ವಿಧದ ಮೋಡಗಳಿಂದ ಗುಡುಗು ಮಿಂಚಿನಿಂದ ಕೂಡಿದ ಹೆಚ್ಚಿನ ಮಳೆ ಆಗುತ್ತದೆ?

ಎ) ರಾಶಿ ವೃಷ್ಟಿ ಮೋಡಗಳು

ಬಿ) ವೃಷ್ಟಿ ಪದರ ಮೋಡಗಳು

ಸಿ) ಹಿಕರಣ ಮೋಡಗಳು

ಡಿ) ಹಿಮರಾಶಿ ಮೋಡಗಳು

769) ದ್ರಾಕ್ಷಿ, ಸಿಟ್ರಸ್‌ ಜಾತಿಯ ಸಸ್ಯವರ್ಗ ಕೆಳಗಿನ ಯಾವ ವಾಯುಗುಣದಲ್ಲಿ ಕಂಡುಬರುತ್ತವೆ?

ಎ) ಉಷ್ಣವಲಯದ ಮಾನ್ಸೂನ್‌ ವಾಯುಗುಣ

ಬಿ) ಮೆಡಿಟರೇನಿಯನ್‌ ವಾಯುಗುಣ

ಸಿ) ಉಷ್ಣವಲಯದ ಮಳೆಕಾಡು ವಾಯುಗುಣ

ಡಿ) ತಂಡ್ರಾ ವಾಯುಗುಣ

770) ಗಲ್ಫ್‌ಸ್ಟ್ರೀಮ್‌ ಉಷ್ಣೋದಕ ಪ್ರವಾಹವು ಯಾವ ಸಾಗರದಲ್ಲಿ ಕಂಡುಬರುತ್ತದೆ?

ಎ) ಪೆಸಿಫಿಕ್‌  ಬಿ) ಅಟ್ಲಾಂಟಿಕ್‌

ಸಿ) ಹಿಂದೂ ಮಹಾಸಾಗರ  ಡಿ) ಆರ್ಕ್ಟಿಕ್

 

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ
ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು