ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಟೆಕ್‌ಗೆ ಯಾವ ವಿಷಯ ಸೂಕ್ತ?

Published 12 ಮೇ 2024, 23:30 IST
Last Updated 12 ಮೇ 2024, 23:30 IST
ಅಕ್ಷರ ಗಾತ್ರ

ನಾನು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುತ್ತಿದ್ದು, ಮುಂದೆ ಯಾವ ವಿಷಯದಲ್ಲಿ ಎಂಟೆಕ್ ಮಾಡಬಹುದು?
–ಹೆಸರು, ಊರು ತಿಳಿಸಿಲ್ಲ.

ಎಂಟೆಕ್ ಕೋರ್ಸ್ ಅನ್ನು ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ದೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಮೆಷಿನ್ ಲರ್ನಿಂಗ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಯಾವ ವಿಷಯದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯಿದೆ ಎನ್ನುವುದನ್ನು ಗುರುತಿಸಿ, ಮುಂದಿನ ನಿರ್ಧಾರವನ್ನು ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

ಪ್ರ

ನಾನು ಐಟಿಐ (ಮೆಕ್ಯಾನಿಕಲ್ ಮತ್ತು ಎಲೆಕ್ಟಿçಕಲ್) ಮಾಡುತ್ತಿದ್ದು, ಮುಂದೆ ಎಂಜಿನಿಯರಿಂಗ್ ಮಾಡುವ ಗುರಿಯಿದೆ. ಐಟಿಐ ನಂತರ ಏನು ಮಾಡಬೇಕು? ಡಿಪ್ಲೊಮಾ ಮಾಡಿದರೆ ಯಾವ ಶಾಖೆ ಸೂಕ್ತ?
–ಹೆಸರು, ಊರು ತಿಳಿಸಿಲ್ಲ.

ಐಟಿಐ ಆದ ಮೇಲೆ ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ( ಮೆಕ್ಯಾನಿಕಲ್, ಆಟೊಮೊಬೈಲ್, ಎಲೆಕ್ರಿಕ್ಟಲ್‌, ಮೆಕಾಟ್ರಾನಿಕ್ಸ್) ಮಾಡಬಹುದು. ಇದಾದ ನಂತರ, ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಮಾಡಬಹುದು.

ಪ್ರ

ಬಿಎ ಪದವಿ ಕೋರ್ಸ್ ಮಾಡಲು ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ಯಾವುದು ಒಳ್ಳೆಯದು?
–ಹೆಸರು, ಊರು ತಿಳಿಸಿಲ್ಲ.

ಮನೋವಿಜ್ಞಾನದಲ್ಲಿ ಉನ್ನತ ಶಿಕ್ಷಣಕ್ಕೂ ಹಾಗೂ ವೃತ್ತಿಜೀವನವನ್ನು ರೂಪಿಸಿಕೊಳ್ಳಲು  ಹೆಚ್ಚಿನ ಅವಕಾಶಗಳಿವೆ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಈ ವಿಷಯದಲ್ಲಿ ನಿಮಗೆ ಸ್ವಾಭಾವಿಕ ಆಸಕ್ತಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಪ್ರ

ನಾನು ಪಿಯುಸಿ (ಕಲಾ ವಿಭಾಗ) ಮುಗಿಸಿ ಮುಂದೆ ಬಿಎ, ಎಲ್‌ಎಲ್‌ಬಿ ಮಾಡಬೇಕು. ಬೆಂಗಳೂರಿನ ಕಾಲೇಜುಗಳು ಮತ್ತು ಸ್ಕಾಲರ್‌ಶಿಪ್ (ಪರಿಶಿಷ್ಟ ಜಾತಿ) ಬಗ್ಗೆ ಮಾಹಿತಿ ನೀಡಿ.
–ಹೆಸರು, ಊರು ತಿಳಿಸಿಲ್ಲ.

ಬೆಂಗಳೂರಿನಲ್ಲಿ ಕಾನೂನು ಕೋರ್ಸ್ ಮಾಡಲು ಅನೇಕ ಕಾಲೇಜುಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://www.collegesearch.in/integrated-law/colleges-bangalore
ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅರ್ಹತೆ, ಆದಾಯ, ಜಾತಿ ಇತ್ಯಾದಿ ಆಧಾರಗಳ ಮೇಲೆ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಶಿಷ್ಯವೇತನ, ಅನುದಾನ, ಸ್ಕಾಲರ್‌ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಗಮನಿಸಿ:

https://scholarships.gov.in/

https://socialjustice.gov.in/scheme-cat

https://www.buddy4study.com/article/karnataka-scholarships

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT