ಶನಿವಾರ, ಏಪ್ರಿಲ್ 1, 2023
31 °C

ಓದಿದ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಡಲು ಸಹಾಯಕವಾಗುವ ಕೆಲವು ವಿಧಾನಗಳು

ವೆಂಕಟಸುಬ್ಬರಾವ್. ವಿ. Updated:

ಅಕ್ಷರ ಗಾತ್ರ : | |

Prajavani

ಭಾಗ-3

ಹಿಂದಿನ ಸಂಚಿಕೆಯಲ್ಲಿ ನಾವು ಬಹು ಆಯ್ಕೆ ಪ್ರಶ್ನೆಗಳ ಬಗ್ಗೆ ಕೆಲವು ವಿಚಾರಗಳನ್ನು, ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ ಹೇಗೆ ಉತ್ತರಿಸಬೇಕು, ಪರೀಕ್ಷೆಯ ಸಮಯವನ್ನು ಹೇಗೆ ವಿಂಗಡಿಸಿಕೊಂಡು ಸರಿಯಾದ ಸಮಯ ನಿರ್ವಹಣೆಯನ್ನು ಮಾಡಬೇಕು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಂಡೆವು.

ಈ ಲೇಖನದಲ್ಲಿ ನಾವು, ಈ ರೀತಿಯ ಪರೀಕ್ಷೆಗಳಿಗೆ ಓದಿದ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುವ ಕೆಲವು ಸರಳ ವಿಧಾನಗಳ ಬಗ್ಗೆ ತಿಳಿಯೋಣ.

ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಡಲು ಸಹಕಾರಿಯಾಗುವ ಹಲವಾರು ವಿಧಾನಗಳಿವೆ. ಈ ಲೇಖನದದಲ್ಲಿ ಕೆಲವು ವಿಧಾನಗಳ ಬಗ್ಗೆ ಮಾತ್ರ ತಿಳಿಯೋಣ. ಈ ವಿಧಾನಗಳು ಅನೇಕ ಬಾರಿ ಕೇವಲ ವಿಷಯಗಳನ್ನು ನೆನಪಿನಲ್ಲಿಡಲು ಮಾತ್ರ ಉಪಯುಕ್ತವಾಗಿವೆ. ಈ ವಿಧಾನಗಳನ್ನು ಉಪಯೋಗಿಸುವ ಮೊದಲು, ಪಾಠಗಳನ್ನು ಓದಿ, ತಿಳಿದು ಸರಿಯಾಗಿ ಅರ್ಥೈಸಿಕೊಳ್ಳಿ.

1. ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳನ್ನು ನೆನಪಿನಲ್ಲಿಡಲು ಈ ಕೆಳಗಿನ ವಿಧಾನಗಳು ಸಹಾಯಕವಾಗುತ್ತವೆ.

ಅ. ಪ್ರಾಸಬದ್ಧ ಪದಗಳ ವಿಧಾನ (Rhyming Technique)

ಈ ವಿಧಾನವು ಪಾಠದ ಮುಖ್ಯ ಅಂಶಗಳನ್ನು ಕ್ರಮವಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಹಳ ಸಹಕಾರಿಯಾಗಿದೆ. ಈ ವಿಧಾನದಲ್ಲಿ 1 (ಒಂದು) ನ್ನು ಮೊದಲುಗೊಂಡು ಎಲ್ಲ ಸಂಖ್ಯೆಗಳ ಸರಳವಾದ ಪ್ರಾಸಬದ್ಧ ಪದಗಳನ್ನು ರಚಿಸಿಕೊಳ್ಳಿ. ಸರಳವಾದ ಹಾಗೂ ನಿಮಗೆ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವ ಪ್ರಾಸಬದ್ಧ ಪದಗಳನ್ನು ಇಟ್ಟುಕೊಳ್ಳಬಹುದು. ಇಲ್ಲಿ ಉದಾಹರಣೆಗಾಗಿ ಕೆಲವು ಪ್ರಾಸಗಳನ್ನು ಕೊಡಲಾಗಿದೆ.

1.One – Sun

2.Two – Shoe

3.Three – Tree

4.Four – Door

5.Five – Hive

6.Six – Vicks

7.Seven – Heaven

8.Eight – Kite

9.Nine – Dine

10.Ten - Hen

ಈಗ ನೀವು ನೆನಪಿನಲ್ಲಿಟ್ಟುಕೊಳ್ಳಲು ಬಯಸುವ ಪದಗಳನ್ನು ಬರೆದುಕೊಳ್ಳಿ. ಉದಾಹರಣೆಗಾಗಿ ನೀವು ಈ ಕೆಳಗಿನ ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೀರಿ ಎಂದುಕೊಳ್ಳೋಣ.

1. Umbrella- ಛತ್ರಿ

2. Vegetables - ತರಕಾರಿ

3. Mobile Phone – ಮೊಬೈಲ್ ಫೋನ್

4. Carbon Monoxide – ಕಾರ್ಬನ್ ಮೊನಾಕ್ಸೈಡ್‌

5. Cell– ಜೀವಕೋಶ

6. Motor – ಮೋಟಾರ್

7. Mahatma Gandhiji – ಮಹಾತ್ಮ ಗಾಂಧೀಜಿ

8. Moon- ಚಂದ್ರ

9. Night - ರಾತ್ರಿ

10. Pen - ಪೆನ್

ಈಗ ಈ ಪದಗಳನ್ನು ಮೊದಲು ನೀವು ನೆನಪಿನಲ್ಲಿಟ್ಟುಕೊಂಡ ಪ್ರಾಸಪದಗಳೊಂದಿಗೆ ಹೊಂದಿಸಿ. ಅಂದರೆ, ಈ ಪದಗಳು ಮತ್ತು ಪ್ರಾಸ ಪದಗಳ ಮಧ್ಯೆ ಯಾವುದಾದರೂ ರೀತಿಯ ಸಂಬಂಧವನ್ನು ಜೋಡಿಸಿ (ಸಾಧ್ಯವಾದಷ್ಟೂ ಹಾಸ್ಯಪೂರ್ಣವಾಗಿದ್ದರೆ ಒಳ್ಳೆಯದು)

ಉದಾ : (ಕೆಳಗಿನ ಟೇಬಲ್ ನೋಡಿ)

ಹೀಗೆ ಒಮ್ಮೆ ಮಾತ್ರ ಯೋಚಿಸಿ ಅಷ್ಟೇ ! ನಿಮಗೇ ತಿಳಿಯದಂತೆ ಈ ಎಲ್ಲ ಪದಗಳೂ ಈಗ ನಿಮ್ಮ ನೆನೆಪಿನಲ್ಲಿರುತ್ತವೆ!

ಈಗ ಈ ಎಲ್ಲ ಪದಗಳನ್ನೂ ನೆನಪಿಸಿಕೊಳ್ಳಲು ಹೀಗೆ ಮಾಡಿ,

ಮೊದಲು ಕ್ರಮ ಸಂಖ್ಯೆಗಳನ್ನು ಅವುಗಳ ಪ್ರಾಸಪದಗಳನ್ನು ನೆನಪಿಸಿಕೊಳ್ಳಿ, ನಂತರ ಪ್ರಾಸಪದದೊಂದಿಗೆ ಯೋಜಿಸಿದ ಪದಗಳನ್ನು ನೆನಪುಮಾಡಿಕೊಳ್ಳಲು ಪ್ರಯತ್ನಿಸಿ, ಈ ಕೆಳಗಿನ ಪಟ್ಟಿಯಲ್ಲಿ ಖಾಲಿ ಬಿಟ್ಟ ಸ್ಥಳದಲ್ಲಿ ತುಂಬಲು ಪ್ರಯತ್ನಿಸಿ.

ಉದಾ : (ಕೆಳಗಿನ ಟೇಬಲ್ ನೋಡಿ)

ಈಗ ನೋಡಿ, ಎಷ್ಟು ಸುಲಭವಾಯಿತು! ಹೆಚ್ಚು ಪ್ರಯತ್ನದ ಅವಶ್ಯಕತೆಯೇ ಇಲ್ಲದೇ ನೆನಪಿನಲ್ಲಿಡಬೇಕಾದ ಪದಗಳು ತಾವಾಗಿಯೇ ನಿಮ್ಮ ಕಣ್ಣಮುಂದೆ ಬರುತ್ತಿವೆಯಲ್ಲವೇ!

ಮೊದಲೇ ತಿಳಿಸಿದಂತೆ ಈ ವಿಧಾನವು ಯಾವುದಾದರೂ ವಿಷಯದ ಮುಖ್ಯ ಅಂಶಗಳನ್ನು ಸರಣಿ ಕ್ರಮದಲ್ಲಿ ಕ್ರಮಬದ್ಧವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಉಪಯುಕ್ತ.

(ಮುಂದಿನ ಸಂಚಿಕೆಯಲ್ಲಿ ಆ. ಪದಗಳ ಜೋಡಣೆ ವಿಧಾನ ಇ. ಮೈಂಡ್ ಮ್ಯಾಪ್ ವಿಧಾನ ಈ. ಮುಖ್ಯ ಪದಗಳನ್ನು ಗುರುತುಹಾಕಿಕೊಂಡು ನೆನಪಿನಲ್ಲಿಟ್ಟುಕೊಳ್ಳುವ ವಿಧಾನ ಉ. ಪಾಠದ ಮುಖ್ಯ ಹಂತಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರ ಮುಖಾಂತರ ಬೇಕಾದ ಎಲ್ಲ ಅಂಶಗಳನ್ನೂ ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಧಾನಗಳ ಬಗ್ಗೆ ತಿಳಿಯೋಣ.)

(ಲೇಖಕರು: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್‌, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು