ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಆರ್‌ಪಿ ಸೇರಿದಂತೆ ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಕೊಡಲಾಗಿದೆ.

1. ಕೇಂದ್ರ ಸರ್ಕಾರ ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಕ್ರಮಗಳನ್ನು ತೆಗೆದುಕೊಂಡಿದೆ?

1. ಗಜ ಯಾತ್ರ ಕಾರ್ಯಕ್ರಮದ ಅಡಿಯಲ್ಲಿ ಅರಿವು ಮೂಡಿಸುವ ಅಭಿಯಾನ.

2. MIKE ಕಾರ್ಯಕ್ರಮದ ಅಡಿಯಲ್ಲಿ ಸಂರಕ್ಷಣೆ ಸಂಬಂಧಿತ ಕ್ರಮಗಳ ಅವಲೋಕನ.

3. ಆನೆ ಸಂರಕ್ಷಿತ ಪ್ರದೇಶಗಳ ಘೋಷಣೆ.
4. ಪ್ರಾಜೆಕ್ಟ್ ಎಲಿಫೆಂಟ್.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ.1, 2 ಮತ್ತು 3 ಸರಿ ಬಿ. 1 ಮತ್ತು 3 ಸರಿ

ಸಿ. 1 ಮತ್ತು 4 ಸರಿ ಡಿ. 1, 2, 3 ಮತ್ತು 4 ಸರಿ

ಉತ್ತರ : ಡಿ

2. ಏಷ್ಯಾದ ಆನೆಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಏಷ್ಯಾದ ಆನೆಗಳ ವರ್ಗದಲ್ಲಿ ಮೂರು ಉಪ ತಳಿಗಳನ್ನು ಕಾಣಬಹುದಾಗಿದೆ.

2. ಮೂರು ಉಪ ತಳಿಗಳಲ್ಲಿ ಭಾರತೀಯ ಆನೆಗಳು, ಶ್ರೀಲಂಕಾದ ಆನೆಗಳು ಮತ್ತು ಸುಮಾತ್ರ ಆನೆಗಳು ಕಂಡುಬರುತ್ತವೆ.

3. ಪ್ರಸ್ತುತ ಭಾರತದಲ್ಲಿ 27,000 ಆನೆಗಳಿವೆ ಎಂದು ಪರಿಗಣಿಸಬಹುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1, 2 ಮತ್ತು 3 ಬಿ. 1 ಮತ್ತು 2

ಸಿ. 2 ಮತ್ತು 3 ಡಿ. 3 ಮಾತ್ರ.
ಉತ್ತರ : ಎ

3. ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ಪ್ರದೇಶಗಳ ಕಾಯ್ದೆ-1957ರ ಅನ್ವಯ ಈ ಕೆಳಗಿರುವ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಕಲ್ಲಿದ್ದಲು ನಿಕ್ಷೇಪಗಳು ಹೊಂದಿರುವ ಸ್ಥಳಗಳನ್ನು ಈ ಕಾಯ್ದೆಯ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ.

2. ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಕಲ್ಲಿದ್ದಲು ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬಹುದು.

3. ವಸತಿ ಕಲ್ಪಿಸಲು ಮತ್ತು ಕಚೇರಿಗಳನ್ನು ನಿರ್ಮಿಸಲು ಈ ಕಾಯ್ದೆಯ ಅಡಿಯಲ್ಲಿ ವಶಪಡಿಸಿಕೊಂಡಿರುವ ಭೂಮಿಯನ್ನು ಬಳಸಿಕೊಳ್ಳಲಾಗುವುದಿಲ್ಲ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1, 2 ಮತ್ತು 3 ಬಿ. 2 ಮತ್ತು 3

ಸಿ. 3 ಮಾತ್ರ ಡಿ. 1 ಮಾತ್ರ.

ಉತ್ತರ : ಎ

4. ಕೆಳಗಿನ ಯಾವ ರಾಷ್ಟ್ರಗಳನ್ನು ಕಲ್ಲಿದ್ದಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಎಂದು ಪರಿಗಣಿಸಬಹುದು?

1. ಚೀನಾ ಮತ್ತು ಅಮೆರಿಕ
2. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಭಾರತ

3. ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ
4. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ.1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. 3 ಮತ್ತು 4.

ಉತ್ತರ : ಸಿ

5. ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನವನ್ನು ಕೇಂದ್ರ ಸಚಿವ ಸಂಪುಟ 2018 ರಲ್ಲಿ ಅನುಮೋದಿಸಿತು.

2. ರಾಷ್ಟ್ರೀಯ ಗ್ರಾಮಸ್ವರಾಜ್ಯ ಅಭಿಯಾನವನ್ನು ಮೊದಲ ಹಂತದಲ್ಲಿ 2018-19 ರಿಂದ 2021-22 ರ ಅವಧಿಗೆ ಅನುಷ್ಠಾನ ಗೊಳಿಸಲಾಯಿತು.

3. ಪ್ರಸ್ತುತ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1, 2 ಮತ್ತು 3 ಬಿ. 1 ಮತ್ತು 3

ಸಿ. 1 ಮತ್ತು 2 ಡಿ. 3 ಮಾತ್ರ.

ಉತ್ತರ : ಎ

6. ರಾಷ್ಟ್ರೀಯ ಗ್ರಾಮಸ್ವರಾಜ್ಯ ಅಭಿಯಾನದ ಅಡಿಯಲ್ಲಿ ಕೆಳಗಿನ ಯಾವುದನ್ನು ಆದ್ಯತೆಗಳು ಎಂದು ಪರಿಗಣಿಸತಕ್ಕದ್ದು?

1. ಆರೋಗ್ಯಕರ ಗ್ರಾಮದ ನಿರ್ಮಾಣ
2. ಮಕ್ಕಳ ಸ್ನೇಹಿ ಗ್ರಾಮದ ನಿರ್ಮಾಣ
3. ಸಾಮಾಜಿಕ ಭದ್ರತೆಯನ್ನು ಕಲ್ಪಿಸುವ ಗ್ರಾಮದ ನಿರ್ಮಾಣ

4. ಉತ್ತಮ ಆಡಳಿತದ ಆಚರಣೆಗಳನ್ನು ಅಳವಡಿಸಿ ಕೊಳ್ಳುವ ಗ್ರಾಮದ ನಿರ್ಮಾಣ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ.1 ಮಾತ್ರ ಬಿ. 2 ಮಾತ್ರ

ಸಿ.1, 2 ಮತ್ತು 3 ಡಿ. 2 ಮತ್ತು 3.

ಉತ್ತರ: ಸಿ

7. ಇತ್ತೀಚಿಗೆ ಭಾರತೀಯ ರಕ್ಷಣಾ ಸಚಿವಾಲಯ ಯಶಸ್ವಿಯಾಗಿ ಪ್ರಯೋಗ ನಡೆಸಿರುವ ಹೆಲಿನಾ ಕ್ಷಿಪಣಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಈ ಕ್ಷಿಪಣಿ ವ್ಯವಸ್ಥೆಯ ಪ್ರಾಥಮಿಕ ಹಂತದ ಪ್ರಯೋಗವನ್ನು ಮೊಟ್ಟಮೊದಲನೆಯದಾಗಿ 2018 ರಲ್ಲಿ ನಡೆಸಲಾಯಿತು.

2 ಈ ಕ್ಷಿಪಣಿ ವ್ಯವಸ್ಥೆಯ ವಿನ್ಯಾಸವನ್ನು ಡಿಆರ್‌ಡಿಒ ನಿರ್ವಹಿಸಿದೆ.

3. ಈ ಕ್ಷಿಪಣಿ ವ್ಯವಸ್ಥೆಯನ್ನು ಹೈದರಾಬಾದ್‌ನ ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1, 2 ಮತ್ತು 3 ಬಿ. 1 ಮತ್ತು 3

ಸಿ. 2 ಮತ್ತು 3 ಡಿ. 3 ಮಾತ್ರ.

⇒ಉತ್ತರ : ಎ

8. ಭಾರತದ ಸಂವಿಧಾನದ ಏಳನೇ ಅನುಸೂಚಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಭಾರತದ ಸಂವಿಧಾನದ ಏಳನೇ ಅನುಸೂಚಿಯಲ್ಲಿ ಮೂರು ಪಟ್ಟಿಗಳಿವೆ.

2. ಕೇಂದ್ರ ಪಟ್ಟಿಯಲ್ಲಿ 100 ವಿಷಯಗಳಿದ್ದು ಸಂಸತ್ತಿಗೆ ಪೂರ್ಣಪ್ರಮಾಣದ ಶಾಸನೀಯ ಅಧಿಕಾರವಿರುತ್ತದೆ.

3. ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಕೆಲ ವಿಶೇಷ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿರುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1, 2 ಮತ್ತು 3 ಬಿ. 2 ಮತ್ತು 3 ಸಿ. 1 ಮತ್ತು 2
ಡಿ. 3 ಮಾತ್ರ.⇒ಉತ್ತರ: ಎ

9. ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ನಡುವಿನ ಭಿನ್ನತೆಗಳನ್ನು ಗುರುತಿಸಿ?

1. ರಾಜ್ಯಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ರಾಜ್ಯಪಾಲರು ಸಂವಿಧಾನಾತ್ಮಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

2. ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರಪತಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

10. ಸಂವಿಧಾನದ ವಿಧಿ 239AA ಗೆ ಅನುಗುಣವಾಗಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಸಂವಿಧಾನದ ವಿಧಿ 239AA ಅನ್ವಯ ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಎಂದು ಮರುನಾಮಕರಣ ಮಾಡಲಾಯಿತು.

2. ಸಂವಿಧಾನದ ವಿಧಿ 239AA ಅನ್ವಯ ರಾಷ್ಟ್ರೀಯ ರಾಜಧಾನಿ ದೆಹಲಿಯ ಆಡಳಿತವನ್ನು ನಡೆಸಲು ಲೆಫ್ಟಿನೆಂಟ್ ಗವರ್ನರ್ ನೇಮಕಾತಿಗೆ ಅವಕಾಶವಿರುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ→ಬಿ. 2 ಮಾತ್ರ ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

ಇನ್ನಷ್ಟು ಪ್ರಶ್ನೋತ್ತರಗಳಿಗೆ https://www.⇒prajavani.net/education-career ಗೆ ಭೇಟಿ ನೀಡಿ.

ಮತ್ತಷ್ಟು ಮಾಹಿತಿಗಾಗಿ

‘ಸಾಮಾನ್ಯ ಜ್ಞಾನ’ ಸೇರಿದಂತೆ ವಿವಿಧ ವಿಷಯಗಳ ಬಹು ಆಯ್ಕೆ ಪ್ರಶ್ನೆಗಳು. ನಾಗರಿಕ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನ ಹಾಗೂ ಇನ್ನಿತರ ಮಾಹಿತಿಯ ಲೇಖನಗಳು, ವಿಡಿಯೊಗಳಿಗಾಗಿ ‘ಡೆಕ್ಕನ್‌ಹೆರಾಲ್ಡ್– ಪ್ರಜಾವಾಣಿ ಮಾಸ್ಟರ್‌ಮೈಂಡ್’ ಇ–ಪೇಪರ್‌ಗೆ ಚಂದಾದಾರರಾಗಿ. ಚಂದಾಕ್ಕಾಗಿ ಪಕ್ಕದಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ

11. ದೆಹಲಿಯ ಸಂವಿಧಾನಾತ್ಮಕ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ನಿರ್ದೇಶನಗಳನ್ನು ಗುರುತಿಸಿ?

1. ದೆಹಲಿಯ ಸಂವಿಧಾನಾತ್ಮಕ ಸ್ಥಾನಮಾನದ ಬಗ್ಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ VS ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಹೊರಡಿಸಿದೆ.

2. ಸುಪ್ರೀಂಕೋರ್ಟ್ ನ ಪ್ರಕಾರ ದೆಹಲಿಯನ್ನು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಅನುಗುಣವಾಗಿ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳಿಗೆ ಅನುಗುಣವಾಗಿ ರಚಿಸಲಾಗಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮತ್ತು 2 ಬಿ. 1 ಮಾತ್ರ
ಸಿ. 2 ಮಾತ್ರ ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಎ

13. ಏಷ್ಯಾದ ಕಾಡು ನಾಯಿಗಳಿಗೆ ಸಂಬಂಧಿಸಿದಂತೆ ಅವುಗಳ ಸಂರಕ್ಷಣಾ ಸ್ಥಾನಮಾನವನ್ನು ಗುರುತಿಸಿ?

1.IUCN ಪಟ್ಟಿಯಲ್ಲಿ ಏಷ್ಯಾದ ಕಾಡು ನಾಯಿಗಳಿಗೆ ಅಪಾಯದ ಅಂಚಿನಲ್ಲಿರುವ ವನ್ಯಜೀವಿಗಳ ಸ್ಥಾನಮಾನವನ್ನು
ಕಲ್ಪಿಸಲಾಗಿದೆ.

2.CITES ಒಪ್ಪಂದದ ಪ್ರಕಾರ ಏಷ್ಯಾದ ಕಾಡು ನಾಯಿಗಳಿಗೆ ಎರಡನೇ ಅನುಸೂಚಿಯಲ್ಲಿ ಸ್ಥಾನಮಾನವನ್ನು ಕಲ್ಪಿಸಲಾಗಿದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.
ಉತ್ತರ : ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.