ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ | ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

1) ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಈ ಕೆಳಗಿನ ಯಾವುದನ್ನೆಲ್ಲಾ ಸೇರಿಸಲಾಗಿದೆ?

1) ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯಗಳು

2) ಮೇಘಾಲಯದ ಜೀವಂತ ಬೇರುಗಳ ತೂಗು ಸೇತುವೆ

3) ಕೊಂಕಣ ಶಿಲಾ ಚಿತ್ರಗಳು(geoglyphs/ petroglyphs)

4) ಕಾಕತೀಯರ ರುದ್ರೇಶ್ವರ ದೇವಾಲಯ

ಉತ್ತರ ಸಂಕೇತಗಳು

ಎ) 1, 2, 3 ಮಾತ್ರ ಸರಿಯಿದೆ

ಬಿ) 2, 3, 4 ಮಾತ್ರ ಸರಿಯಿದೆ

ಸಿ) 1, 3, 4 ಮಾತ್ರ ಸರಿಯಿದೆ

ಡಿ) 1, 2, 4 ಮಾತ್ರ ಸರಿಯಿದೆ

ಉತ್ತರ: ಎ

2) ಉಕ್ಕಿನ ಘಟಕಗಳಲ್ಲಿ ಉತ್ಪಾದಿಸಲಾಗುವ ಉಕ್ಕಿನ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗಿದೆ. ಹಾಗಾದರೆ ಮೊಟ್ಟಮೊದಲು ಯಾವ ರಾಜ್ಯದಲ್ಲಿ ಇಂಥ ರಸ್ತೆ ನಿರ್ಮಾಣವಾಗಿದೆ ?

ಎ) ಆಂಧ್ರಪ್ರದೇಶ ಬಿ) ಗುಜರಾತ್

ಸಿ) ಅಸ್ಸಾಂ ಡಿ) ಕರ್ನಾಟಕ

ಉತ್ತರ: ಬಿ

3) ನೀತಿ ಆಯೋಗ ಸಿದ್ಧಪಡಿಸುವ ರಫ್ತು ಸಿದ್ಧತಾ ಸೂಚ್ಯಂಕ 2021 (EXPORT PREPAREDNESS INDEX 2021) ರಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಹಾಗಾದರೆ, ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

ಎ) ದ್ವಿತೀಯ ಬಿ) ತೃತೀಯ

ಸಿ) 4ನೇ ಸ್ಥಾನ ಡಿ) 5ನೇ ಸ್ಥಾನ

ಉತ್ತರ: ಬಿ

4) ಕರ್ನಾಟಕ ಸರ್ಕಾರವು ‘ನವೀಕರಿಸಬಹುದಾದ ಇಂಧನ ನೀತಿ – 2022-27‘ ಪ್ರಕಟಿಸಿದೆ. ಇದಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ

1) ನವೀಕರಿಸಬಹುದಾದ ಇಂಧನ ಮೂಲಗಳಿಂದ 1,5392 ಮೆಗಾವ್ಯಾಟ್‌ನಷ್ಟು ವಿದ್ಯುತ್ ಅನ್ನು ಕರ್ನಾಟಕವು ಉತ್ಪಾದಿಸುತ್ತಿದೆ. ಮುಂದಿನ 5 ವರ್ಷಗಳಲ್ಲಿ 10 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

2) ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಬಂಡವಾಳವನ್ನು ಆಕರ್ಷಿಸುವುದು ಇದರ ಗುರಿಯಾಗಿದೆ

3) ಇತರೇ ರಾಜ್ಯಗಳಿಗೆ ವಿದ್ಯುತ್ ರಫ್ತು ಮಾಡುವುದು ಈ ನೀತಿಯ ಉದ್ದೇಶವಾಗಿದೆ

4) ನವೀಕರಿಸಬಹುದಾದ ಇಂಧನ ಪಾರ್ಕುಗಳನ್ನು ಅಭಿವೃದ್ಧಿಪಡಿಸುವುದು. ಹಸಿರು ಇಂಧನ ಕಾರಿಡಾರ್ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಗೆ ಉತ್ತೇಜಿಸುವುದನ್ನು ಈ ನೀತಿ ಹೊಂದಿದೆ.

ಉತ್ತರ ಸಂಕೇತಗಳು

ಎ) 1, ಮತ್ತು 3 ಮಾತ್ರ ಸರಿಯಿದೆ

ಬಿ) 2, ಮತ್ತು 4 ಮಾತ್ರ ಸರಿಯಿದೆ

ಸಿ) 1, 2, 3 ಮಾತ್ರ ಸರಿಯಿದೆ .

ಡಿ) 1 ರಿಂದ 4ರ ತನಕ ಎಲ್ಲವೂ ಸರಿಯಿದೆ

ಉತ್ತರ: ಎ

5) 1997ರಲ್ಲಿ ಬಿಮ್‌ಸ್ಟೆಕ್ ಆರಂಭಿಸಲಾಯಿತು. ಬಂಗಾಳಕೊಲ್ಲಿಯ ಸುತ್ತಮುತ್ತಲಿನ ಬಿಮ್‌ಸ್ಟೆಕ್ ದೇಶಗಳ 5ನೇ ಶೃಂಗಸಭೆ ಶ್ರೀಲಂಕಾದಲ್ಲಿ ನಡೆಯಿತು. ಈ ವರ್ಚುವಲ್‌ ಸಮಾವೇಶದಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರಮುಖರು ಭಾಗವಹಿಸಿದ್ದರು. ಹಾಗಾದರೆ ಬಿಮ್‌ಸ್ಟೆಕ್‌ನ ಈಗಿನ ಅಧ್ಯಕ್ಷರು ಯಾವ ದೇಶದವರು ?

ಎ) ಶ್ರೀಲಂಕಾ

ಬಿ) ಥಾಯ್ಲೆಂಡ್

ಸಿ)ಮ್ಯಾನ್ಮಾರ್

ಡಿ) ಯಾರೂ ಅಲ್ಲ

ಉತ್ತರ: ಎ

6) ಅಮೆರಿಕದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮೆಡೆಲಿನ್ ಆಲ್ಬ್ರೈಟ್‌ ಇವರು ಇತ್ತಿಚೆಗೆ ನಿಧನರಾದರು. ಇವರು ಯಾರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆ ಹುದ್ದೆಯಲ್ಲಿದ್ದರು?

ಎ) ಬರಾಕ್ ಒಬಾಮಾ ಬಿ) ಬಿಲ್ ಕ್ಲಿಂಟನ್

ಸಿ) ಜಾರ್ಜ್ ಬುಷ್ ಡಿ) ಡೊನಾಲ್ಡ್ ಟ್ರಂಪ್

ಉತ್ತರ: ಬಿ

7) ರಾಷ್ಟ್ರೀಯ ವನ್ಯಜೀವಿ ಸ್ಥಾಯಿ ಸಮಿತಿಯ 67ನೇ ಸಭೆಯು 2022ರ ಅಕ್ಟೋಬರ್ 5 ಅನ್ನುಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ, ಯಾವ ಪ್ರಾಣಿಯ ದಿನವನ್ನಾಗಿ ಆಚರಿಸಲು ನಿರ್ಣಯಿಸಿತು?

ಎ) ಕಪ್ಪೆ→→ಬಿ) ಆನೆ

ಸಿ) ಜಿಂಕೆ→ಡಿ) ಡಾಲ್ಫಿನ್

ಉತ್ತರ: ಡಿ

ಇನ್ನಷ್ಟು ಪ್ರಶ್ನೋತ್ತರ ಹಾಗೂ ‘ನಿಮಗಿದು ಗೊತ್ತೇ’– ಓದಲು prajavani.net ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT