ಭಾನುವಾರ, ಮೇ 22, 2022
25 °C

ನಿಮಗಿದು ಗೊತ್ತೆ? ಸೆರೆಮನೆಗಳು ಆರಂಭವಾಗಿದ್ದು ಹೇಗೆ? ಇಲ್ಲಿದೆ ಕುತೂಹಲಕರ ಮಾಹಿತಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಕಾನೂನು ಮತ್ತು ಶಿಸ್ತನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಬಂಧನದಲ್ಲಿಡುವ ಸ್ಥಳಕ್ಕೆ ಸೆರೆಮನೆ ಅಥವಾ ಜೈಲು ಎಂದು ಕರೆಯಲಾಗುವುದು. ಪ್ರಾಚೀನ ಕಾಲದಲ್ಲಿ ಹಮ್ಮುರಬಿ ಕೋಡ್, ಭಾರತದ ಮನುಧರ್ಮ ಶಾಸ್ತ್ರಗಳು ಅಪರಾಧಿಗಳು, ಶಿಕ್ಷೆಯ ಬಗ್ಗೆ ಉಲ್ಲೇಖಿಸಿದ್ದವು. ರೋಮನ್ನರು ಅಪರಾಧಿಗಳನ್ನು ಶಿಕ್ಷಿಸಲು ಜೈಲುಗಳನ್ನು ಬಳಸಿದರು.

19ನೇ ಶತಮಾನಕ್ಕಿಂತ ಮೊದಲು ವಿರೋಧಿಗಳು ಮತ್ತು ಪ್ರಭಾವಶಾಲಿ ವ್ಯಕ್ತಿಗಳ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಅವರನ್ನು ಸೆರೆಮನೆಗಳಲ್ಲಿ ಇಡಲಾಗುತ್ತಿತ್ತು. ಕಾನೂನು ಮತ್ತು ಶಿಸ್ತು ಉಲ್ಲಂಘಿಸಿದವರಿಗೆ ಕಾರಾಗೃಹ ಶಿಕ್ಷೆ ನೀಡುವ ಪದ್ಧತಿ 19ನೇ ಶತಮಾನದಲ್ಲಿ ಜಾರಿಗೆ ಬಂತು. ಅಂದ ಹಾಗೆ, ವಿಶ್ವದ ಮೊಟ್ಟ ಮೊದಲ ಜೈಲು 1403 ರಲ್ಲಿ ಇಂಗ್ಲೆಂಡಿನಲ್ಲಿ ಆರಂಭವಾಯಿತು.

ಆಗ ಅದು ಅಲ್ಲಿನ ದೊರೆಯ ನಿಯಂತ್ರಣದಲ್ಲಿತ್ತು. ಜೈಲು ಶಿಕ್ಷೆ ವಿಧಿಸಿದ ನಂತರವೂ ಅಪರಾಧಿಗಳ ಸಂಖ್ಯೆ ಕಡಿಮೆಯಾಗಲಿಲ್ಲ ಎಂಬುದನ್ನು ಅರಿತ ನಂತರ, ಕೆಲವು ಘೋರ ಅಪರಾಧವೆಸಗಿದವರಿಗೆ ಮರಣದಂಡನೆ ವಿಧಿಸುವ ಕ್ರಮವೂ ಆರಂಭವಾಯಿತು.

1550ರ ನಂತರ ಇಂಗ್ಲೆಂಡ್ ಮತ್ತು ಯೂರೋಪ್‌ನಲ್ಲಿ ಅಪರಾಧಿಗಳನ್ನು ಬಂಧಿಸಲು ಸೆರೆಮನೆಗಳನ್ನು ನಿರ್ಮಿಸಲಾಯಿತು. ಇವುಗಳಲ್ಲಿ ಹೆಚ್ಚಿನ ಜೈಲುಗಳು ಬಹಳ ಕೊಳಕಾಗಿರುತ್ತಿದ್ದವು.

ಗಾಳಿ ಬೆಳಕು ಇಲ್ಲದ, ಚಿಕ್ಕಕೋಣೆಗಳು. ಕೈದಿಗಳಿಗೆ ಉತ್ತಮ ಊಟ ಸಿಗುತ್ತಿರಲಿಲ್ಲ. ಅವರನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿತ್ತು. 18ನೇ ಶತಮಾನದ ಅಂತ್ಯದಲ್ಲಿ ಜೈಲುಗಳ ಸ್ಥಿತಿ ಉತ್ತಮಪಡಿಸುವ ಒತ್ತಾಯ ಕೇಳಿ ಬಂತು.

ಅಲ್ಲಿಂದ ಜೈಲುಗಳ ಸ್ವರೂಪ ಕ್ರಮೇಣ ಬದಲಾಗುತ್ತಾ ಬಂದಿತು. ಇಂದಿನ ಜೈಲುಗಳಲ್ಲಿ ಕೆಲವು ಸೌಲಭ್ಯಗಳನ್ನು ಒದಗಿಸಲಾ ಗುತ್ತಿದೆ. ಅವರಿಗೆ ನಾನಾ ಬಗೆಯ ಉದ್ಯೋಗ,  ವೈದ್ಯಕೀಯ ಹಾಗೂ ಮನರಂಜನೆಯಂತಹ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಸನ್ಮಾರ್ಗಕ್ಕೆ ತರಲು ಪ್ರಯತ್ನಿಸಲಾಗುತ್ತದೆ. ಅಂದ ಹಾಗೆ, ರಷ್ಯಾದಲ್ಲಿರುವ ಖಾರ್‌ಖೋವ್ ಜೈಲು ವಿಶ್ವದ ಅತಿದೊಡ್ಡ ಜೈಲುಗಳಲ್ಲಿ ಒಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು