ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಧಾರವಾಡ: ಟ್ರೈನಿ ಗ್ರಂಥಪಾಲಕ, ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Published 14 ಆಗಸ್ಟ್ 2023, 10:18 IST
Last Updated 14 ಆಗಸ್ಟ್ 2023, 10:18 IST
ಅಕ್ಷರ ಗಾತ್ರ

ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದಲ್ಲಿ ಟ್ರೈನಿ ಗ್ರಂಥಪಾಲಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತಂತೆ ಇತ್ತೀಚೆಗೆ ಅಧಿಸೂಚನೆ ಪ್ರಕಟಿಸಲಾಗಿದ್ದು ಎರಡು ಹುದ್ದೆಗಳಿವೆ. iitdh.ac.in ನಲ್ಲಿ ಹುದ್ದೆಯ ವಿವರಗಳನ್ನು ನೀಡಲಾಗಿದೆ. ಆಗಸ್ಟ್‌ 25 ಅರ್ಜಿ ಸಲ್ಲಿಸಲು ಕೊನೆಯ ದಿನ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸು 27 ವರ್ಷ ಮೀರಿರಬಾರದು. ಮಾಸಿಕ ₹20 ಸಾವಿರ ವೇತನ ಇರುವ ಈ ಹುದ್ದೆಗೆ ಆಯ್ಕೆಯಾಗುವವರು ಧಾರವಾಡದಲ್ಲಿರುವ ಐಐಟಿ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 

PDF
IITDH_LIB_Adv_Trainee-Recruitment_2023-24-01.pdf
ಓಪನ್ ಮಾಡಿ

ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್‌ ಹುದ್ದೆಗಳಿಗೆ ಐಐಟಿ ಧಾರವಾಡ ಅರ್ಜಿ ಆಹ್ವಾನಿಸಿದೆ. ಆ. 18 ಅರ್ಜಿ ಸಲ್ಲಿಸಲು ಕೊನೆಯ ದಿನ. ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಶೇ 40ರಷ್ಟು ಅಂಕಗಳನ್ನು ಜನರಲ್ ಎಬಿಲಿಟಿ ಹಾಗೂ ತಾಂತ್ರಿಕ ಪ್ರಶ್ನೆಗಳುಳ್ಳ ನಕಾರಾತ್ಮಕ ಅಂಕಗಳ ಎಂಸಿಕ್ಯೂ ಪ್ರಶ್ನೆಗಳಿಂದ ಹಾಗೂ ಶೇ 60ರಷ್ಟು ಅಂಕಗಳು ಲಿಖಿತ ರೂಪದ ಪರೀಕ್ಷೆ ಮೂಲಕ ನೇಮಕಾತಿ.

ಕಿರಿಯ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಆ. 17 ಕೊನೆಯ ದಿನ. ಈ ಹುದ್ದೆಗೂ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ ಎಂದು ಐಐಟಿ ಧಾರವಾಡದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT