ರಮಣ್ ಕಾಂತ್ ಮುಂಜಾಲ್ ಸ್ಕಾಲರ್‌ಶಿಪ್
ಹೀರೋ ಫಿನ್‌ಕಾರ್ಪ್‌ನಿಂದ ಬೆಂಬಲಿತ ರಮಣ್ ಕಾಂತ್ ಮುಂಜಾಲ್ ಫೌಂಡೇಷನ್‌ನ ಉಪಕ್ರಮವಾಗಿದೆ. ಹಣಕಾಸು-ಸಂಬಂಧಿತ ಕೋರ್ಸ್‌ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಿದೆ.
ಅರ್ಹತೆ: ಪ್ರಥಮ ವರ್ಷದ ಬಿಬಿಎ, ಬಿಎಫ್‌ಐಎ, ಬಿ.ಕಾಂ. (ಎಚ್, ಇ), ಬಿಎಂಎಸ್, ಐಪಿಎಂ, ಬಿ.ಎ. (ಎಕನಾಮಿಕ್ಸ್). ಬಿಬಿಎಸ್, ಬಿಬಿಐ, ಬಿಎಎಫ್, ಬಿ.ಎಸ್‌ಸಿ (ಸ್ಟಾಟಿಸ್ಟಿಕ್ಸ್) ಅಥವಾ ಯಾವುದೇ ಇತರ ಹಣಕಾಸು-ಸಂಬಂಧಿತ ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳು ನೆರವು ಪಡೆಯಲು ಅರ್ಹರು.
ಅಭ್ಯರ್ಥಿಗಳು 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 80ರಷ್ಟು ಅಂಕಗಳನ್ನು ಪಡೆದಿರಬೇಕು. ವಾರ್ಷಿಕ ಕುಟುಂಬದ ಆದಾಯ ₹4 ಲಕ್ಷಗಳಿಗಿಂತ ಕಡಿಮೆ ಇರಬೇಕು.
ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ.
ಆರ್ಥಿಕ ನೆರವು: ವಾರ್ಷಿಕ ₹ 40,000ರಿಂದ
₹ 5,50,000ದವರೆಗೆ ವಿದ್ಯಾರ್ಥಿವೇತನ ಮೂರು ವರ್ಷಗಳವರೆಗೆ.
ಅರ್ಜಿ ಸಲ್ಲಿಸಲು ಕೊನೆ ದಿನ: 20-08-2024
ಅರ್ಜಿ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/RMKSP4