ಬಿಜಿಎಂ ಫೌಂಡೇಷನ್ 2025– 26ನೇ ಸಾಲಿನ ಪಶು-ಸೇವಾ ವಿದ್ಯಾರ್ಥಿವೇತನ ನೀಡಲು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯ್ಕೆಯಾದವರಿಗೆ ಪಶುಪಾಲನೆ ಮತ್ತು ಪಶುಕಲ್ಯಾಣ ಕ್ಷೇತ್ರದಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ನಿಗದಿತ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ಅರ್ಹತೆ:

ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ದಾಖಲಾಗಿ ಓದುತ್ತಿರುವ ಭಾರತೀಯ ನಾಗರಿಕರಾಗಿರಬೇಕು.

ಪಶುವೈದ್ಯಕೀಯ ವಿಜ್ಞಾನ, ಪಶುಸಂಗೋಪನೆ, ಕೃಷಿ, ಹಾಲು ಉತ್ಪಾದನಾ ವಿಜ್ಞಾನ, ಪಶುಸಂವರ್ಧನೆ ಮತ್ತು ಕೋಳಿ ನಿರ್ವಹಣೆ, ಪ್ಯಾರಾ ವೆಟರಿನರಿ, ಮೇವು ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ವರ್ಷದಲ್ಲಿ ಪೂರ್ಣಕಾಲಿಕ ಪದವಿ, ಸ್ನಾತಕೋತ್ತರ ಕೋರ್ಸ್ (ಸಾಮಾನ್ಯ/ವೃತ್ತಿಪರ) ಅಥವಾ ಡಿಪ್ಲೊಮಾ ಓದುತ್ತಿರುವವರಾಗಿರಬೇಕು. ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳು ಅಥವಾ ಸಮಾನವಾದ ಸಿಜಿಪಿಎ ಪಡೆದಿರಬೇಕು.

ಹೆಣ್ಣುಮಕ್ಕಳು, ಅಂಗವಿಕಲರು, ಏಕಪೋಷಕ ಕುಟುಂಬದ ವಿದ್ಯಾರ್ಥಿಗಳು, ಅನಾಥರು, ಮೊದಲ ತಲೆಮಾರಿನ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವವರು ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ ಶೇ 5ರಷ್ಟು ಸಡಿಲಿಕೆ ಇರುತ್ತದೆ.

ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷವನ್ನು ಮೀರಿರಬಾರದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ನೆರವು

ಡಿಪ್ಲೊಮಾ: ₹ 36,000

ಸಾಮಾನ್ಯ ಪದವಿ/ ಸ್ನಾತಕೋತ್ತರ ಪದವಿ: ₹ 36,000

ವೃತ್ತಿಪರ ಪದವಿ/ ಸ್ನಾತಕೋತ್ತರ ಪದವಿ: ₹ 75,000

ಸೂಚನೆ: ಈ ವಿದ್ಯಾರ್ಥಿವೇತನವು ಬೋಧನಾ ಶುಲ್ಕ, ವಸತಿ, ಆಹಾರ, ಸಾರಿಗೆ, ಪರೀಕ್ಷಾ ಶುಲ್ಕ ಹಾಗೂ ಇತರ ಶೈಕ್ಷಣಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 16-02-2026

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ABCPSS1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.