ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನಕ್ಕೆ ಒತ್ತು ಕೊಡಿ: ಸಂಜನಾ ರಾವ್‌

ಬೆಂಗಳೂರಿನ ಸಂಜನಾ ರಾವ್‌ ಕ್ಲಾಟ್‌–ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್
Last Updated 4 ಜುಲೈ 2022, 1:55 IST
ಅಕ್ಷರ ಗಾತ್ರ

ಬೆಂಗಳೂರಿನ ಸಂಜನಾ ರಾವ್‌ ಕ್ಲಾಟ್‌–ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್. ಅಖಿಲ ಭಾರತ ಮಟ್ಟದಲ್ಲಿ 7ನೇ ರ‍್ಯಾಂಕ್‌ ಪಡೆದವರು. ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಅವರು, ಕಲಿಕೆಯ ಖುಷಿಗಾಗಿ ಕಾನೂನು ಶಿಕ್ಷಣ ಆಯ್ಕೆ ಮಾಡಿಕೊಂಡವರು. ತಮ್ಮ ಈ ಸಾಧನೆಯ ಹೆಜ್ಜೆಗಳು, ಪರೀಕ್ಷಾ ಸಿದ್ಧತೆ ಕುರಿತು ಇಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಕುಟುಂಬದ ಹಿನ್ನೆಲೆ ಏನು?

ನನ್ನ ತಂದೆ ಸಾಫ್ಟ್‌ವೇರ್‌ ಎಂಜಿನಿಯರ್‌. ತಾಯಿ ಉದ್ಯಮಿ. ನಮ್ಮ ಕುಟುಂಬದಲ್ಲಿ ಕಾನೂನು ಓದಿದವರು ಯಾರೂ ಇಲ್ಲ. ನನಗೆ ಈ ಕೋರ್ಸ್‌ ತುಂಬಾ ಇಷ್ಟವಾಯಿತು. ಹಾಗಾಗಿ ಕ್ಲಾಟ್‌ ಪರೀಕ್ಷೆ ತೆಗೆದುಕೊಂಡೆ.

ಕಾನೂನು ಓದಬೇಕು ಎಂಬ ಆಸಕ್ತಿ ಏಕೆ ಬಂದಿತು?

ನಾನು ಓದಿದ್ದು ಸಿಬಿಎಸ್‌ಇ ಪಠ್ಯಕ್ರಮ. 11ನೇ ತರಗತಿಯವರೆಗೆ ವಿಜ್ಞಾನ ಓದಿದವಳು. ಆದರೆ, ಆ ಕಲಿಕೆಯಲ್ಲಿ ನಾನು ಖುಷಿ ಅನುಭವಿಸಲಾಗಲಿಲ್ಲ. ಹಾಗಾಗಿ ನಾನು ಬೇರೆ ಕೋರ್ಸ್‌ಗಳತ್ತ ಕಣ್ಣು ಹಾಯಿಸಿದೆ. ಆಗ ಕಾನೂನು ಕಲಿಕೆಗೆ ಒಳ್ಳೆಯ ಭವಿಷ್ಯವಿದೆ ಎಂದು ಗೊತ್ತಾಯಿತು. ಆಗ ಈ ಕೋರ್ಸ್‌ಗೆ ಮನಸ್ಸು ಮಾಡಿದೆ.

ನಿಮ್ಮ ಅಧ್ಯಯನ ಕ್ರಮ ಹೇಗಿತ್ತು?

ಇಂಥ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಸ್ವಲ್ಪ ಹೆಚ್ಚೇ ತಿಳಿದುಕೊಂಡಿರಬೇಕು. ಸ್ವಲ್ಪ ಕಷ್ಟವಾಗಿಯೂ ಇರುತ್ತವೆ. ಅದರತ್ತ ಹೆಚ್ಚು ಗಮನ ಹರಿಸಿದೆ. ಸ್ನೇಹಿತರೊಂದಿಗೆ ಗುಂಪು ಅಧ್ಯಯನ ಮಾಡಿದೆ. ಅವರಿಗೂ ಕೂಡಾ ಅಖಿಲ ಭಾರತಮಟ್ಟದಲ್ಲಿ ಒಳ್ಳೆಯ ರ‍್ಯಾಂಕ್‌ಗಳು ಬಂದಿವೆ. ಸ್ವಲ್ಪ ತರಬೇತಿ ಪಡೆದೆ. 11ನೇ ತರಗತಿಯ ನಂತರ ನಾನು ಓಪನ್ ಸ್ಕೂಲ್‌ನಲ್ಲಿ ಓದಿದವಳು. ಹಾಗಾಗಿ ಈ ಪರೀಕ್ಷೆಗಾಗಿ ಪ್ರತ್ಯೇಕ ತರಬೇತಿ ಪಡೆದೆ. ಈ ಮಧ್ಯೆ ಸಾಕಷ್ಟು ಅಣಕು ಪರೀಕ್ಷೆಗಳನ್ನು ಎದುರಿಸಿದ್ದೇನೆ. ಅದು ತುಂಬಾ ಸಹಾಯವಾಯಿತು.

ಕ್ಲಾಟ್‌ ಬರೆಯುವವರಿಗೆನಿಮ್ಮ ಸಲಹೆ?

ಸಾಮಾನ್ಯ ಜ್ಞಾನದ ಕಡೆಗೆ ಗಮನ ಕೇಂದ್ರೀಕರಿಸಿ. ಅದಕ್ಕಾಗಿಯೇ ಸಾಕಷ್ಟು ವೆಬ್‌ಸೈಟ್‌ಗಳಿವೆ. ಅವುಗಳನ್ನು ಗಮನಿಸಿ. ತರಬೇತಿ ಸಂಸ್ಥೆಗಳ ನೆರವೂ ಪಡೆಯಬಹುದು. ಕೆಲವು ತರಬೇತಿ ಸಂಸ್ಥೆಯವರೂ ಅವರದ್ದೇ ಆದ ಸಾಕಷ್ಟು ಅಧ್ಯಯನ ಪರಿಕರಗಳನ್ನು ಕೊಡುತ್ತಾರೆ. ಅವುಗಳನ್ನೂ ಬಳಸಿಕೊಳ್ಳಬಹುದು. ಆನ್‌ಲೈನ್‌ ಅಧ್ಯಯನ ಹೆಚ್ಚು ಪೂರಕ.

ಮುಂದಿನ ಕನಸು?

ಸದ್ಯ ರಾಷ್ಟ್ರೀಯ ಕಾನೂನು ಶಾಲೆಗೆ ಸೇರಬೇಕು. ಇನ್ನು ಚೆನ್ನಾಗಿ ಓದಬೇಕು. ಐದು ವರ್ಷಗಳ ಬಳಿಕ ದಾರಿ ಸ್ಪಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT