ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ಗೆ ಅವಕಾಶ ಹೇಗಿದೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Published : 12 ಜೂನ್ 2023, 0:28 IST
Last Updated : 12 ಜೂನ್ 2023, 0:28 IST
ಫಾಲೋ ಮಾಡಿ
Comments
ಪ್ರ

ನನ್ನ ಮಗ ಈ ವರ್ಷ ಬಿಇ (ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಮುಗಿಸುತ್ತಿದ್ದು,  ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಮುಂದೆ ಯಾವ ಕೋರ್ಸ್ ಮಾಡಬಹುದು? ದಯವಿಟ್ಟು
ಮಾರ್ಗದರ್ಶನ ನೀಡಿ.

-ರಾಮ್, ಬೆಂಗಳೂರು

ಉನ್ನತ ಶಿಕ್ಷಣವನ್ನು ನಿರ್ಧರಿಸುವ ಮೊದಲು, ಯಾವ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಪ್ರಮುಖವಾಗಿ, ಎರಡು ಆಯ್ಕೆಗಳಾದ ತಂತ್ರಜ್ಞಾನ ಅಥವಾ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ, ಸ್ವಾಭಾವಿಕ ಅಭಿರುಚಿ, ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ, ಯಾವ ಕ್ಷೇತ್ರ ಸೂಕ್ತ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಬೇಕು. ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿ, ಯಶಸ್ಸಿಗೆ ಬೇಕಾಗುವ ತಜ್ಞತೆ, ತರಬೇತಿ, ವೃತ್ತಿಪರ ಮತ್ತು ಪ್ರಾಥಮಿಕ ಕೌಶಲಗಳು, ವೃತ್ತಿಯ ಮೈಲಿಗಲ್ಲುಗಳು ಈ ಯೋಜನೆಯ ಅಂಶಗಳಾಗಿರುತ್ತವೆ. ಈ ಅಂಶಗಳನ್ನು ಪರಿಗಣಿಸಿ, ವೃತ್ತಿಯೋಜನೆಯನ್ನು ಮಾಡಿ ಅನುಷ್ಠಾನಗೊಳಿಸಬೇಕು. ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ, ಆಸಕ್ತಿದಾಯಕ ಮತ್ತು ಭವಿಷ್ಯದಲ್ಲಿ ಬೇಡಿಕೆಯನ್ನು ನಿರೀಕ್ಷಿಸಬಹುದಾದ ವಿಭಾಗದಲ್ಲಿ ಎಂಟೆಕ್/ಎಂಎಸ್ ಕೋರ್ಸ್‌ಗಳನ್ನು ದೇಶ/ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು. ಮ್ಯಾನೇಜ್‌ಮೆಂಟ್ ಕ್ಷೇತ್ರದ ತಜ್ಞತೆಗಾಗಿ, ಎಂಬಿಎ ಮಾಡುವುದು ಸೂಕ್ತ. ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ

ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

ADVERTISEMENT
ಪ್ರ

ಬಿ.ಇಡಿ ಜೊತೆಗೆ ಎಂಎ (ದೂರ ಶಿಕ್ಷಣ) ಮಾಡಬೇಕೆಂದುಕೊಂಡಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ.

-ಹೆಸರು, ಊರು ತಿಳಿಸಿಲ್ಲ.

ಶಿಕ್ಷಕ ವೃತ್ತಿಯನ್ನು ಅನುಸರಿಸಲು, ಬಿ.ಇಡಿ ಮತ್ತು ಎಂಎ (ದೂರ ಶಿಕ್ಷಣ) ಉತ್ತಮ ಆಯ್ಕೆ. ಬಿಇಡಿ ಕೋರ್ಸನ್ನು ರೆಗ್ಯುಲರ್ ಅಥವಾ ದೂರಶಿಕ್ಷಣದ ಮೂಲಕ ಮಾಡಬಹುದು. ನೀವು ಆಯ್ಕೆ ಮಾಡುವ ಕಾಲೇಜಿನ/ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ, ಶುಲ್ಕಗಳು ಇತ್ಯಾದಿಗಳಿರುತ್ತದೆ.ಬಿ.ಇಡಿ ಜೊತೆಗೆ ಪದವಿ ಕೋರ್ಸಿನಲ್ಲಿ ಓದಿರುವ ಅಥವಾ ಇಷ್ಟವಿರುವ ವಿಷಯದಲ್ಲಿ ಎಂಎ ಮಾಡಿ, ಶಿಕ್ಷಕರ ಅರ್ಹತಾ ಪರೀಕ್ಷೆಯ ನಂತರ, ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಾಪಕರಾಗಬಹುದು. ಮುಂದೆ ಸಾಧ್ಯವಾದರೆ,  ತಜ್ಞತೆಗಾಗಿ ಪಿ.ಎಚ್‌ಡಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ವೃತ್ತಿಯಲ್ಲಿ ಇನ್ನೂ  ಪ್ರಗತಿ  ಗಳಿಸಬಹುದು. ಈ ವೃತ್ತಿಯನ್ನು ಅನುಸರಿಸಲು ವಿಷಯದಲ್ಲಿ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT