ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ನೆಟ್‌/ಸ್ಲೆಟ್‌ ಪರೀಕ್ಷೆ ಪಾಸಾಗುವುದು ಹೇಗೆ?

Published 24 ಡಿಸೆಂಬರ್ 2023, 20:01 IST
Last Updated 24 ಡಿಸೆಂಬರ್ 2023, 20:01 IST
ಅಕ್ಷರ ಗಾತ್ರ

1. ನೆಟ್ ಮತ್ತು ಸ್ಲೆಟ್ ಪರೀಕ್ಷೆಗೆ ತಯಾರಿ ಹೇಗೆ?

–ಹೆಸರು, ಊರು ತಿಳಿಸಿಲ್ಲ.

ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅಥವಾ ಸ್ಲೆಟ್/ಕೆಎಸ್‌ಇಟಿ (ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ) ಪರೀಕ್ಷೆಗಳ ಮೂಲಕ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಾಗುತ್ತದೆ.
ನೆಟ್/ಸ್ಲೆಟ್ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿರುತ್ತದೆ (300 ಅಂಕಗಳು). ಮೊದಲನೇ ಪತ್ರಿಕೆ ಬೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಬೋಧಿಸುವ ವಿಷಯಕ್ಕೆ ಸಂಬಂಧಪಟ್ಟಿರುತ್ತದೆ. ಬಹುತೇಕ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.

ಈ ಸಲಹೆಗಳನ್ನು ಗಮನಿಸಿ:
• ಈ ಪರೀಕ್ಷೆಗಳು ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
• ವಿಷಯಸೂಚಿಯ ಪ್ರಕಾರ ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
• ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
• ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು.  ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
• ಜೊತೆಗೆ ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

2. ನಾನು ದ್ವಿತೀಯ ಎಂಎ (ಅರ್ಥಶಾಸ್ತ್ರ) ಮಾಡುತ್ತಿದ್ದು, ಎನ್‌ಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಆದರೆ, ಓದಿದ್ದು ಸರಿಯಾಗಿ ನೆನಪಿನಲ್ಲಿ ಉಳಿಯುತ್ತಿಲ್ಲ. ನಾನು ಪದವಿ ಕಾಲೇಜಿನ ಪ್ರಾಧ್ಯಾಪಕಳಾಗಬೇಕೆಂಬ ಗುರಿಯನ್ನು ಹೊಂದಿದ್ದೇನೆ. ಓದುವ ಕ್ರಮವನ್ನು ತಿಳಿಸಿ ಕೊಡಿ.

–ಪಾರ್ವತಿ, ಊರು ತಿಳಿಸಿಲ್ಲ.

ಓದಿದ ವಿಷಯ ಮರೆತುಹೋಗುವುದು ಒಂದು ಗಂಭೀರವಾದ ಹಾಗೂ ಸಾಮಾನ್ಯವಾದ ಸಮಸ್ಯೆ. ಪರಿಣಾಮಕಾರಿ ಕಾರ್ಯತಂತ್ರಗಳನ್ನು ಓದುವಿಕೆಯಲ್ಲಿ ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಹಾಗಾಗಿ, ಪರೀಕ್ಷೆಯಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರದೆ, ಸಮಸ್ಯೆಯಾಗುವುದು ಸಾಮಾನ್ಯ. ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ಇದಲ್ಲದೆ ತರಗತಿಗಳಲ್ಲಿ, ಉಪನ್ಯಾಸದ ಟಿಪ್ಪಣಿಯನ್ನು ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆಯಬೇಕು. ಹಾಗೂ, ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.
ದುರದೃಷ್ಟವಶಾತ್, ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಪರಿಣಾಮಕಾರಿ ಓದುವಿಕೆಯ ಕಾರ್ಯತಂತ್ರಗಳು ಮತ್ತು ಟಿಪ್ಪಣಿ ಬರೆಯುವ ಕ್ರಮ ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ, ನಿಮ್ಮ ಓದುವಿಕೆಯಲ್ಲಿ ಈ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡರೆ ನಿಮ್ಮ ಸಮಸ್ಯೆಯ ಪರಿಹಾರವಾಗುತ್ತದೆ: 

https://www.youtube.com/watch?v=3PzmKRaJHmk
https://www.youtube.com/watch?v=Y2IPeZ6lbeM

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT