ಸೋಮವಾರ, ಜೂನ್ 27, 2022
21 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ–3

26. ಕರ್ನಾಟಕದಲ್ಲಿ ಇತ್ತೀಚೆಗೆ ರಚನೆಯಾದ ಹೊಸ ಜಿಲ್ಲೆ ಯಾವುದು?

ಎ) ಯಾದಗಿರಿ

ಬಿ) ವಿಜಯನಗರ

ಸಿ) ಚಿಕ್ಕಬಳ್ಳಾಪುರ

ಡಿ) ಚಿಕ್ಕೋಡಿ

27. ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ

1) ಸೂಪಾ ಅ) ಮ್ಯಾಂಗನೀಸ್

2) ಕಪ್ಪತಗುಡ್ಡ ಆ) ಬಾಕ್ಸೈಟ್

3) ಕುಂಸಿ ಇ) ಚಿನ್ನದ ಅದಿರು

4) ಖಾನಾಪುರ ಈ) ಕಬ್ಬಿಣದ ಅದಿರು

ಎ) 1-ಅ, 2-ಆ, 3-ಇ, 4-ಈ

ಬಿ) 1-ಆ, 2-ಅ, 3-ಈ, 4-ಇ

ಸಿ) 1-ಈ, 2-ಇ, 3-ಆ, 4-ಅ

ಡಿ) 1-ಅ, 2-ಇ, 3-ಈ, 4-ಆ

28. ಕಪ್ಪುಮಣ್ಣು ಯಾವ ಶಿಲೆಯ ಶಿಥಿಲೀಕರಣದಿಂದ ನಿರ್ಮಾಣಗೊಂಡಿದೆ?

ಎ) ಗ್ರಾನೈಟ್

ಬಿ) ಕಲ್ಲಿದ್ದಲು

ಸಿ) ಬಸಾಲ್ಟ್

ಡಿ) ಗ್ರಾಫೈಟ್

29. ಈಗಿನ ISRO ಅಧ್ಯಕ್ಷರು ಯಾರು?

ಎ) ಕೆ.ರಾಧಾಕೃಷ್ಣನ್

ಬಿ) ಎ.ಎಸ್.ಕಿರಣ್ ಕುಮಾರ್

ಸಿ) ಕೆ. ಶಿವನ್

ಡಿ) ಕಸ್ತೂರಿರಂಗನ್

30. 2021ರ ವಿಶ್ವ ಸ್ನೂಕರ್‌ ಚಾಂಪಿಯನ್ ಯಾರು?

ಎ) ಮಾರ್ಕ್ ಸೆಲ್ಬಿ

ಬಿ) ಪ್ರಕಾಶ್ ನಂಜಪ್ಪ

ಸಿ) ಯೋಗೇಶ್ವರ್‌ ದತ್‌

ಡಿ) ಪಂಕಜ್ ಅಡ್ವಾಣಿ

31. ಶ್ವೇತ ಕ್ರಾಂತಿಯ ಹರಿಕಾರ ಯಾರು?

ಎ) ಎಂ.ಎಸ್.ಸ್ವಾಮಿನಾಥನ್

ಬಿ) ಪಾಂಡುರಂಗ ಹೆಗಡೆ

ಸಿ) ಸುಂದರ್‌ಲಾಲ್‌ ಬಹುಗುಣ

ಡಿ) ವರ್ಗೀಸ್ ಕುರಿಯನ್

32. 11, 24, 39, 416, 525, ……, 749 ಈ ಸರಣಿಯಲ್ಲಿ ಬಿಟ್ಟು ಹೋಗಿರುವ ಸಂಖ್ಯೆ ಯಾವುದು?

ಎ) 425  ಬಿ) 518

ಸಿ) 636  ಡಿ) 618

33. ಅಧಿಕ ವರ್ಷದಲ್ಲಿ ಎಷ್ಟು ದಿನ ಇರುತ್ತವೆ?

ಎ) 365  ಬಿ) 366

ಸಿ) 367  ಡಿ) 360

34. ಇವುಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಯಾವುದು?

ಎ) ಕೃಷ್ಣಾ

ಬಿ) ಕಾವೇರಿ

ಸಿ) ಮಲಪ್ರಭಾ

ಡಿ) ಶರಾವತಿ

35. ಸಮುದ್ರದಲ್ಲಿ ಭಾರತದ ಸಾರ್ವಭೌಮತೆ ಎಷ್ಟು ದೂರದವರೆಗೆ ವ್ಯಾಪಿಸಿದೆ?

ಎ) 6 ನಾಟಿಕಲ್ ಮೈಲು

ಬಿ) 15 ನಾಟಿಕಲ್ ಮೈಲು

ಸಿ) 12 ನಾಟಿಕಲ್ ಮೈಲು

ಡಿ) 10 ನಾಟಿಕಲ್ ಮೈಲು

36. ಕರ್ನಾಟಕ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ಎಷ್ಟು?

ಎ) 224 ಬಿ) 140

ಸಿ) 75 ಡಿ) 125

37. ಕರ್ನಾಟಕ ರಾಜ್ಯದಲ್ಲೇ ಅತೀ ಎತ್ತರದ ಶಿಖರ ಯಾವುದು?

ಎ) ಕುದುರೆಮುಖ

ಬಿ) ರುದ್ರಗಿರಿ

ಸಿ) ಮುಳ್ಳಯ್ಯನಗಿರಿ

ಡಿ) ಪುಷ್ಪಗಿರಿ

38. ಗೊಡಚಿನ ಮಲ್ಕಿ ಜಲಪಾತ ಯಾವ ನದಿಗೆ ಸಂಬಂಧಿಸಿದ್ದು?

ಎ) ಹಿರಣ್ಯಕೇಶಿ

ಬಿ) ಮಲಪ್ರಭಾ

ಸಿ) ಘಟಪ್ರಭಾ

ಡಿ) ಮಾರ್ಕಂಡೇಯ

39. ಓಬವ್ವ ಚಿತ್ರದುರ್ಗ ಕೋಟೆಯನ್ನು ಹೈದರ್ ಆಲಿ ಸೈನ್ಯದಿಂದ ರಕ್ಷಿಸಿದ ಕಾಲಕ್ಕೆ ಅಲ್ಲಿಯ ಪಾಳೇಗಾರ ಯಾರಾಗಿದ್ದರು?

ಎ) ರಾಜಾ ಎಚ್ಚಮ್ಮ ನಾಯಕ

ಬಿ) ರಾಜಾ ಶಿವಪ್ಪ ನಾಯಕ

ಸಿ) ರಾಜಾ ವೀರ ಮದಕರಿ ನಾಯಕ

ಡಿ) ಸಂಗೊಳ್ಳಿ ರಾಯಣ್ಣ

40. ಈ ಕೆಳಗಿನವುಗಳಲ್ಲಿ ಓಝೋನ್ ನಾಶಕ್ಕೆ ಪ್ರಮುಖ ಕಾರಣ ಯಾವುದು?

ಎ) ಮರ್ಕ್ಯುರಿ

ಬಿ) ಕಾರ್ಬನ್

ಸಿ) ಸೀಸ

ಡಿ) ಸಿ.ಎಫ್‌.ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು