ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ | ಗ್ಲೋಬಲ್ ಸ್ಕಾಲರ್‌ಶಿಪ್

Published 22 ಏಪ್ರಿಲ್ 2024, 0:55 IST
Last Updated 22 ಏಪ್ರಿಲ್ 2024, 0:55 IST
ಅಕ್ಷರ ಗಾತ್ರ
ಗ್ಲೋಬಲ್ ಸ್ಕಾಲರ್‌ಶಿಪ್

ವಿವರ: ಎಐಎಸ್‌ (AIS) 2024 ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಐಎಸ್‌ (AIS) ಟೆಕ್ನೋಲಾಬ್ಸ್ ಪ್ರೈವೇಟ್ ಲಿಮಿಟೆಡ್ ನೀಡುವ ಅವಕಾಶವಾಗಿದೆ.

ಅರ್ಹತೆ: ಭಾರತದ ಅಥವಾ ಯಾವುದೇ ದೇಶ/ಪ್ರದೇಶದ ನಾಗರಿಕರಿಗೆ ಮುಕ್ತವಾಗಿದೆ. ಅರ್ಜಿದಾರರು ಸೆಕೆಂಡರಿ/ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.ವಿದ್ಯಾರ್ಥಿಗಳು ವಿಶ್ವದಲ್ಲಿ ಮಾನ್ಯತೆ ಪಡೆದ ಕಾಲೇಜು/ಸಂಸ್ಥೆ/ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಕೋರ್ಸ್‌ಗೆ ಅರ್ಜಿ ಸಲ್ಲಿಸಿರಬೇಕು.ಅಭ್ಯರ್ಥಿಗಳು ಆಯಾ ಕೋರ್ಸ್‌ನಲ್ಲಿ ಕನಿಷ್ಠ ಒಂದು ಅವಧಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಕಾಲೇಜು ಡ್ರಾಪ್ಔಟ್ ಆಗಿರಬಾರದು.

ಆರ್ಥಿಕ ಸಹಾಯ: ಎರಡು ವರ್ಷಗಳವರೆಗೆ ವಾರ್ಷಿಕ ಸ್ಕಾಲರ್‌ಶಿಪ್ ಮತ್ತು ಇತರ ಪ್ರಯೋಜನಗಳು, ಅರ್ಜಿ ಸಲ್ಲಿಸಲು ಕೊನೆ ದಿನ: 15-05-2024

ಅರ್ಜಿ ಸಲ್ಲಿಸುವ ವಿಧಾನ: ಇಮೇಲ್ ಮೂಲಕ ಮಾತ್ರ - sunnyc@aistechnolabs.com

ಹೆಚ್ಚಿನ ಮಾಹಿತಿಗೆ: Short Url: www.b4s.in/praja/GSPA6

ಐಇಟಿ (IET) ಇಂಡಿಯಾ ಸ್ಕಾಲರ್‌ಶಿಪ್

ವಿವರ: ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (IET) ಪದವಿಪೂರ್ವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅವರ ಸೃಜನಶೀಲತೆ, ನಾವೀನ್ಯತೆ, ನಾಯಕತ್ವ ಮತ್ತು ಉತ್ತಮ ಗುಣಗಳನ್ನು ತೀಕ್ಷ್ಣಗೊಳಿಸಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಅರ್ಹತೆ: ಎಐಸಿಟಿಇ/ಯುಜಿಸಿ (AICTE/UGC) -ಅನುಮೋದಿತ ಸಂಸ್ಥೆಯಲ್ಲಿ ಪೂರ್ಣ ಸಮಯದ ನಿಯಮಿತ ಪದವಿಪೂರ್ವ ಎಂಜಿನಿಯರಿಂಗ್ ಕಾರ್ಯಕ್ರಮದ (ಯಾವುದೇ ಫೀಲ್ಡ್‌ನಲ್ಲಿ) 1, 2, 3, ಅಥವಾ 4 ನೇ ವರ್ಷದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. 2 ನೇ ವರ್ಷದಲ್ಲಿ ಬಿ.ಟೆಕ್‌.(B.Tech) ಪ್ರೋಗ್ರಾಂಗೆ ಸೇರುವ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ಮುಕ್ತವಾಗಿದೆ. ಅವರು ಒಂದೇ ಪ್ರಯತ್ನದಲ್ಲಿ ಎಲ್ಲಾ ಸಾಮಾನ್ಯ ಕ್ರೆಡಿಟ್ ಕೋರ್ಸ್‌ಗಳನ್ನು ಮುಗಿಸಿರಬೇಕು. ಅರ್ಜಿದಾರರು ಇದುವರೆಗೆ ಮುಗಿಸಿದ ಸೆಮಿಸ್ಟರ್‌ಗಳಲ್ಲಿ 10-ಪಾಯಿಂಟ್ ಸ್ಕೇಲ್‌ನಲ್ಲಿ ಕನಿಷ್ಠ ಶೇ 60ರಷ್ಷ್ಟು ಒಟ್ಟಾರೆಯಾಗಿ ಅಥವಾ ಸಮಾನವಾದ ಕನಿಷ್ಠ ಆರು CGPA ಗಳಿಸಿರಬೇಕು.

ಆರ್ಥಿಕ ಸಹಾಯ: INR 10,00,000 ಮೌಲ್ಯದ ಸ್ಕಾಲರ್‌ಶಿಪ್‌ಗಳು

ಅರ್ಜಿ ಸಲ್ಲಿಸಲು ಕೊನೆ ದಿನ: 31-05-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/IET4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT