ಸೋಮವಾರ, ಆಗಸ್ಟ್ 8, 2022
21 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 7

81. ದಾಂಡೇಲಿಯಲ್ಲಿರುವ ಕಾಗದ ಕಾರ್ಖಾನೆಯ ಹೆಸರೇನು?

ಎ) ದಿ ಈಸ್ಟ್ ಕೋಸ್ಟ್ ಪೇಪರ್ ಮಿಲ್ಸ್‌ 

ಬಿ) ದಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್‌  

ಸಿ) ದಿ ಸೌತ್ ಕೋಸ್ಟ್ ಪೇಪರ್ ಮಿಲ್ಸ್‌  

ಡಿ) ದಿ ನಾರ್ಥ್‌ ಕೋರ್ಸ್ ಪೇಪರ್ ಮಿಲ್ಸ್‌   

82. ‘ಆಪರೇಷನ್ ಫ್ಲಡ್’ ಕಾರ್ಯಾಚರಣೆ ಯಾವುದಕ್ಕೆ ಸಂಬಂಧಿಸಿದೆ?

ಎ) ನೆರೆ ಹಾವಳಿ ನಿಯಂತ್ರಣ

ಬಿ) ಸಮುದ್ರ ಪ್ರವಾಹ ನಿಯಂತ್ರಣ

ಸಿ) ಹೈನುಗಾರಿಕೆ ಅಭಿವೃದ್ಧಿ

ಡಿ) ಕೆರೆ ನಿರ್ಮಾಣ

83.ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದ ಸ್ಥಳ ಯಾವುದು?

ಎ) ಮಂಗಳೂರು

ಬಿ) ಬಳ್ಳಾರಿ

ಸಿ) ಭದ್ರಾವತಿ

ಡಿ) ಶಿವಮೊಗ್ಗ

84. ಮೈಸೂರು ರಾಜ್ಯ ‘ಕರ್ನಾಟಕ’ ಎಂದು ಹೆಸರು ಪಡೆದಿದ್ದು ಯಾವಾಗ?

ಎ) ನವೆಂಬರ್‌ 1, 1952

ಬಿ) ನವೆಂಬರ್‌ 1, 1956

ಸಿ) ನವೆಂಬರ್‌ 1, 1973

ಡಿ) ನವೆಂಬರ್‌ 1, 1976

85. ‘ಐ.ಎನ್‌.ಎಸ್‌ ಸೀ–ಬರ್ಡ್‌’ ಇದರ ಇನ್ನೊಂದು ಹೆಸರು ಹಾಗೂ ಇದು ಇರುವ ಸ್ಥಳ ಯಾವುದು?

ಎ) ಕದಂಬ ನೌಕಾನೆಲೆ, ಕಾರವಾರ

ಬಿ) ನೃಪತುಂಗ ನೌಕಾನೆಲೆ, ಕಾರವಾರ

ಸಿ) ಪ್ರಾಜೆಕ್ಟ್‌ ಥಂಡರ್‌ಬೋಲ್ಟ್, ಗೋವಾ

ಡಿ) ಪ್ರಾಜೆಕ್ಟ್‌ ಥಂಡರ್‌ಬೋಲ್ಟ್, ಉಡುಪಿ

86. ‘ಬೀಚಿ’ ಅವರ ಪೂರ್ಣ ಹೆಸರು ಏನು?

ಎ) ಗಂಗಾವತಿ ಪ್ರಾಣೇಶ್

ಬಿ) ರಾಯಸಂ ಭೀಮಸೇನ್ ರಾವ್

ಸಿ) ಟಿ.ಪಿ.ಕೈಲಾಸಂ

ಡಿ) ಗೋಪಾಲಕೃಷ್ಣ ಅಡಿಗ

87. ಮೊಘಲರ ಆಳ್ವಿಕೆಯಲ್ಲಿ ಹಿಂದೂಗಳ ಮೇಲೆ ವಿಧಿಸುತ್ತಿದ್ದ ಧಾರ್ಮಿಕ ತೆರಿಗೆಗೆ ಏನೆಂದು ಕರೆಯುತ್ತಿದ್ದರು?

ಎ) ಖರಜ್

ಬಿ) ಉಶ್ರ್

ಸಿ) ಜಕಾತ್

ಡಿ) ಜಜಿಯಾ

88. ಸರ್‌ ಎಂ. ವಿಶ್ವೇಶ್ವರಯ್ಯ  1913ರಲ್ಲಿ ಸ್ಥಾಪಿಸಿದ್ದ ಬ್ಯಾಂಕ್ ಯಾವುದು?

ಎ) ಮೈಸೂರು ಸಹಕಾರಿ ಬ್ಯಾಂಕ್

ಬಿ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

ಸಿ) ಕಾವೇರಿ ಗ್ರಾಮೀಣ ಬ್ಯಾಂಕ್

ಡಿ) ಕೆನರಾ ಬ್ಯಾಂಕ್

89. ಪ್ರಾಣಿಗಳ ಯಾವ ಅಂಗಾಂಶದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ?

ಎ) ಏರಿಯೋಲಾರ್‌  ಅಂಗಾಂಶ

ಬಿ) ಮೃದ್ವಸ್ಥಿ ಅಂಗಾಂಶ

ಸಿ) ಅಡಿಪೋಸ್ ಅಂಗಾಂಶ

ಡಿ) ರೆಟಿಕ್ಯುಲಾರ್‌ ಅಂಗಾಂಶ

90. ಕೆಳಗಿನವುಗಳಲ್ಲಿ ಯಾವುದನ್ನು ‘ಮೂಳೆ ಮುರಿ ಜ್ವರ’ ಎಂದೂ ಕರೆಯಲಾಗುತ್ತದೆ?

ಎ) ಚಿಕುನ್ ಗುನ್ಯ

ಬಿ) ಡೆಂಗಿ ಜ್ವರ

ಸಿ) ಮೇಲಿನ ಎರಡನ್ನೂ

ಡಿ) ಇದ್ಯಾವುದೂ ಅಲ್ಲ

91.  ಈ ಕೆಳಗಿನವುಗಳಲ್ಲಿ  ನವೀಕರಿಸಬಹುದಾದ ಶಕ್ತಿಯ ಆಕರವನ್ನು ಗುರುತಿಸಿ.

ಎ) ಸೌರ ಶಕ್ತಿ

ಬಿ) ಪೆಟ್ರೋಲ್

ಸಿ) ಎಲ್‌.ಪಿ.ಜಿ

ಡಿ) ದೈಹಿಕ ಶಕ್ತಿ

92. ಜೀವ ಉಗಮವಾಗುವ ಹಂತದಲ್ಲಿ ಭೂ ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲ ಇರಲಿಲ್ಲ?

ಎ) ಅಮೋನಿಯಾ

ಬಿ) ಹೈಡ್ರೋಜನ್

ಸಿ) ಆಕ್ಸಿಜನ್

ಡಿ) ಮಿಥೇನ್

93. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್‌ ಪ್ರತಿಪಾದಿಸದೇ ಇದ್ದ ಸಿದ್ಧಾಂತ ಯಾವುದು?

ಎ) ಉಳಿವಿಗಾಗಿ ಹೋರಾಟ

ಬಿ) ನಿಸರ್ಗದ ಆಯ್ಕೆ

ಸಿ) ಅರ್ಹ ಜೀವಿಯ ಉಳಿವು

ಡಿ) ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ

94. ಸಿಂಧೂ ನಾಗರಿಕತೆಯ ವಿಶಿಷ್ಟ ಲಕ್ಷಣ ಯಾವುದು?

ಎ) ಯಂತ್ರಗಳ ಬಳಕೆ

ಬಿ) ನಗರ ಯೋಜನೆ

ಸಿ) ಯುದ್ಧ ಕಲೆ

ಡಿ) ಇದ್ಯಾವುದೂ ಅಲ್ಲ

95. ಜೈನ ಧರ್ಮದ 23 ನೇ ತೀರ್ಥಂಕರ ಯಾರು?

ಎ) ಮಹಾವೀರ

ಬಿ) ಪಾರ್ಶ್ವನಾಥ

ಸಿ) ವೃಷಭನಾಥ

ಡಿ) ಮೇಲ್ಕಂಡ ಯಾರೂ ಅಲ್ಲ

ಭಾಗ–6 ರ ಉತ್ತರ: 66. ಸಿ, 67. ಡಿ, 68. ಎ, 69. ಸಿ, 70. ಡಿ, 71. ಡಿ, 72. ಬಿ, 73. ಬಿ, 74. ಸಿ,
75. ಸಿ, 76. ಎ, 77. ಎ, 78. ಡಿ, 79. ಬಿ, 80. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು