ಮೆಟ್ರೊ ನಗರಗಳ ಟ್ರಾಫಿಕ್ ಸಮಸ್ಯೆಗೆ ಬೆಂಗಳೂರಿನ ಏಳು ವರ್ಷದ ಬಾಲಕಿಯೊಬ್ಬಳು ಪರಿಹಾರ ಕಂಡು ಹಿಡಿದಿದ್ದಾಳೆ!

ಆ ಬಾಲಕಿ ಹೆಸರು ಬೃಂದಾ ಜೈನ್.ಈಕೆ ‘ಆಂಬುಲೆನ್ಸ್ ವ್ಹಿಜ್’ ಎಂಬ ಮೊಬೈಲ್ ಆ್ಯಪ್ ಆವಿಷ್ಕರಿಸಿದ್ದಾಳೆ. ಇದು ತುರ್ತು ವಾಹನ ಬರುವ ಮುನ್ನ ಸಂಚಾರ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಇದರಿಂದಾಗಿ ಸಂಚಾರ ಪೊಲೀಸರು ಸಂಚಾರವನ್ನು ಆ ಕ್ಷಣಕ್ಕೆ ಸ್ಥಗಿತಗೊಳಿಸಿ ಆಂಬುಲೆನ್ಸ್‌ಗಳಿಗೆ ಸಕಾಲದಲ್ಲಿ ದಾರಿ ಮಾಡಿಕೊಡಬಹುದಾಗಿದೆ.

ವೈದ್ಯರ ಕುಟುಂಬದ ಕುಡಿಯಾಗಿರುವ ಬೃಂದಾ ಪ್ರತಿದಿನ ಕುಟುಂಬ ಸದಸ್ಯರು ಹಲವಾರು ತುರ್ತು ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸುವುದನ್ನುಕೇಳಿಸಿಕೊಂಡಿದ್ದಳು. ಹೃದಯಾಘಾತ, ಪಾರ್ಶ್ವವಾಯಅಥವಾ ಇನ್ನಾವುದೇ ಅಪಘಾತದ ವೇಳೆ ರೋಗಿಯನ್ನು ಗೋಲ್ಡನ್ ಅವರ್ (ಘಟನೆ ನಡೆದ ಒಂದು ಗಂಟೆಯೊಳಗೆ) ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಆದರೆ, ಮೆಟ್ರೊ ನಗರಗಳಲ್ಲಿ ಸಂಚಾರ ದಟ್ಟಣೆಯಿಂದಾಗಿ ಆಂಬುಲೆನ್ಸ್ ಗೋಲ್ಡನ್ ಅವರ್‌ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವರು ಮಾರ್ಗಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಅರಿತಿದ್ದ ಬೃಂದಾ, ವೈಟ್‍ಹ್ಯಾಟ್ ಜೂನಿಯರ್ ಪ್ಲಾಟ್‍ಫಾರ್ಮ್‍ನಲ್ಲಿ ಕೋಡಿಂಗ್ ಕಲಿತು, ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾಳೆ.

ಆ್ಯಪ್ ಬಳಕೆ ಹೇಗೆ?
ಈ ಆ್ಯಪ್ ಬಳಸಿಕೊಂಡು ಆಂಬುಲೆನ್ಸ್ ಚಾಲಕ ಲೊಕೇಶನ್ ಅಪ್‍ಡೇಟ್ ಮಾಡಬೇಕು ಮತ್ತು ಸಂಚಾರ ನಿಯಂತ್ರಣ ವಿಭಾಗಕ್ಕೆ ಆ ಬಗ್ಗೆ ಮಾಹಿತಿ ನೀಡಬೇಕು. ಈ ಮಾಹಿತಿ ಆಧಾರದಲ್ಲಿ ಸಂಚಾರ ಪೊಲೀಸರು ಆಂಬುಲೆನ್ಸ್‌ಗೆ ಫಾಸ್ಟ್‍ಟ್ರ್ಯಾಕ್ ಕಾರಿಡಾರ್ ಕಲ್ಪಿಸಿಕೊಡುತ್ತಾರೆ. ಅಲ್ಲಿ ಆಂಬುಲೆನ್ಸ್ ಸಂಚರಿಸಲು ಅನುವು ಮಾಡಿಕೊಡುತ್ತಾರೆ. ಇದರಿಂದ ಆಂಬುಲೆನ್ಸ್‌ಗಳು ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಜೀವ ಉಳಿಸಲು ನೆರವಾಗಬಹುದು.

ಸಿಲಿಕಾನ್ ವ್ಯಾಲಿಗೆ ಭೇಟಿ
ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆ್ಯಪ್ ಅಭಿವೃದ್ಧಿಗೆ ಸ್ವತಂತ್ರವಾಗಿ ಕೋಡ್ ಮಾಡುವ ವೈಟ್‍ಹ್ಯಾಟ್ ಜೂನಿಯರ್ ಸ್ಪರ್ಧೆಯಲ್ಲಿ ದೇಶಾದ್ಯಂತ 7000 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಸಿಲಿಕಾನ್ ವ್ಯಾಲಿ ಪ್ರೋಗ್ರಾಂನಲ್ಲಿ ವಿಜೇತರಾದ 12 ಸ್ಪರ್ಧಿಗಳ ಪೈಕಿ ಬೃಂದಾ ಒಬ್ಬಳಾಗಿದ್ದಾಳೆ.

ಈ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದು, ಅಲ್ಲಿ ಖ್ಯಾತನಾಮ ವೆಂಚರ್ ಕ್ಯಾಪಿಟಲಿಸ್ಟ್‌ಗಳ ಎದುರು ಆ್ಯಪ್ ಪ್ರಸ್ತುತಪಡಿಸಲಿದ್ದಾಳೆ. ಚಾಲಕ ರಹಿತ ಕಾರುಗಳ ಬಗ್ಗೆ ಪ್ರಾಡಕ್ಟ್ ಮ್ಯಾನೇಜರ್‌ಗಳಿಂದ ಮಾಹಿತಿ ಪಡೆಯಲಿದ್ದಾಳೆ.

ಬೃಂದಾ ಜೈನ್

ಮಕ್ಕಳ ನವೊದ್ಯಮಕ್ಕೆ ಫೆಲೋಶಿಪ್
ಶಿಕ್ಷಣ ಕ್ಷೇತ್ರದ ನವೋದ್ಯಮವಾಗಿರುವ ವೈಟ್‍ಹ್ಯಾಟ್ ಜೂನಿಯರ್ ಪ್ಲಾಟ್‍ಫಾರ್ಮ್ 6 ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೋಡಿಂಗ್ ಹೇಳಿಕೊಡುತ್ತದೆ. ಎಐ, ರೋಬೊಟಿಕ್ಸ್ ಕೋಡಿಂಗ್, ಮಶಿನ್ ಲರ್ನಿಂಗ್ ಮತ್ತು ಸ್ಪೇಸ್ ಟೆಕ್‍ನಂತಹ ತಂತ್ರಜ್ಞಾನಗಳನ್ನು ಶಾಲೆಗಳಲ್ಲಿ ಕಲಿಸಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ.

ಇದಲ್ಲದೇ, 15 ಮಕ್ಕಳಿಗೆ 15 ಸಾವಿರ ಡಾಲರ್ ಮೊತ್ತದ 15 ಫೆಲೋಶಿಪ್ ಘೋಷಿಸಿದೆ. ಈ ಮೂಲಕ ಮಕ್ಕಳು ತಮ್ಮದೇ ಆದ ನವೋದ್ಯಮ ಆರಂಭಿಸಲು ಇದು ನೆರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.