ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಅಪರಾಧ ಶಾಸ್ತ್ರ ಸದಾ ಸಹಾಯಕ. ಈ ದಿನಗಳಲ್ಲಿ ಇದು, ಅಪರಾಧ ಪತ್ತೆಗೆ ಸಹಾಯ ಮಾಡುವುದಷ್ಟೇ ಅಲ್ಲ ನ್ಯಾಯಾಲಯದ ವಿಚಾರಣೆಯಲ್ಲೂ ಅತಿ ಮಹತ್ವದ ಪಾತ್ರ ವಹಿಸುತ್ತಿದೆ.

ಅಪರಾಧದ ರೀತಿ, ವ್ಯಾಪ್ತಿ, ಕಾರಣ ಮತ್ತು ನಿಯಂತ್ರಣದ ಬಗೆಗಿನ ವೈಜ್ಞಾನಿಕ ಅಧ್ಯಯನ ಇದಾಗಿದೆ. ಜೊತೆಗೆ ವರ್ತನೆಯ ವಿಜ್ಞಾನದ ಒಂದು ಪ್ರಮುಖ ವಿಭಾಗವಾಗಿದೆ. ಸಮಾಜಶಾಸ್ತ್ರಜ್ಞರು, ಸಾಮಾಜಿಕ ಮಾನವಶಾಸ್ತ್ರಜ್ಞರು ಮತ್ತು ಮನಃಶಾಸ್ತ್ರಜ್ಞರ ಸಂಶೋಧನೆಯನ್ನು ಮಾತ್ರವಲ್ಲದೆ ಕಾನೂನು, ವಿಧಿವಿಜ್ಞಾನದ ವಿಷಯಗಳನ್ನು ಸಹ ಇದು ಒಳಗೊಳ್ಳುತ್ತದೆ. ಅಪರಾಧದ ಹೆಚ್ಚಳ ಮತ್ತು ಅದರ ಕಾರಣಗಳನ್ನು ಅಧ್ಯಯನ ಮಾಡಲು ಪರಿಣಾಮಕಾರಿ ವಿಧಾನಗಳನ್ನು ಒಳಗೊಂಡಿದೆ.

ಹಿಂದೆ ಆರೋಪಿಗಳನ್ನು ಕಠಿಣವಾದ ಕ್ರಮಗಳ ಮೂಲಕ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ಆದರೆ ಅಂತಹ ಸ್ಥಿತಿ ಈಗ ಬಹುತೇಕ ಕಡಿಮೆಯಾಗಿದೆ. ಪ್ರಕರಣದ ಸಾಕ್ಷಿ, ಕುರುಹುಗಳನ್ನು ಕಲೆಹಾಕಿ, ವೈಜ್ಞಾನಿಕವಾಗಿ ತನಿಖೆ ನಡೆಸಲು ಅಪರಾಧ ಶಾಸ್ತ್ರವು ಒಂದು ಪ್ರಧಾನ ಅಸ್ತ್ರವಾಗಿದೆ.

ಅಪರಾಧ ಶಾಸ್ತ್ರದ ಪದವಿ ಕೋರ್ಸ್ಗಳನ್ನು ಸಾಮಾನ್ಯವಾಗಿ ಕಲಾ ಮತ್ತು ವಿಜ್ಞಾನದ ವಿದ್ಯಾರ್ಥಿಗಳು ಪಿಯುಸಿ ನಂತರ ಮಾಡಬಹುದು. ಪಿಯುಸಿ ಅಥವಾ 12ನೇ ತರಗತಿಯಲ್ಲಿ ಶೇ 50ರಷ್ಟು ಅಂಕ ಗಳಿಸಿರಬೇಕು. ವಿದ್ಯಾರ್ಥಿಗಳು ಮುಖ್ಯವಾಗಿ, ಅಪರಾಧದ ಕಾರಣ ಮತ್ತು ಸಂಬಂಧ, ಬಾಲಾಪರಾಧ, ಅಪರಾಧ ತಡೆಗಟ್ಟುವಿಕೆ, ಅಪರಾಧದ ಅಂಕಿ–ಅಂಶ, ಅಪರಾಧವನ್ನು ವೃತ್ತಿಯಾಗಿಸಿಕೊಳ್ಳುವುದು ಮತ್ತು ಅದನ್ನು ತ್ಯಜಿಸುವುದು, ಅಪರಾಧಕ್ಕೆ ನ್ಯಾಯ ಒದಗಿಸುವ ಏಜೆನ್ಸಿಗಳು, ದಂಡನೆ ಹಾಗೂ ಅಪರಾಧಕ್ಕೆ ಬಲಿಯಾದವರ ಅಂತರರಾಷ್ಟ್ರೀಯ ಸಮೀಕ್ಷೆಗಳ ಬಗ್ಗೆ ಅಧ್ಯಯನ ಮಾಡಬಹುದಾಗಿದೆ.

ಕೋರ್ಸ್ ಲಭ್ಯವಿರುವುದೆಲ್ಲಿ?

ಸರ್ಕಾರಿ ಕಾಲೇಜುಗಳು ಮತ್ತು ಖಾಸಗಿ ವಿದ್ಯಾಸಂಸ್ಥೆಗಳು ಈ ಕೋರ್ಸ್ ನೀಡುತ್ತವೆ. ಮುಖ್ಯವಾಗಿ, ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಮತ್ತು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಅಪರಾಧ ಶಾಸ್ತ್ರ ಕೋರ್ಸ್ ಇದೆ. ಇದಲ್ಲದೆ ರಾಜ್ಯದ ಹಲವು ಸರ್ಕಾರಿ ಕಾಲೇಜುಗಳಲ್ಲಿಯೂ ಈ ಕೋರ್ಸ್ ಲಭ್ಯವಿದೆ.

ಇನ್ನು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು, ಆಚಾರ್ಯ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಮಂಗಳೂರಿನ ರೋಷನಿ ನಿಲಯ, ಯೆನೆಪೋಯ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿಯೂ ಕೋರ್ಸ್ ಲಭ್ಯವಿದೆ. ಇಷ್ಟೇ ಅಲ್ಲದೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುಜರಾತಿನ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲೂ ಅಪರಾಧ ಶಾಸ್ತ್ರದ ಪದವಿ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಾವಕಾಶ: ವಿದ್ಯಾರ್ಥಿಗಳು ತಮ್ಮ ಕೋರ್ಸ್ ನಂತರ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಗುಪ್ತಚರ ಇಲಾಖೆ, ಯುವಜನ ಇಲಾಖೆ, ಭದ್ರತಾ ಇಲಾಖೆ, ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳು, ನ್ಯಾಯಾಂಗ ಇಲಾಖೆ, ಬಂದಿಖಾನೆ ಇಲಾಖೆ, ಸಾಮಾಜಿಕ ಕಾರ್ಯನಿರತ ಸಂಸ್ಥೆಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೆಲಸಕ್ಕೆ ಪ್ರಯತ್ನಿಸಬಹುದು.

ಇದಲ್ಲದೆ ಅಪರಾಧ ಪರಿಶೀಲನೆ ಮತ್ತು ವಿಶ್ಲೇಷಣಾಧಿಕಾರಿಯಾಗಿ, ಅಪರಾಧ ಕುರಿತ ಮನೋತಜ್ಞರಾಗಿ, ನ್ಯಾಯವಾದಿಯಾಗಿ, ತನಿಖಾಧಿಕಾರಿಯಾಗಿ, ಸಲಹಾ ತಜ್ಞರಾಗಿ ಕಾರ್ಯ ನಿರ್ವಹಿಸಬಹುದು. ಇನ್ನು ಅಪರಾಧಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಪೂರ್ಣಗೊಳಿಸಿದರೆ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ , ಸಂಶೋಧಕರಾಗಿ ಕಾರ್ಯನಿರ್ವಹಿಸಬಹುದು.

ಲೇಖಕ: ವೈಜ್ಞಾನಿಕ ಅಧಿಕಾರಿ, ಜೀವವಿಜ್ಞಾನ ವಿಭಾಗ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.