ಕೆಪಿಎಸ್‌ಸಿ, ಕೆಎಸ್‌ಐಎಸ್‌ಎಫ್ ಸೇರಿದಂತೆ ಮುಂದೆ ನಡೆಯಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳು ಇಲ್ಲಿವೆ.

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1) ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟವು ‘ಜಲನೀತಿ – 2022’ ಕ್ಕೆ ಒಪ್ಪಿಗೆ ನೀಡಿದೆ. ವಾಣಿಜ್ಯ ಉದ್ದೇಶ ಹಾಗೂ ಕೃಷಿಗೆ ಅಂತರ್ಜಲ ಬಳಕೆಗೆ ಕಡಿವಾಣ ಹಾಕುವುದು, ಕುಡಿಯುವ ನೀರಿನ ಪೂರೈಕೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಜಲನೀತಿಯ ಆಶಯವಾಗಿದೆ.

2) ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾರ್ಯಕ್ಕೆ ಹೊರಗಿನ ನೀರು, ಸ್ಥಳೀಯ ನೀರು, ಮೇಲ್ಮೈ ನೀರು ಮತ್ತು ಅಂತರ್ಜಲ, ಮೇಲ್ಛಾವಣಿ ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆಗೆ ಆದ್ಯತೆ.

3) ನೀರು ಬಳಕೆದಾರರ ಸಂಘ, ನೀರಿನ ಬಳಕೆದಾರರ ಮಹಾಮಂಡಳಿ, ಕೆರೆ ನೀರು ಬಳಕೆದಾರರ ಸಂಘ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಜಲಾನಯನ ಸಮಿತಿಗಳನ್ನು ಬಲಪಡಿಸಲು ನಿಯಮಿತವಾಗಿ ಸಭೆಗಳನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಲನೀತಿ ರಚನೆಯಾಗಿದೆ.

ಉತ್ತರ ಸಂಕೇತಗಳು :

ಎ) 1 ಮತ್ತು 3 ಮಾತ್ರ ಸರಿಯಾಗಿದೆ ಬಿ) 2 ಮತ್ತು 3 ಮಾತ್ರ ಸರಿಯಾಗಿದೆ

ಸಿ) ಎಲ್ಲವೂ ತಪ್ಪಾಗಿವೆ ಡಿ) 1, 2 ಮತ್ತು 3 ಮೂರು ಸರಿಯಾಗಿವೆ

ಉತ್ತರ: ಡಿ

2) ಕರ್ನಾಟಕದ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ- 2022-27ಕ್ಕೆ ಸಚಿವರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1) 2022-27 ಅವಧಿಯಲ್ಲಿ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ.

2) ಭಾರತದ ಶೇ 25ರಷ್ಟು ವಿಮಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮವು ಕರ್ನಾಟಕದಲ್ಲಿ ನೆಲೆಗೊಳ್ಳಲಿದೆ.

3) ರಕ್ಷಣಾ ಸೇವೆಗಳಿಗಾಗಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆಯಲ್ಲಿ ಶೇ 67ರಷ್ಟು ನಮ್ಮ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ.

4) ಏರೋಸ್ಪೇಸ್ ಸಂಬಂಧಿತ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 65 ಇದ್ದು, ಆ ಪ್ರಮಾಣವನ್ನು ಹೆಚ್ಚಿಸಲಾಗುವುದು.

ಉತ್ತರ ಸಂಕೇತಗಳು:

ಎ) 2 ಮಾತ್ರ ಸರಿಯಾಗಿದೆಬಿ) 1 ಮಾತ್ರ ಸರಿಯಾಗಿದೆ

ಸಿ) ಎಲ್ಲವೂ ತಪ್ಪಾಗಿವೆ.ಡಿ) 1 ಮತ್ತು 2 ಎರಡೂ ಸರಿಯಾಗಿದೆ

ಉತ್ತರ: ಡಿ

3) ಸ್ಟಾರ್ಟ್ಅಪ್ ಎಕೋಸಿಸ್ಟಮ್ ನಿರ್ಮಿಸುವಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನದಲ್ಲಿದೆ. ಪ್ರಸ್ತುತ ಭಾರತದಲ್ಲಿ 105 ಯೂನಿಕಾರ್ನ್‌ಗಳಿವೆ. ಸುಮಾರು 75 ಸಾವಿರ ಸ್ಟಾರ್ಟ್ಅಪ್‌ಗಳಿವೆ. ಹಾಗಾದರೆ 2 ಮತ್ತು 3ನೇ ಹಂತದ ನಗರಗಳಲ್ಲಿ ಶೇಕಡ ಎಷ್ಟು ಸ್ಟಾರ್ಟ್ಅಪ್‌ಗಳಿವೆ ?

ಎ) ಶೇ 25ಬಿ) ಶೇ 49 ಸಿ) ಶೇ 76 ಡಿ) ಶೇ 60

ಉತ್ತರ: ಬಿ

4) ಸಂಕ್ಷಿಪ್ತ ಕನ್ನಡ ಭಾಷೆ ಚರಿತ್ರೆ, ಶೃಂಗಾರ ಲಹರಿ, ಕಲಾದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮೊದಲಾದ ಕೃತಿಗಳನ್ನು ಯಾರು ಬರೆದಿದ್ದಾರೆ?

ಎ) ಪ್ರೊ. ಎಂ.ಎಚ್.ಕೃಷ್ಣಯ್ಯ ಬಿ) ಪ್ರೊ.ಎಲ್.ಎಸ್.ಶೇಷಗಿರಿ ರಾವ್

ಸಿ) ಕೃ.ನರಹರಿ ಡಿ) ಜಿ.ರಾಮಕೃಷ್ಣ

ಉತ್ತರ: ಎ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)→ಕಾರ್ನಿಯಾ ಹಾನಿಯಿಂದ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನಿನ 20 ಮಂದಿಗೆ ಸಂಶೋಧಕರು ಹಂದಿಯ ಚರ್ಮದಿಂದ ರೂಪಿಸಿದ ಜೈವಿಕ ಕಾರ್ನಿಯಾ (ಕಣ್ಣಿನ ಅತ್ಯಂತ ಪಾರಾದರ್ಶಕ ಪದರ) ಕಸಿ ಮಾಡಿ ದೃಷ್ಟಿ ಮರಳಿ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

2)ನವದೆಹಲಿಯ ಏಮ್ಸ್ ಸಂಶೋಧಕರು ಸೇರಿದ್ದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕಾರ್ನಿಯಾ ಕಸಿ ಶಸ್ತ್ರ ಚಿಕಿತ್ಸೆಗೆ ಬೇಕಾದ ಜೈವಿಕ ಕಾರ್ನಿಯಾ ಕಸಿ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

ಉತ್ತರ ಸಂಕೇತಗಳು :

ಎ) 1 ಮಾತ್ರ ಸರಿಯಾಗಿದೆಬಿ) 2 ಮಾತ್ರ ಸರಿಯಾಗಿದೆ

ಸಿ) ಎಲ್ಲವೂ ತಪ್ಪಾಗಿವೆಡಿ) 1 ಮತ್ತು 2 ಎರಡೂ ಸರಿಯಾಗಿದೆ

ಉತ್ತರ: ಡಿ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)ನಮ್ಮ ಭೂಮಿಯ ಬಹುಭಾಗ ಆವರಿಸುವ ಸಮುದ್ರವು ಮಾನವನ ಬದುಕಿನ ಪ್ರಮುಖ ಭಾಗವಾಗಿದೆ. ಆದರೆ ಸಮುದ್ರದ ಸುಮಾರು ಶೇ 95ರಷ್ಟು ಭಾಗ ಅನ್ವೇಷಿಸದೇ ಉಳಿದು ಹೋಗಿದೆ.

2) ಬ್ಲೂ ಎಕಾನಾಮಿಗೆ ಉತ್ತೇಜನ ನೀಡುವ ಸಲುವಾಗಿ ಭಾರತ ಸರ್ಕಾರವು ಅಕ್ಟೋಬರ್ 2021ರಲ್ಲಿ ಮೆಗಾ ಓಷನ್ ಮಿಷನ್ ‘ಸಮುದ್ರಯಾನ’ ಆರಂಭಿಸಿದೆ. ಈಗಾಗಲೇ ಇಂತಹದೇ ಮಿಷನ್‌ಗಳನ್ನು ಅಮೆರಿಕ, ರಷ್ಯಾ ಜಪಾನ್, ಫ್ರಾನ್ಸ್ ಮತ್ತು ಚೀನ ದೇಶಗಳು ಸೃಷ್ಟಿಸಿವೆ.

ಉತ್ತರ ಸಂಕೇತಗಳು :

ಎ) 1 ಮಾತ್ರ ಸರಿಯಾಗಿದೆ ಬಿ) 2 ಮಾತ್ರ ಸರಿಯಾಗಿದೆ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.